ಕುಂಬಳೆ: ಕುಂಬಳೆ ಗ್ರಾಮಪಂಚಾಯತ್ ನ ಆರಿಕ್ಕಾಡಿ ಕಡವತ್ ಶಾಲೆಯಲ್ಲಿ ಇಂದು(ಜು.29ರಂದು) ಬೆಳಗ್ಗೆ 10 ಗಂಟೆಗೆ ಕೋವಿಡ್ 19 ಗಂಟಲ ದ್ರವ ತಪಾಸಣೆ ಶಿಬಿರ ನಡೆಯಲಿದೆ.
ಜ್ವರ, ಕೆಮ್ಮು, ಗಂಟಲನೋವು ಇತ್ಯಾದಿ ರೋಗ ಲಕ್ಷಣ ಹೊಂದಿರುವವರ, ಕೋವಿಡ್ ರೋಗಿಗಳ ಸಂಪರ್ಕ ಹೊಂದಿದ್ದ ಮಂದಿ ಈ ಶಿಬಿರದಲ್ಲಿ ಭಾಗವಹಿಸಬೇಕು. ಆರಿಕ್ಕಾಡಿ ಪ್ರದೇಶದ ಮಂದಿಗಾಗಿ ಈ ಶಿಬಿರ ನಡೆಯಲಿದೆ. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸುವ ಮೂಲಕ ಜನ ಶಿಬಿರದಲ್ಲಿ ಭಾಗವಹಿಸಬೇಕು.
ಬೆಳಿಗ್ಗೆ 9 ಗಂಟೆಗೆ ನೋಂದಣಿ ಆರಂಭಗೊಳ್ಳಲಿದೆ. 60 ಮಂದಿಯ ದ್ರವ ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ತಿಳಿಸಿರುವರು. ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ನಡೆಸಲಾಗುತ್ತಿರುವ ಮೂರನೇ ತಪಾಸಣೆ ಶಿಬಿರ ಇದಾಗಿದೆ ಎಂದವರು ಹೇಳಿರುವರು.


