ತಿರುವನಂತಪುರ: ತಿರುವನಂತಪುರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಕಿಂ ಪರೀಕ್ಷೆಗೆ ಹಾಜರಾದ ಇಬ್ಬರು ವಿದ್ಯಾರ್ಥಿಗಳು ಮತ್ತು ಒಬ್ಬ ಪೆÇೀಷಕರಿಗೆ ಕೋವಿಡ್ ದೃಢಪಟ್ಟಿದ್ದು ವ್ಯಾಪಕ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮಾತನಾಡಿ ತಿರುವನಂತಪುರಂನಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಭಯಭೀತರಾಗದಂತೆ ಮತ್ತು ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಅಗತ್ಯ ಚಿಕಿತ್ಸೆಗೆ ಮುಂದೆ ಬರಬೇಕೆಂದು ಮಂಗಳವಾರ ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ವಿನಂತಿಸಿದರು.
ಅನೇಕ ಮಕ್ಕಳು ಮತ್ತು ಪೆÇೀಷಕರು ಆಗಮಿಸಿದ್ದ ತಿರುವನಂತಪು ತೈಕಾಟ್ ಮತ್ತು ಕರಮನ ದ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದ ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಡಿಸಲಾಗಿದೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದು ರಮೇಶ್ ಚೆನ್ನಿತ್ತಲ ತಿಳಿಸಿದರು. ಈ ಎರಡು ಸ್ಥಳಗಳು ಕಂಟೋನ್ಮೆಂಟ್ ವಲಯಗಳಾಗಿವೆ. ಈ ಸಂದರ್ಭದಲ್ಲಿ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು, ವಿಶೇಷವಾಗಿ ಈ ಎರಡು ಕೇಂದ್ರಗಳಿಗೆ ಬಂದವರು, ಯಾವುದೇ ರೋಗಲಕ್ಷಣಗಳನ್ನು ಕಂಡರೆ ಯಾವುದೇ ಭೀತಿಯಿಲ್ಲದೆ ಜಾಗರೂಕರಾಗಿರಬೇಕು ಮತ್ತು ಅಗತ್ಯ ವೈದ್ಯಕೀಯ ಪರೀಕ್ಷೆಗೆ ಮುಂದೆ ಬರಬೇಕು. ನೆನಪಿಡಬೇಕಾದ ಒಂದು ವಿಷಯವೆಂದರೆ ಯಾರೂ ನಿಮ್ಮನ್ನು ಅಪರಾಧಿ ಎಂದು ಬಿಂಬಿಸುವುದಿಲ್ಲ. ಭಯದಿಂದಾಗಿ ರೋಗಲಕ್ಷಣಗಳನ್ನು ಮರೆಮಾಚಬಾರದು ಮತ್ತು ಈ ಸಮಯದಲ್ಲಿ ಸಹಕಾರ ಮತ್ತು ಜಾಗರೂಕತೆ ಮುಖ್ಯವಾಗಿದೆ ಎಂದು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ರಮೇಶ್ ಚೆನ್ನಿತ್ತಲ ತಿಳಿಸಿರುವರು.
ಕಿಂ ಪರೀಕ್ಷೆಯನ್ನು ಮುಂದೂಡಬೇಕೆಂದು ಪ್ರತಿಪಕ್ಷಗಳು ಕರೆ ನೀಡಿದ್ದರೂ ಸರ್ಕಾರ ನಿರಾಕರಿಸಿತ್ತು.


