ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಜು.17ರಿಂದ ಸಾರ್ವಜನಿಕ ಸಂಚಾರಕ್ಕೆ ಕಟ್ಟುನಿಟ್ಟು ಏರ್ಪಡಿಸಲಾಗಿದೆ. ಆದರೆ ನಿಷೇಧ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಆಯಾ ಪ್ರದೇಶಗಳ ಪೆÇಲೀಸ್ ಠಾಣೆಗಳ ಸ್ಟೇಷನ್ ಹೌಸ್ ಆಫೀಸರ್ ಗಳು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರ ಆದೇಶ ಪ್ರಕಾರ ಕಟ್ಟುನಿಟ್ಟು ಏರ್ಪಡಿಸುವರು. ಕೋವಿಡ್ ಸೋಂಕು ಹೆಚ್ಚಳ ನಿಯಂತ್ರಣ ನಿಟ್ಟಿನಲ್ಲಿ ಜು.31 ವರೆಗೆ ಈ ಕಟ್ಟುನಿಟ್ಟು ಜಾರಿಯಲ್ಲಿರುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ., ಖಾಸಗಿ ಬಸ್ ಗಳು ಸಂಚಾರ ನಡೆಸಬಹುದಾದರೂ, ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಬಸ್ ನಿಲುಗಡೆ, ಪ್ರಯಾಣಿಕರ ಹೇರಿಕೆ ನಡೆಸಕೂಡದು. ಈ ಝೋನ್ ಗಳಲ್ಲಿ ಆಟೋ, ಟ್ಯಾಕ್ಸಿ ಸ್ಟಾಂಡ್ ಗಳಿಗೆ ಅನುಮತಿ ಇಲ್ಲ. ಆದರೆ ಈ ಹಾದಿ ಮೂಲಕ ವಾಹನಗಳು ಸಂಚಾರ ನಡೆಸಬಹುದು. ಈ ವೇಳೆ ವಾಹನಗಳಲ್ಲಿ ಪ್ರಯಾಣಿಕರ ಮತ್ತು ಚಾಲಕರ ನಡುವಣ ಸೀಟುಗಳನ್ನು ಶೀಲ್ಡ್ ಇರಿಸಿ ವಿಂಗಡಿಸಿರಬೇಕು ಎಂದವರು ಹೇಳಿರುವರು.


