HEALTH TIPS

ಉಕ್ಕಿನಡ್ಕ ಆಸ್ಪತ್ರೆಯಲ್ಲಿ ಕೋವಿಡ್ ಮುಕ್ತರಾದವರನ್ನು ಒಪ್ಪನದ ಮೂಲಕ ಬೀಳ್ಕೊಟ್ಟ ಕೋವಿಡ್ ರೋಗಿಗಳು

           ಕಾಸರಗೋಡು: ಮಲಬಾರ್ ಕೇರಳದ ಒಪ್ಪನ ನೃತ್ಯ ಪ್ರಕಾರ ಕೇವಲ ವಿವಾಹ ಸಂಭ್ರಮಾಚರಣೆಗೆ ಮಾತ್ರವಲ್ಲ ಎಂದು ಕೋವಿಡ್ 19 ರೋಗಿಗಳು ಸಾಬೀತುಪಡಿಸುತ್ತಿದ್ದಾರೆ. ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿರುವ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಕೋವಿಡ್ ಕಾಯಿಲೆಗೆ ಚಿಕಿತ್ಸೆಪಡೆದು ಗುಣಮುಖರಾಗಿ ತೆರಳುವ ಸಂದರ್ಭ ಸ್ನೇಹಪರವಾಗಿ ಒಪ್ಪನ ನೃತ್ಯದ ಮೂಲಕ ಬೀಳ್ಕೊಟ್ಟರು.  ಮೊಗ್ರಾಲ್ ನಿವಾಸಿ ಅನೀಸ್ ಮತ್ತು ಉಳುವಾರು ಮೂಲದ ಖಲೀಲ್ ಅವರು ಗುರುವಾರ ಕೋವಿಡ್ ಮುಕ್ತರಾಗಿದ್ದು ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನಿಂದ ಬಿಡುಗಡೆ ಮಾಡಿದಾಗ ಈ ರೀತಿಯ ವಿಶೇಷ ಬೀಳ್ಕೊಡುಗೆ ನೀಡಲಾಯಿತು.
         ಅವರನ್ನು ಶುಕ್ರವಾರ ಮಧ್ಯಾಹ್ನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ ರೋಗಿಗಳು "ಒಪ್ಪನ" ಹಾಡಿನೊಂದಿಗೆ ಹಾರೈಸಿ ಬೀಳ್ಕೊಟ್ಟರು. ತೆರುವತ್ತಿನ ಸೆರಾಮಿಕ್ ಮತ್ತು ಇತರರು ಸುಂದರವಾಗಿ ಹಾಡುತ್ತಿದ್ದರೆ, ಅವರ ಸಹಚರರು ಮತ್ತು ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಾಚರಣೆಗೆ ಸಾಲುಗಟ್ಟಿ ನಿಂತರು. ಕ್ವಾರಂಟೈನ್ ಮತ್ತು ಚಿಕಿತ್ಸೆಗಾಗಿ ಉಕ್ಕಿನಡ್ಕದಲ್ಲಿರುವ ರೋಗಿಗಳು ಮಾನಸಿಕ ಒತ್ತಡಗಳಿಂದ ಪಾರಾಗಲು ಹಲವುಬಾರಿ ಒಪ್ಪನ ಆಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ಇಲ್ಲಿರುವ ರೋಗಿಗಳು ಗುರುವಾರ ನೆಗೆಟಿವ್ ಪಾಸಿಟಿವ್ ಎಂಬ ವಾಟ್ಸಾಪ್ ಗುಂಪನ್ನು ಸಹ ರಚಿಸಿರುವುದಾಗಿ ತಿಳಿದುಬಂದಿದ್ದು ಸೋಂಕಿನ ಸಂಕಷ್ಟದಲ್ಲಿ ಒಂದಾಗಿದ್ದವರು ಬಳಿಕವೂ ಸಂಬಂಧಗಳನ್ನು ಬಲಪಡಿಸಲು ಈ ಗುಂಪು ನೆರವಾಗಲಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries