ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಿಗೆ ನಿಕಟರಾಗಿದ್ದು ನೆರವಾಗಿರುವರೆಂಬ ಆರೋಪ ಹೊತ್ತು ಕಸ್ಟಮ್ಸ್‍ನಿಂದ ತೀವ್ರ ವಿಚಾರಣೆ ಎದುರಿಸಿದ ಮಾಜಿ ಐಟಿ ಕಾರ್ಯದರ್ಶಿ ಎಂ.ಶಿವಶಂಕರ್ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ನೇಮಿಸುವಲ್ಲಿ ಶಿವಶಂಕರ್ ತೀವ್ರ ಕರ್ತವ್ಯ ಲೋಪವೆಸಗಿ ಬೇಜವಾಬ್ದಾರರಾಗಿ ವರ್ತಿಸಿದರೆಂದು ಸರ್ಕಾರ ಗುರುವಾರ ತಿಳಿಸಿದೆ.
ಶಿವಶಂಕರ್ ಅವರ ತನಿಖಾ ವರದಿಯನ್ನು ಕೂಡಲೇ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ. ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿಯಿಂದ ವಿಚಾರಣೆ ನಡೆಸಲಾಗುತ್ತಿದೆ. ಶಿವಶಂಕರ್ ಅವರು ನಾಗರಿಕ ಸೇವಾ ಅಧಿಕಾರಿಯೊಬ್ಬರು ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವರದಿ ಬಂದ ಕೂಡಲೇ ಶಿಸ್ತು ಕ್ರಮದ ರೂಪು ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ವರದಿಯ ಪ್ರಕಾರ, ಶಿವಶಂಕರ್ ಅವರು ದೂತಾವಾಸದ ಅಧಿಕಾರಿಯೊಂದಿಗೆ ಅನಧಿಕೃತ ಸಂಬಂಧ ಹೊಂದಿದ್ದರು ಮತ್ತು ಸ್ವಯಂ ಆಗಿ ಅಧಿಕಾರ ವ್ಯಾಪ್ತಿಯನ್ನು ಮೀರಿ ಕೆಲವು ನೇಮಕಾತಿ ನಡೆಸಿರುವರು. ಶಿವಶಂಕರನ್ ಸೇವೆಯಲ್ಲೇ ಮುಂದುವರಿಸುವುದು ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದೂ ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಪಿಎಂ ಪಕ್ಷದ ಅಧಿಕೃತರೊಂದಿಗೆ ನಡೆಸಿದ ಮಾತುಕತೆಯಲ್ಲಿ ವ್ಯಕ್ತಪಡಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶಿವಶಂಕರ್ ವಿಷಯದ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಿದ್ದು ಅಂತಿಮ ತನಿಖಾ ವರದಿಗಳಿಗೆ ಕಾಯಲಾಗುತ್ತಿದೆ.
ಈ ಮಧ್ಯೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಮಂಜೇರಿಯ ಅನ್ವರ್ ಮತ್ತು ವೆಂಗಾರ ಮೂಲದ ಸಯತಲವಿ ಅವರನ್ನು ಬಂಧಿಸಲಾಗಿದೆ. ಇಬ್ಬರನ್ನೂ ಬುಧವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ತಿರುವನಂತಪುರ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡಲು ಇಬ್ಬರು 8 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.