ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ಸಮಿತಿಗಳ ಐದು ವರ್ಷಗಳ ಆಡಳಿತಾವಧಿ ನವೆಂಬರ್ 11 ರಂದು ಕೊನೆಗೊಳ್ಳಲಿದೆ. ನವೆಂಬರ್ 12 ರಂದು ಹೊಸ ಆಡಳಿತ ಸಮಿತಿಗಳು ಅಂಗೀಕಾರಕ್ಕೆ ಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಕ್ಟೋಬರ್ ಕೊನೆಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಚುನಾವಣೆ ನಡೆಸಬೇಕಾಗಿ ಬರಲಿದೆ.
ಆಗಸ್ಟ್ ಮತ್ತು ಸಪ್ಟಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಲೆಕ್ಕಾಚಾರಗಳು ಸೂಚಿಸುತ್ತಿವೆ. ಅದರಿಂದ ಇಂತಹ ಸಮಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೇ ಎಂಬ ಪ್ರಶ್ನೆಯೂ ಈಗ ಉದಿಸತೊಡಗಿದೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಗೆ ಸರ್ಕಾರಕ್ಕಾಗಲೀ, ಸಿಪಿಎಂ ಆಗಲೀ ಆಸಕ್ತಿ ಹೊಂದಿಲ್ಲ. ಆದರೆ ಸರ್ಕಾರದೊಂದಿಗೆ ಕೂಲಂಕುಷವಾಗಿ ಚರ್ಚಿಸಿದ ಬಳಿಕವಷ್ಟೇ ಈ ವಿಷಯದಲ್ಲಿ ರಾಜ್ಯ ಚುನಾವಣಾ ಆಯೋಗ ಯಾವುದೇ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ಅವಧಿಯಲ್ಲಿ ಚುನಾವಣೆ ನಡೆದರೆ ಕೋವಿಡ್ ಮಾನದಂಡ ಪ್ರಕಾರ ಕೋವಿಡ್ ರೋಗಿಗಳು, ಕ್ವಾರಂಟೈನ್‍ನಲ್ಲಿ ಕಳೆಯುತ್ತಿರುವವರು ಮತ್ತು 65 ವರ್ಷ ಪ್ರಾಯ ಮೀರಿದವರು ಆಸ್ಪತ್ರೆಯಿಂದ ಯಾ ಮನೆಯಿಂದ ಹೊರಬಂದು ಮತಚಲಾಯಿಸುವಂತಿಲ್ಲ. ಅದೂ ಒಂದು ದೊಡ್ಡ ಸಮಸ್ಯೆಯಾಗಿ ತಲೆಯೆತ್ತಲಿದೆ. ಕೋವಿಡ್ ರೋಗಿಗಳು ಮತ್ತು ಕ್ವಾರಂಟೈನ್‍ನಲ್ಲಿರುವವರು ಅಂಚೆ ಮೂಲಕ ಮತ ಚಲಾಯಿಸಬಹುದೆಂಬ ರೀತಿಯ ಕಾನೂನು ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಈಗಾಗಲೇ ತಂದಿದೆ. ಆದರೆ 65 ವರ್ಷ ಮೀರಿದವರ ಮತ ಚಲಾವಣೆ ವಿಷಯ ಅದರಲ್ಲಿ ಒಳಪಡಿಸಲಾಗಿಲ್ಲ.
ಕೋವಿಡ್ ರೋಗಿಗಳು, ಕ್ವಾರಂಟೈನ್‍ನಲ್ಲಿರುವವರು, 65 ವರ್ಷ ಮೀರಿದವರು ಅವರ ಇಷ್ಟ ಪ್ರಕಾರ ಅವರ ಸಂಬಂಧಿಕರು ಮತ ಚಲಾಯಿಸುವ ಪೆÇ್ರೀಕ್ಷಿ ಮತ ಚಲಾವಣೆ ಸಂಪ್ರದಾಯ ಕೇಂದ್ರ ಸರ್ಕಾರದ ಪರಿಗಣನೆಯಲ್ಲಿಲ್ಲ. ಅದರಿಂದಾಗಿ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿ ಆಗಸ್ಟ್ ನಲ್ಲಿ ಕಾನೂನು ತಿದ್ದುಪಡಿ ನಡೆಸಲು ರಾಜ್ಯ ಸರ್ಕಾರ ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.