ಬೀಜಿಂಗ್: ಚೀನಾ ಸರ್ಕಾರವು ಮಹಾಮಾರಿ ಕರೊನಾ ವೈರಸ್? ಸ್ಪೋಟದ ವಿಚಾರವನ್ನು ಸಂಪೂರ್ಣ ಮುಚ್ಚಿಹಾಕಿದೆ ಎಂದು ಚೀನಾದ ಪ್ರಖ್ಯಾತ ವೈರಾಲಜಿಸ್ಟ್ (ಸೂಕ್ಷ್ಮರೋಗಾಣು ಶಾಸ್ತ್ರಜ್ಞ) ತಿಳಿಸಿದ್ದು, ಕರೊನಾ ವಿರುದ್ಧ ಎಚ್ಚರಿಕೆ ನೀಡಿದವರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿತ್ತು ಎಂಬುದು ತಿಳಿದಿದ್ದರಿಂದ ಬಲವಂತವಾಗಿ ಹಾಂಗ್?ಕಾಂಗ್?ಗೆ ಫಲಾಯನ ಮಾಡಬೇಕಾಯಿತು ಎಂದಿದ್ದಾರೆ.
ಹಾಂಗ್ ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ವೈರಾಲಜಿಸ್ಟ್ ಹಾಗೂ ಇಮ್ಯುನಾಲಜಿ (ರೋಗನಿರೋಧಕ ಶಾಸ್ತ್ರ) ತಜ್ಞರಾಗಿರುವ ಡಾ. ಲಿಮೆಂಗ್ ಯಾನ್, ಕೊರೊನಾ ಹರಡುವುದಕ್ಕೂ ಮೊದಲೇ ಚೀನಾ ಸರ್ಕಾರಕ್ಕೆ ಎಲ್ಲವೂ ತಿಳಿದಿತ್ತು ಎಂದು ಸ್ಪೋಟಕ ಮಾಹಿತಿ ಹೊರಗೆಡವಿದ್ದಾರೆ.
ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೊರೊನಾ ಕುರಿತಾದ ತಮ್ಮ ಸಂಶೋಧನೆ ಬಗ್ಗೆ ತಿಳಿಸಿದ್ದಾರೆ. ತಮ್ಮ ಸಂಶೋಧನೆ ಕರೊನಾ ವೈರಸ್?ನಿಂದ ಹಲವರ ಜೀವವನ್ನು ಉಳಿಸುತ್ತದೆ ಎಂದು ನಂಬಿರುವ ಯಾನ್ ತಮ್ಮ ಜೀವಕ್ಕೆ ತೊಂದರೆ ಬಂದರು ಪರವಾಗಿಲ್ಲ ಎಂದು ಕೊರೊನಾ ಕುರಿತಾದ ಕೆಲ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಳ್ಳಲು ಅಮೆರಿಕಕ್ಕೆ ಹಾರಿದ್ದಾರೆ. ಅಂದಹಾಗೆ ಯಾನ್? ಮರಳಿ ಹಾಂಗ್ ಕಾಂಗ್ ಬರುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.
ಕೊರೊನಾ ಕುರಿತಾಗಿ ಅಧ್ಯಯನ ನಡೆಸಿದ ಮೊದಲ ವಿಜ್ಞಾನಿ ನಾನೇ ಎಂದು ಹೇಳಿಕೊಂಡಿರುವ ಯಾನ್, ಚೀನಾದ ಮುಖ್ಯ ಭೂಭಾಗದಲ್ಲಿ ಸಾರ್ಸ್ ರೀತಿಯ ವೈರಾಣು ಪ್ರಕರಣಗಳು ಡಿಸೆಂಬರ್ ನಲ್ಲೇ ಕಂಡುಬಂದಿದ್ದವು. ಇದನ್ನು ಪರಿಶೀಲಿಸಲು ಹಾಂಗ್ ಕಾಂಗ್ ಯೂನಿವರ್ಸಿಟಿ ಮೇಲ್ವಿಚಾರಕರಾದ ಡಾ ಲೀ ಪೂನ್ ಎಂಬುವರನ್ನು 2019ರ ಡಿಸೆಂಬರ್ ನಲ್ಲಿ ಕೇಳಲಾಯಿತು. ಆದರೆ, ಹಾಂಗ್ ಕಾಂಗ್ ಸೇರಿದಂತೆ ವಿದೇಶಿ ಸಂಶೋಧಕರು ಚೀನಾದಲ್ಲಿ ವೈರಾಣು ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಸರ್ಕಾರ ಅನುಮತಿ ನಿರಾಕರಿಸಿತು. ಬಳಿಕ ನಮ್ಮ ಸ್ನೇಹಿತರ ಮೂಲಕ ಹೆಚ್ಚಿನ ಮಾಹಿತಿ ಕಲೆಹಾಕಲು ಆರಂಭಿಸಿದೆ ಎಂದು ಯಾನ್ ಹೇಳಿದ್ದಾರೆ. ಚೀನಾ ಸರ್ಕಾರಕ್ಕೆ ಎಲ್ಲೂ ಮೊದಲೇ ತಿಳಿದಿತ್ತು. ಹೀಗಾಗಿಯೇ ಎಚ್ಚರಿಕೆ ನೀಡಿದ ಕೆಲವರು ನಿಗೂಢವಾಗಿ ಸಾವಿಗೀಡಾದರು ಎಂದು ಹೇಳಿದ್ದಾರೆ.
ಚೀನಾ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಎಚ್ ಒ) ನಡೆ ನನಗೇನು ಆಶ್ಚರ್ಯ ತರಲಿಲ್ಲ. ಅಂತಾರಾಷ್ಟ್ರೀಯ ಸಂಘಟನೆಯಂತಹ ಡಬ್ಲ್ಯುಎಚ್ ಒ ಹಾಗೂ ಚೀನಾ ಸರ್ಕಾರ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ನಡುವಿನ ಭ್ರಷ್ಟಾಚಾರ ನನಗೆ ಮೊದಲೇ ತಿಳಿದಿತ್ತು. ಚೀನಾ ಕರೊನಾ ಸ್ಟೋಟವನ್ನು ಮುಚ್ಚಿಹಾಕಿದೆ ಎಂಬುದನ್ನು ಡಬ್ಲ್ಯು ಎಚ್ ಒ ಹಾಗೂ ಚೀನಾ ಸರ್ಕಾರ ಬಲವಾಗಿ ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ಯಾನ್ ಸದ್ಯ ಅಮೆರಿಕದಲ್ಲಿದ್ದು, ತನ್ನ ಜೀವಕ್ಕೆ ಅಪಾಯ ಎದುರಾಗಬಹುದು ಎಂಬ ಅಪಾಯದಲ್ಲಿದ್ದಾರೆ. ಚೀನಾ ಸರ್ಕಾರವು ತನ್ನ ಖ್ಯಾತಿಯನ್ನು ಹಾಳುಮಾಡಲು, ತನ್ನ ಕುಟುಂಬವನ್ನು ಬೆದರಿಸಲು ಮತ್ತು ತನ್ನ ವಿರುದ್ಧ ಸೈಬರ್ ದಾಳಿ ನಡೆಸಲು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಂಗ್ ಕಾಂಗ್ ವಿಶ್ವವಿದ್ಯಾಲಯವು ಸಹ ತಮ್ಮ ವೆಬ್‍ಸೈಟ್ ನಲ್ಲಿ ಯಾನ್ ಅವರ ಪುಟವನ್ನು ತೆಗೆದುಹಾಕಿದೆ. ಅಲ್ಲದೆ, ಡಾ. ಲಿ ಮೆಂಗ್ ಯಾನ್ ಇನ್ನು ಮುಂದೆ ವಿಶ್ವವಿದ್ಯಾಲಯದ ಸಿಬ್ಬಂದಿ ಸದಸ್ಯರಾಗಿಲ್ಲ ಎಂದು ಹೇಳಿರುವುದಾಗಿ ಫಾಕ್ಸ್ ನ್ಯೂಸ್ ಗೆ ತಿಳಿಸಿದ್ದಾರೆ.


