ಮಂಜೇಶ್ವರ: ಪಿಕ್ ಅಪ್ ವಾಹನವೊಂದರಲ್ಲಿ ಸಾಗಿಸಲಾಗುತ್ತಿದ್ದ ಒಂದು ಕ್ವಿಂಟಾಲ್(ನೂರು ಕಿಲೋಗ್ರಾಂ) ಗಾಂಜಾ ಚೀಲಗಳನ್ನು ಮಂಜೇಶ್ವರ ಪೋಲೀಸರು ವಶಪಡಿಸಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮಂಜೇಶ್ವರ ಪೋಲೀಸ್ ಠಾಣಾ ಹೆಚ್ಚುವರಿ ಠಾಣಾಧಿಕಾರಿ ಬಾಲೇಂದ್ರನ್ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯ ಮೇರೆಗೆ ಮಂಗಳವಾರ ಸಂಜೆ ಗೌಪ್ಯವಾಗಿ ನಡೆಸಿದ ವಾಹನ ಪರಿಶೋಧನೆಯಲ್ಲಿ ಭಾರೀ ಮೌಕಲ್ಯದ ಗಾಂಜಾ ವಶಪಡಿಸಲಾಯಿತು. ರಾ.ಹೆದ್ದಾರಿ ಕುಂಜತ್ತೂರು ಪರಿಸರದಿಂದ ವಾಹನ ಪರಿಶೋಧನೆಯಲ್ಲಿ ನಿರತರಾಗಿದ್ದ ಪೋಲೀಸ್ ತಂಡ ಪಿಕ್ ಅಪ್ ವಾಹನವೊಂದನ್ನು ತಡೆಹಿಡಿದು ನಿಲ್ಲಿಸಲು ಸೂಚಿಸಿದರೂ ತಪ್ಪಿಸಿಉ ಪರಾರಿಯಾಗಲೆತ್ನಿಸಿತು. ಅಲ್ಪ ದೂರದಲ್ಲಿ ವಾಹನವನ್ನು ಬಿಟ್ಟು ಅದರಲ್ಲಿದ್ದ ಇಬ್ಬರು ಓಡಿ ಪರಾರಿಯಾದರು. ಪರಿಶೀಲಿಸಿದಾಗ ಒಂದು ಕ್ವಿಂಟಾಲ್ ಗಾಂಜಾ ಚೀಲಗಳು ಪತ್ತೆಯಾಯಿತು. ಗಾಂಜಾ ಸಹಿತ ವಾಹನ ಪೋಲೀಸ್ ವಶದಲ್ಲಿದ್ದು ಓಡಿ ಪರಾರಿಯಾದವರ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.


