HEALTH TIPS

ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಹತ್ತು ಎಕ್ರೆ ಕಂದಾಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭ: ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆ ನಿರ್ಧಾರ

  
           ಕಾಸರಗೋಡು: ಪೆರಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಹತ್ತು ಎಕ್ರೆ ಕಂದಾಯ ಜಾಗದಲ್ಲಿ ತರಕಾರಿ ಮಾರ್ಕೆಟ್ ಯಾರ್ಡ್ ಆರಂಭಿಸಲು ಸುಭಿಕ್ಷ ಕೇರಳಂ ಕೋರ್ ಸಮಿತಿ ಸಭೆ ನಿರ್ಧರಿಸಿದೆ. 
            ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಜರಗಿದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. 
             ಈ ಮಾರ್ಕೆಟ್ ಯಾರ್ಡ್ ನಲ್ಲಿ ರಖಂ ಆಗಿ ತಿಂಗಳ-ವಾರದ-ದಿನ ಗಣಣೆಯಲ್ಲಿ ತರಕಾರಿ ಸಂಗ್ರಹ ಮತ್ತು ಮಾರಾಟ ನಡೆಸಲಾಗುವುದು. ಅತ್ಯಾಧುನಿಕ ರೀತಿ ಈ ಮಾರ್ಕೆಟ್ ನಿರ್ಮಿಸಲಾಗುವುದು. ಕಾಸರಗೋಡು ಜಿಲ್ಲೆಯ ಎಲ್ಲ ಕಡೆಗಳಿಂದ ತರಕಾರಿ ಸಂಗ್ರಹಿಸಿ ಮಾರಾಟ ನಡೆಸುವುದು ಮತ್ತು ಜಿಲ್ಲೆಯಲ್ಲೇ ಬೇಕಾದಷ್ಟು ಬೆಳೆಯದೇ ಇರುವ ತರಕಾರಿಗಳನ್ನು ಬೇರೆಡೆಗಳಿಂದ ತರಿಸಿ ವಿತರಣೆ ನಡೆಸಲು ಈ ಮೂಲಕ ಸಾಧ್ಯವಾಗಲಿದೆ. 
      ಹಾಲು ಉತ್ಪಾದಕ ಸಂಘಗಳನ್ನು ಕೇಂದ್ರೀಕರಿಸಿ ಗ್ರಾಮೀಣ ತರಕಾರಿಗಳ ಸಂಗ್ರಹ ಮತ್ತು ಮಾರಾಟ ನಡೆಸಲೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಚಟುವಟಿಕೆ ನಡೆಸುವ ಸುಮಾರು 172 ಹಾಲು ಉತ್ಪಾದಕ ಸಂಘಗಳು ಜಿಲ್ಲೆಯಲ್ಲಿವೆ. ಈ ಕೇಂದ್ರಗಳನ್ನು ಬಳಸಿ ಕೃಷಿಕರಿಂದ ಉತ್ಪನ್ನಗಳನ್ನು ಪಡೆದು ನೇರವಾಗಿ ಗ್ರಾಹಕರಿಗೆ ತಲಪಿಸಲು ಸಾಧ್ಯವಾಗುವ ರೀತಿ ಇಲ್ಲಿ ಸೌಲಭ್ಯ ಒದಗಿಸಲಾಗುವುದು. 
        ಸುಭಿಕ್ಷ ಕೇರಳಂ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ವರದಿ ವಾಚಿಸಿದರು.  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries