HEALTH TIPS

ಸ್ವಪ್ನ ಎಂಬ ಚಿನ್ನದ ರಾಣಿಯ ಇತಿಹಾಸವೇ ರೋಚಕ- ಕೇರಳ ಸಿಎಂ ಕುರ್ಚಿ ಗಡಗಡ!-ಏನು ಓದಿ ನೋಡಿ!

           ತಿರುವನಂಪುರ: ಸ್ವಪ್ನಾ ಸುರೇಶ್‌… ಕೆಲ ವರ್ಷಗಳ ಹಿಂದೆ ಈಕೆ ಯಾರೆಂಬುದೇ ತಿಳಿದಿರಲಿಲ್ಲ. ಆದರೆ ಇದೀಗ ಇವಳ ಹೆಸರು ಬಹುತೇಕ ಗಣ್ಯರ ಅದರಲ್ಲಿಯೂ ರಾಜಕೀಯ ಧುರೀಣರ ಬಾಯಲ್ಲಿ ಓಡಾಡುತ್ತಿದೆ.
           ಕೇರಳದ  ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ 30 ಕೆ.ಜಿ. ಚಿನ್ನದ ಕಳ್ಳಸಾಗಣೆಯಲ್ಲಿ ಸಿಲುಕಿಬಿದ್ದಿರುವ ಈ ಸುಂದರಿಯ ಹೆಸರೀಗ ಕೇರಳದಲ್ಲಿ ಸಖತ್‌ ಫೇಮಸ್‌ ಆಗಿದೆ. ಅಷ್ಟೇ ಏಕೆ, ಇವರಿಂದಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಖುರ್ಚಿಯೂ ಗಡಗಡ ಅಲ್ಲಾಡುತ್ತಿದೆ.
          ಇಷ್ಟೆಲ್ಲಾ ಸಾಧ್ಯವಾದದ್ದು ಹೇಗೆ ಎನ್ನುವುದನ್ನು ತಿಳಿಯುವ ಮುನ್ನ, ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೆಯ ಪತಿಯ ಜತೆ ವಾಸವಾಗಿರುವ ಸ್ವಪ್ನಾ ಸುರೇಶ್‌ ಅವರ ಇತಿಹಾಸ ಒಮ್ಮೆ ನೋಡಬೇಕು. ಅಬುಧಾಬಿಯ ರಾಜಮನೆತನದ ಸಂಬಂಧ ಹೊಂದಿರುವ ಸಂಸ್ಥೆಯಲ್ಲಿ ಸ್ವಪ್ನಾ ತಂದೆ ಕೆಲಸ ಮಾಡುತ್ತಿದ್ದರಿಂದ ಇವರ ಶಿಕ್ಷಣ ಎಲ್ಲಾ ನಡೆದದ್ದು ಕೊಲ್ಲಿಯ ರಾಷ್ಟ್ರಗಳಲ್ಲೇ. ಇದೇ ಕಾರಣಕ್ಕೆ ಅರೇಬಿಕ್ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ ಸ್ವಪ್ನಾ. ಇದೇ ಇವರನ್ನು ಯುಎಇ ಕಾನ್ಸುಲೇಟ್‌ಗೂ ಪ್ರವೇಶಿಸುವಂತೆ ಮಾಡಿತು.
         ಸಾಕಷ್ಟು ಜಾಣೆಯೂ ಆಗಿರುವ ಸ್ವಪ್ನಾ ನಂತರ ಕೇರಳದ ಐಟಿ ಸ್ಪೇಸ್ ಪಾರ್ಕ್ ಯೋಜನೆಯೊಂದಿಗೆ ಸಂಪರ್ಕ ಅಧಿಕಾರಿಯಾಗಿ ನೇಮಕಗೊಂಡರು. ಇದರ ಉಸ್ತುವಾರಿ ವಹಿಸಿಕೊಂಡಿರುವ ಐಟಿ ಕಾರ್ಯದರ್ಶಿ ಎಂ.ಶಿವಕುಮಾರ್. ಸ್ವಪ್ನಾ ಪೆರುಕಡ ಬಳಿಯ ಮುದವನ್ಮುಗಲ್‌ನಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿಗೆ ಶಿವಕುಮಾರ್ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅವರ ಕಚೇರಿಯ ಅಧಿಕೃತ ಕಾರು ಪಾರ್ಕಿಂಗ್‌ ಜಾಗದಲ್ಲಿಯೇ ಅನೇಕ ದಿನಗಳವರೆಗೆ ಇರುತ್ತಿತ್ತು. ಇದರಿಂದ ಅವರಿಬ್ಬರ ಸಂಬಂಧದ ಬಗ್ಗೆ ಫ್ಲ್ಯಾಟ್‌ನ ಜನರಿಗೆ ಅನುಮಾನ ಶುರುವಾಗತೊಡಗಿತು.
       ಶಿವಕುಮಾರ್‌ ಅವರನ್ನು ಒಳಗಡೆ ಬಿಡದಂತೆ ಫ್ಲ್ಯಾಟ್‌ನ ಇತರ ಮಾಲೀಕರು ಸೆಕ್ಯುರಿಟಿಗೆ ಹೇಳಿದರು. ಸೆಕ್ಯುರಿಟಿ ಶಿವಕುಮಾರ್‌ ಅವರನ್ನು ತಡೆಯುತ್ತಿದ್ದಂತೆಯೇ ಭಾರಿ ಜಗಳವೂ ಆಯಿತು. ಈ ಪ್ರಕರಣ ನಂತರ ಪೊಲೀಸ್‌ ಠಾಣೆ ಮೆಟ್ಟಿಲೇರಿ ವಿವಾದ ಬಗೆಹರಿಸಿಕೊಳ್ಳಲಾಯಿತು. ನಂತರ ಭಾರತೀಯ ದೂತಾವಾಸದೊಂದಿಗಿನ ಕೆಲಸವನ್ನು ತ್ಯಜಿಸಿದ ಸ್ವಪ್ನಾ 2018ರಲ್ಲಿ ಕೆಲಸವಿಲ್ಲದೇ ಅಲ್ಲಲ್ಲಿ ಅಡ್ಡಾಡಿದರು. ಇದೇ ವೇಳೆ ಹಲವಾರು ಗಣ್ಯರ ಸಂಪರ್ಕಗಳನ್ನು ಅಭಿವೃದ್ಧಿಪಡಿಸಿದರು, ಇದರಿಂದ ಐಟಿ ಸೆಲ್‌ನ ಸಂಪರ್ಕ ಅಧಿಕಾರಿಯಾಗಿ ಕೆಲಸ ಗಿಟ್ಟಿಸಿಕೊಂಡರು.
        ಇವಿಷ್ಟು ಸ್ವಪ್ನಾ ಹಿನ್ನೆಲೆ. ಇದೀಗ ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಬ್ಯಾಗ್‌ ಜತೆ ಸ್ವಪ್ನಾ ಹೆಸರು ಥಳಕು ಹಾಕಿಕೊಂಡಿದೆ. ನಿನ್ನೆ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಇಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನವು ಪತ್ತೆಯಾಗಿತ್ತು. ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’ನಲ್ಲಿ ಈ ಚಿನ್ನ ಸಿಕ್ಕಿತ್ತು.
        ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ಇಲ್ಲಿಗೆ ಹೇಗೆ ಬಂತು? ಅದೂ ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌ನಲ್ಲಿ ಇದು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುವ ಸಂದರ್ಭದಲ್ಲಿ ಸ್ವಪ್ನಾ ಸುರೇಶ್‌ ಹೆಸರು ಕೇಳಿಬಂದಿದೆ. ಈಕೆಯ ಹೆಸರು ಕೇಳಿಬರುತ್ತಿದ್ದಂತೆಯೇ, ಮುಖ್ಯಮಂತ್ರಿ ಕಾರ್ಯಾಲಯದಿಂದ ದೂರವಾಣಿ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ, ಕಸ್ಟಮ್ಸ್‌ ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದು, ಇದೀಗ ಆ ನಿಟ್ಟಿನಲ್ಲಿಯೇ ತನಿಖೆ ಶುರುವಾಗಿದೆ. ಸ್ವಪ್ನಾ ಸುರೇಶ್ ಅಚ್ಚರಿಯ ರೀತಿಯಲ್ಲಿ ಕಾಣೆಯಾಗಿದ್ದಾರೆ. ಇವರನ್ನು ಬಂಧನದಿಂದ ತಪ್ಪಿಸುವ ಉದ್ದೇಶದಿಂದ ಉದ್ದೇಶಪೂರ್ವಕಾಗಿ ಸುರಕ್ಷಿತ ಜಾಗದಲ್ಲಿ ರವಾನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
          ಈ ವಿಚಾರವಾಗಿ ಬಿಜೆಪಿಯು ನೇರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮೇಲೆ ಬೊಟ್ಟು ಮಾಡಿ ತೋರಿಸಿದೆ. ಸ್ವಪ್ನಾ ಮುಖ್ಯಮಂತ್ರಿ ಜತೆ ಅತ್ಯಂತ ನಿಕಟವಾಗಿರುವ ವಿಷಯ ಇದೀಗ ಗುಟ್ಟಾಗಿ ಉಳಿದಿಲ್ಲ. ಆದ್ದರಿಂದ ಚಿನ್ನದ ಕಳ್ಳವ್ಯವಹಾರದ ಹಿಂದೆ ಸ್ವಪ್ನಾ ಜತೆ ಮುಖ್ಯಮಂತ್ರಿ ಕಾರ್ಯಾಲಯದ ಹೆಸರೂ ಥಳಕು ಹಾಕಿಕೊಂಡಿರುವ ಕಾರಣ, ಸದ್ಯ ಪಿಣರಾಯ್‌ ವಿಜಯನ್‌ ಅವರ ಸಿಎಂ ಗದ್ದುಗೆ ಗಡಗಡ ಎನ್ನುತ್ತಿದೆ. ‌
     ಈ ನಡುವೆಯೇ, ಪಿಣರಾಯಿ ವಿಜಯನ್ ಅವರು ಸ್ವಪ್ನಾ ಸುರೇಶ್ ಅವರೊಂದಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅವರು ತೀರಾ ನಿಕಟವರ್ತಿಯಾಗಿರುವ ಚಿತ್ರವನ್ನು ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ದೃಶ್ಯ ಇದೀಗ ವೈರಲ್‌ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries