ಸಮರಸ ಡೆಸ್ಕ್: ವೀಡಿಯೋ ಕಾಲ್ ಆಪ್‌ಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಇದೆ. ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಗ್ರೂಪ್ ವೀಡಿಯೋ ಕಾಲಿಂಗ್ ಆಪ್ ಗಳು ಲಭ್ಯವಿವೆ. ಹಲವು ವೈವಿಧ್ಯಮಯವಾದ ಆಪ್‌ಗಳು ಲಭ್ಯವಿದ್ದು, ಬಳಕೆದಾರರು ಮಾತ್ರ ತಮ್ಮ ನೆಚ್ಚಿನ ಆಪ್‌ಗಳನ್ನೇ ಇನ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಜಿಯೋ ಕೂಡ ತನ್ನ ಹೊಸ ಮಾದರಿಯ ಗ್ರೂಪ್ ವೀಡಿಯೋ ಕಾಲ್ ವ್ಯವಸ್ಥೆ ಹೊಂದಿರುವ ಜಿಯೋ ಮೀಟ್ ಅಪ್ಲಿಕೇಶನ್ ಅನ್ನು ಪರಿಚಯಿಸಿತ್ತು. ಇದು ಸದ್ಯ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಆಗಿದ್ದ ಜೂಮ್ ಜೊತೆಗೆ ಪೈಪೋಟಿ ನಡೆಸುತ್ತಿದೆ. ಸದ್ಯ ಇದೀಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ.
ಹೀಗೆ ಮಾಡಿ:
ಹಂತ:1 ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಹೋಗಿ ಮತ್ತು ಜಿಯೋಮೀಟ್ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ.
ಹಂತ:2 ರಿಲಯನ್ಸ್ ಕಾರ್ಪೊರೇಟ್ ಐಟಿ ಪಾರ್ಕ್ ಲಿಮಿಟೆಡ್ ವಿತರಿಸಿದ ಅಪ್ಲಿಕೇಶನ್ ನಿಮ್ಮ ಸರ್ಚ್‌ಬಾಕ್ಸ್‌ನಲ್ಲಿ ಕಾಣಲಿದೆ.
ಹಂತ:3 ನಂತರ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಅದನ್ನು ಇನ್‌ಸ್ಟಾಲ್ ಮಾಡಿ.
ಹಂತ:4 ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಸೈನ್ ಅಪ್ ಪ್ರಕ್ರಿಯೆಯು ಸರಳವಾಗಿದ್ದು, ನಿಮ್ಮ ಮೊಬೈಲ್ ಸಂಖ್ಯೆ, ಮೊದಲ ಹೆಸರು ಮತ್ತು ಕೊನೆಯ ಹೆಸರನ್ನು ನೀವು ನಮೂದಿಸಬೇಕು.
ಹಂತ:5 ಪರಿಶೀಲನೆಗಾಗಿ ಜಿಯೋ ಒಟಿಪಿ ಕಳುಹಿಸುತ್ತದೆ ಮತ್ತು ನೀವು ವೀಡಿಯೊ ಕಾನ್ಫರೆನ್ಸಿಂಗ್ ಸೇವೆಯನ್ನು ಬಳಸಲು ಪ್ರಾರಂಭಿಸಬಹುದು.