ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಸದಾನಂದನ್ ಅವರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ನೇಮಕಾತಿ ಮೂರು ತಿಂಗಳವರೆಗೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿರುವರು.
ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಖ್ಯಮಂತ್ರಿಗೆ ಸಲಹೆ ನೀಡುವ ಕರ್ತವ್ಯವನ್ನು ರಾಜೀವ್ ಸದಾನಂದನ್ ಅವರಿಗೆ ವಹಿಸಲಾಗುವುದು. ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಬಳ ಲಭ್ಯವಿಲ್ಲದಿದ್ದರೂ ವಾಹನವನ್ನು ಪ್ರವಾಸೋದ್ಯಮ ಇಲಾಖೆಯಿಂದ ವಿತರಿಸಲಾಗುತ್ತದೆ. ಚಿನ್ನದ ಕಳ್ಳಸಾಗಣೆ ವಿವಾದ ಸರ್ಕಾರದ ಬಿಕ್ಕಟ್ಟಿನಲ್ಲಿ ಸಿಲುಕಿಸಿರುವ ಮಧ್ಯೆ ಈ ನೇಮಕಾತಿ ನಡೆದಿರುವುದು ಆಶ್ಚರ್ಯ ಮೂಡಿಸಿದೆ.
ರಾಜ್ಯದಲ್ಲಿ ನಿಫಾ ವೈರಸ್ ಪ್ರತಿಕೂಲ ಸಂದರ್ಭ ರಾಜೀಸ್ ಸದಾನಂದನ್ ಅವರ ಚಟುವಟಿಕೆಗಳು ಸರ್ಕಾರದ ಗಮನ ಸೆಳೆದಿದ್ದವು. ಈ ಹಂತದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅನುಭವಿ ಅಧಿಕಾರಿಯ ಸೇವೆ ಅಗತ್ಯ ಎಂದು ಸರ್ಕಾರ ಈ ನೇಮಕಾತಿಗೆ ಆದೇಶಿಸಿದೆ.
ಏತನ್ಮಧ್ಯೆ, ಕೋವಿಡ್ ಹಿನ್ನೆಲೆಯಲ್ಲಿ ಸಿಎಂ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಕೋವಿಡ್ -19 ಸೋಂಕಿನ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೋಂಕು ಬಾಧಿತರಾಗದಂತೆ, ಇತರರಿಗೆ ಹರಡದಂತೆ ಜಾಗೃತರಾಗಿರಬೇಕು. ಪ್ರತಿಯೊಬ್ಬರೂ ಸುರಕ್ಷತಾ ಜಾಲವನ್ನು ರೂಪಿಸಬೇಕು ಎಂದೂ ಅವರು ಹೇಳಿರುವರು.


