HEALTH TIPS

ಮತ್ತೆ ಹಾರಾಡಿದ ಕಾರುಣ್ಯ ಹೆಲಿಕಾಪ್ಟರ್- ಹೃದಯ ಹಾರಾಡಿ ತಲಪಿದ್ದು ಕೊಚ್ಚಿಗೆ ಅರ್ಧಗಂಟೆಗಳಲ್ಲಿ

 
     ಕೊಚ್ಚಿ: ರಾಜ್ಯದಲ್ಲಿ ಮಂಗಳವಾರ ಮತ್ತೊಂದು ಅಂಗಾಂಗ ದಾನಕ್ಕಾಗಿ ಪೆÇಲೀಸ್ ಹೆಲಿಕಾಪ್ಟರ್ ಬಳಸಲಾಗಿದ್ದು  ಕೊಚ್ಚಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ತಿರುವನಂತಪುರಂನಿಂದ ಹೆಲಿಕಾಪ್ಟರ್ ಮೂಲಕ ಹೃದಯ ತರಲಾಯಿತು.
        ಎರ್ನಾಕುಳಂ ಲಿಜ್ಜೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತ್ರಿಪುಣಿತ್ತರ ಮೂಲದವರಿಗೆ ಹೃದಯ ಕಸಿ ನಡೆಸಲಾಯಿತು. ಕೊಟ್ಟಾರಕರ ಮೂಲದ ಅನುಜಿತ್ ಅವರ ಹೃದಯವನ್ನು ದಾನ ಮಾಡಲಾಗಿದೆ. ಅನುಜಿತ್ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದು ತಕ್ಷಣ ಅವರ ಹೃದಯವನ್ನು ದೇಹದಿಂದ ವಿಭಜಿಸಿ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ತರಲಾಯಿತು.
       ಕಾರು ಅಪಘಾತದಲ್ಲಿ ಅನುಜಿತ್ ಮೃತಪಟ್ಟಿದ್ದಾರೆ. ಇದು ರಾಜ್ಯ ಪೆÇಲೀಸ್ ಹೆಲಿಕಾಪ್ಟರ್‍ನ ಎರಡನೇ ರಕ್ಷಣಾ ಕಾರ್ಯಾಚರಣೆಯಾಗಿದೆ. ಹೆಲಿಕಾಪ್ಟರ್‍ನ ಮೊದಲ ಹಾರಾಟ ಏರ್ ಆಂಬುಲೆನ್ಸ್ ಮೂಲಕ ಕಳೆದ ಮೇ ತಿಂಗಳಲ್ಲಿ ನಡೆದಿತ್ತು.
       ಮಾರ್ಚ್‍ನಲ್ಲಿ ರಾಜ್ಯ ಸರ್ಕಾರವು ತುರ್ತು ಸಂದರ್ಭಗಳಿಗೆ ಬಳಸಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿತ್ತು. ಈ ಬಗ್ಗೆ  ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ ಇದು ಆರ್ಥಿಕ ಹೊರೆಯಾಗುವುದಾಗಿ ಆರೋಪಿಸಿದ್ದವು.   11 ಆಸನಗಳ ಅವಳಿ ಎಂಜಿನ್ ಗಳುಳ್ಳ ಹೆಲಿಕಾಪ್ಟರ್ ನ್ನು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಾದಿರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries