HEALTH TIPS

16 ವರ್ಷದ ಬಾಲಕಿಯ ಮೇಲೆ ಏಳು ಮಂದಿ ಅತ್ಯಾಚಾರ, ತಂದೆ ಸೇರಿದಂತೆ ನಾಲ್ವರನ್ನು ಬಂಧನ

 
      ಕಾಸರಗೋಡು: 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ನೀಲೇಶ್ವರಂನ ಅಳಿಂತಲ ಎಂಬಲ್ಲಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ನೀಲೇಶ್ವರಂನ ರಿಯಾಜ್, ಮುಹಮ್ಮದಾಲಿ ಹಾಗೂ  ಇಜಾಸ್ (20) ಅವರನ್ನು ಬಂಧಿಸಲಾಗಿದೆ.
        ಹುಡುಗಿ ಕಳೆದ ಒಂದು ತಿಂಗಳಿಂದ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಳು. ಮಗುವಿನ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಗುವಿನ ಸಂಬಂಧಿಕರು ಈ ಬಗ್ಗೆ ವಿಚಾರಿಸಿದಾಗ ಲೈಂಗಿಕ ಕಿರುಕುಳದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಬಂಧಿಕರು  ನಿಲೇಶ್ವರಂ ಪೆÇಲೀಸರಿಗೆ ಮಾಹಿತಿ ನೀಡಿದರು. ಬಾಲಕಿ ಪೆÇಲೀಸರಿಗೆ ಘಟನೆಯ ಬಗ್ಗೆ ವಿವರಿಸಿ ದೂರು ನೀಡಿದಳು. ಮಗುವಿನ ತಂದೆ ಮೂಲತಃ ಸುಳ್ಯ ತಾಲೂಕು ಗೂನಡ್ಕ ಮೂಲದವನಾಗಿದ್ದು ಕಾಞಂಗಾಡ್ ತೈಕಡಪ್ಪುರ ಮದ್ರಸಾ ದಲ್ಲಿ ಶಿಕ್ಷಕನಾಗಿರುವನು. ಮೊದಲ ಹೆಂಡತಿಯ ಪುತ್ರಿಗೆ ಇದೀಗ ಕಿರುಕುಳ ನೀಡಲಾಗಿದೆ. ಪುತ್ರಿ ಎಂಟನೇ ತರಗತಿಯಲ್ಲಿದ್ದಾಗಿನಿಂದ ಮಗುವನ್ನು ಪೀಡಿಸುತ್ತಿದ್ದನೆಂದು ದೂರಲಾಗಿದೆ. ಆದರೆ ಬೆದರಿಕೆಯ ಕಾರಣ ಬಾಲಕಿ ಬಹಿರಂಗಪಡಿಸಿರಲಿಲ್ಲ. ಎರಡು ವರ್ಷಗಳಿಂದ ತನ್ನ ಏಳು ಮಂದಿ  ಸ್ನೇಹಿತರಿಂದ ಕಿರುಕುಳ ನೀಡಲಾಗಿದೆ ಎಂದು ಬಾಲಕಿ ಪೆÇಲೀಸರಿಗೆ ತಿಳಿಸಿದ್ದಾಳೆ. ಇದರೊಂದಿಗೆ ಪೆÇಲೀಸರು ನಾಲ್ವರನ್ನು ಬಂಧಿಸಿದ್ದಾರೆ.
      ಬಾಲಕಿಯನ್ನು ಮಂಗಳವಾರ ಮಧ್ಯಾಹ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಬಾಲಕಿಯ ತಂದೆ ಹಲವಾರು ಪೆÇೀಕ್ಸೋ ಪ್ರಕರಣಗಳು ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿಯಾಗಿರುವನೆಂದೂ  ಪೆÇಲೀಸರು ತಿಳಿಸಿದ್ದಾರೆ.  ತಾಯಿಯ ಅರಿವಿನೊಂದಿಗೆ ಕಿರುಕುಳ ನಡೆದಿದೆಯೆಂಬ ಆಘಾತಕಾರಿ ಅಂಶವನ್ನೂ ಬಾಲಕಿ ತಿಳಿಸಿದ್ದಾಳೆ. ತಾಯಿಯ ಮೇಲೂ ದೂರು ದಾಖಲಿಸುವ ಸಾಧ್ಯತೆ ಇದೆಯೆಂದು ಪೋಲೀಸರು ತಿಳಿಸಿದ್ದಾರೆ. ಬಾಲಿಕ ಗರ್ಭಿಣಿಯಾಗಿ ಗರ್ಭಪಾತವಾಗಿದೆ ಎಂದು ತಿಳಿದ ಬಳಿಕ ಸೋದರ ಮಾವ ಪೆÇಲೀಸರಿಗೆ ದೂರು ನೀಡಲು ಮುಂದೆ ಬಂದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಸಂಜೆ ಬಾಲಕಿಯ ಹೇಳಿಕೆಯನ್ನು ಹೊಸದುರ್ಗ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ. ಪ್ರಸ್ತುತ ಬಾಲಕಿ ಸೋದರ ಮಾವನ ಸುಪರ್ದಿಯಲ್ಲಿರುವಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries