ಮಂಜೇಶ್ವರ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಮಂಜೇಶ್ವರ ತಾಲೂಕು ಮಟ್ಟದ ಆನ್ ಲೈನ್ ದೂರು ಪರಿಹಾರ ಅದಾಲತ್ ಆ.1ರಂದು, ಕಾಸರಗೋಡು ತಾಲೂಕು ಮಟ್ಟದ ಆನ್ ಲೈನ್ ದೂರು ಪರಿಹಾರ ಅದಾಲತ್ ಆ. 14ರಂದು ನಡೆಯಲಿದೆ. ಮಂಜೇಶ್ವರ ಅದಾಲತ್ ಗೆ ಸಂಬಂಧ ಪಟ್ಟ ದೂರುಗಳಿದ್ದಲ್ಲಿ ಜು.26ರಂದು ರಾತ್ರಿ 12 ಗಂಟೆಗೆ ಮುಂಚಿತವಾಗಿ, ಕಾಸರಗೋಡು ಅದಾಲತ್ ಗೆ ಸಂಬಂಧಿಸಿ ದೂರುಗಳಿದ್ದಲ್ಲಿ ಆ.10ರ ಮುಂಚಿತವಾಗಿ ಸಲ್ಲಿಸಬೇಕು.
ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಸ್ಥಳೀಯಾಡಳಿತ, ಆರೋಗ್ಯ ಇಲಾಖೆಗಳಿಗೆ ಸಂಬಂಧಿಸಿದ ವಿಚಾರಗಳ ದೂರುಗಳನ್ನು ಅದಾಲತ್ ನಲ್ಲಿ ಪರಶೀಲಿಸಲಾಗುವುದು. ಸಿ.ಎಂ.ಡಿ.ಆರ್.ಎಫ್. ಚಿಕಿತ್ಸೆ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಂಬಂಧ ದೂರುಗಳು, ಎಲ್.ಆರ್.ಎಂ. ಕೇಸುಗಳು, ಸ್ಟಾಟಿಯೂಟರಿ ರೂಪದಲ್ಲಿ ಲಭಿಸಬೇಕಿರುವ ಪರಿಹಾರ, ಭೂಹಕ್ಕು ಪತ್ರ ಅರ್ಜಿ ಇತ್ಯಾದಿಗಳನ್ನು ಅದಾಲತ್ ನಲ್ಲಿ ಪರಿಶೀಲಿಸುವುದಿಲ್ಲ.
www.editsrict.kerala.gov.in ಮೂಲಕ ಆನ್ ಲೈನ್ ರೂಪದಲ್ಲಿ, ಅಕ್ಷಯ ಸೆಂಟರ್ ಗಳ ಮೂಲಕವೂ ದೂರು ಸಲ್ಲಿಸಹುದು. ಸಂಬಂಧಪಟ್ಟ ತಾಲೂಕು ಕಚೇರಿಗಳಲ್ಲೂ, ಗ್ರಾಮ ಕಚೇರಿಗಳಲ್ಲೂ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೌಲಭ್ಯಗಳಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


