HEALTH TIPS

ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣ ವ್ಯವಸ್ಥಾಪಕ ಸಹಿತ ಮೂವರು ಕಾರ್ಮಿಕರಿಗೆ ಕೋವಿಡ್

       ಕಾಸರಗೋಡು: ನಿರ್ಮಾಣದ ಅಂತಿಮ ಹಂತದಲ್ಲಿರುವ ಟಾಟಾ ಕೋವಿಡ್ ಆಸ್ಪತ್ರೆಯ ನಿರ್ಮಾಣ ವ್ಯವಸ್ಥಾಪಕರಿಗೆ ಮತ್ತು ಮೂವರು ಕಾರ್ಮಿಕರಲ್ಲಿ ಕೋವಿಡ್ ಸೋಂಖಿಗೊಳಗಾಗಿರುವುದು ತಿಳಿದುಬಂದಿದೆ. ಬಾಧಿತರಾದ ಮೂವರು ಕಾರ್ಮಿಕರೂ ಒರಿಸ್ಸಾದವರಾಗಿರುವರು. ವ್ಯವಸ್ಥಾಪಕ ಏಪ್ರಿಲ್ 7 ರಂದು ಟಾಟಾದ ಕೊಚ್ಚಿ ಘಟಕದಿಂದ ಬಂದಿದ್ದು  ತೆಲಂಗಾಣದ 35 ವರ್ಷದ ವ್ಯಕ್ತಿಯಾಗಿರುವನು.
       ಜು.23 ರಂದು ಅವರು ಸ್ವಯಂಪ್ರೇರಿತರಾಗಿ ಗಂಟಲ ದ್ರವ ಪರೀಕ್ಷೆಗೆ ಒಳಗಾದರು. ಈ ವೇಳೆ ಕೋವಿಡ್ ಬಾಧಿಸಿರುವುದು ತಿಳಿದುಬಂತು. ಜೊತೆಗೆ ದೇಹ ಕೆಲವು ದಿನಗಳಿಂದ ತೀವ್ರ ನೋವಿನಿಂದಿತ್ತೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೈರಸ್ ಹೇಗೆ ಹರಡಿತು ಎಂಬುದು ಸ್ಪಷ್ಟವಾಗಿಲ್ಲ. ನಿರ್ಮಾಣ ಕಾರ್ಯದ ಭಾಗವಾಗಿ ಇತರ ರಾಜ್ಯಗಳ ಕಾರ್ಮಿಕರೂ ಸೇರಿದಂತೆ ಸುಮಾರು 60 ಜನರು ಪ್ರಸ್ತುತ ಕೋವಿಡ್ ಆಸ್ಪತ್ರೆ ನಿರ್ಮಾಣಗೊಳ್ಳುವಲಲಿ ಕಾರ್ಯನಿರತರಾಗಿದ್ದಾರೆ. ಈ ಪೈಕಿ 15 ಟಾಟಾ ಕಾರ್ಮಿಕರು ಮತ್ತು ಉಳಿದವರು ಸ್ಥಳೀಯ ಮೂಲದವರಾಗಿರುವರು.
        ಆಸ್ಪತ್ರೆಯ ನಿರ್ಮಾಣ ಸಾಮಗ್ರಿಗಳನ್ನು ಗುಜರಾತ್, ಬಂಗಾಳ ಸಹಿತ ಉತ್ತರದ  ರಾಜ್ಯಗಳಿಂದ ತರಲಾಗಿತ್ತು. ಕಂಟೇನರ್‍ಗಳನ್ನು ಲಾರಿಗಳಲ್ಲಿ ತರಲಾಗಿತ್ತು. ಇತರ ರಾಜ್ಯಗಳ ಕಾರ್ಮಿಕರನ್ನು ಇದೀಗ ಕ್ವಾರಂಟೈನ್ ಗೆ ತೆರಳಲು ಸೂಚಿಸಲಾಗಿದೆ. ಈ ಪ್ರದೇಶದ ಜನರನ್ನು ಪರೀಕ್ಷಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜು. 31 ರೊಳಗೆ ಆಸ್ಪತ್ರೆಯನ್ನು ಕಾರ್ಯರೂಪಕ್ಕೆ ತರಲು ತಯಾರಿ ನಡೆಸುತ್ತಿರುವ ಮಧ್ಯೆ ಕಾರ್ಮಿಕರಿಗೂ ಕೋವಿಡ್ ಬಾಧಿಸಿರುವುದು ಕಳವಳಕ್ಕೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries