HEALTH TIPS

ಹೊರರಾಜ್ಯಗಳ ಕಾರ್ಮಿಕರ ಮಾಹಿತಿ ನೋಂದಣಿಗೆ ಸೂಚನೆ


                       
     ಕಾಸರಗೋಡು: ಹೊರರಾಜ್ಯಗಳ ಕಾರ್ಮಿಕರ ಮಾಹಿತಿಗಳನ್ನು ಗುತ್ತಿಗೆದಾರರು ಮತ್ತು ಈ ಕಾರ್ಮಿಕರಿಗೆ ವಸತಿ ಒದಗಿಸಿರುವ ಕಟ್ಟಡಗಳ ಮಾಲೀಕರು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೋಂದಣಿ ನಡೆಸಬೇಕು ಎಂದು ಜಿಲ್ಲಾ ಲೇಬರ್ ಅಧಿಕಾರಿ ತಿಳಿಸಿರುವರು.
    ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಕಾರ್ಮಿಕರ ಹೆಸರು, ಆಧಾರ್ ಕಾರ್ಡ್ ನಂಬ್ರ, ಮೊಬೈಲ್ ನಂಬ್ರ, ಸದ್ರಿ ವಸತಿ ಹೂಡಿರುವ ಸ್ಥಳದ ವಿಳಾಸ ಇತ್ಯಾದಿ ಮಾಹಿತಿಗಳನ್ನು ಕರಾರುದಾರರು ಮತ್ತು ಕಟ್ಟಡ ಮಾಲೀಕರು ತುರ್ತಾಗಿ ನೋಂದಣಿ ನಡೆಸಬೇಕು.
    ಈ ಸಂಬಂಧ ಹೆಚ್ಚುವರಿ ಮಾಹಿತಿಗಾಗಿ ಕಾಸರಗೋಡು ಜಿಲ್ಲಾ ಲೇಬರ್ ಆಫೀಸ್( ದೂರವಾಣಿ ಸಂಖ್ಯೆ: 04994-256950), ಕಾಸರಗೋಡು ಸಹಾಯಕ ಲೇಬರ್ ಆಫೀಸರ್ ಕಚೇರಿ(04994-257850), ಕಾಞಂಗಾಡ್ ಸಹಾಯಕ ಲೇಬರ್ ಆಫೀಸರ್ ಕಚೇರಿ(0467-2204602) ಗಳನ್ನು ಸಂಪರ್ಕಿಸಬಹುದು.
       ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಲೇಬರ್ ಆಫೀಸರ್ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries