HEALTH TIPS

ಮೃದಂಗದಲ್ಲಿ ಮಾತ್ರವಲ್ಲ ಪಿಯು ಪರೀಕ್ಷೆಯಲ್ಲೂ ಸಾಧನೆ ಮೆರೆದ ಯುವ ಸಾಧಕ-ಕರ್ನಾಟಕ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 8ನೇ ಯಾರ್ಂಕ್ ಪಡೆದ ತೆಂಕುತಿಟ್ಟು ಯಕ್ಷಗಾನದ ಆಲ್ ರೌಂಡರ್ ಕಲಾವಿದ ಬಹುಮುಖ ಪ್ರತಿಭೆ ಅನೂಪ್ ಸ್ವರ್ಗ


       ಪೆರ್ಲ:ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ವಿದ್ಯಾರ್ಥಿ ಅನೂಪ್ ಸ್ವರ್ಗ ಕರ್ನಾಟಕ ರಾಜ್ಯದಲ್ಲಿ 8 ನೇ ಯಾರ್ಂಕ್ ಗಳಿಸಿದ್ದಾನೆ.

       ತನ್ನ ಮಾಂತ್ರಿಕ ಕೈಚಳಕದಿಂದ ಚೆಂಡೆ ಮದ್ದಳೆಗಳನ್ನು ನುಡಿಸಿ ಪ್ರೇಕ್ಷಕ ವರ್ಗದವರನ್ನು ಹುಬ್ಬೇರಿಸುತ್ತಿದ್ದ ಪಡ್ರೆ ಗ್ರಾಮದ ಸ್ವರ್ಗದ ಈ ಪೆÇೀರ 590 ಅಂಕ ಗಳಿಸಿ ಕಲಿಕೆಯಲ್ಲೂ ಸೈ ಎನಿಸಿಕೊಂಡಿದ್ದಾನೆ.
       ಅರಿತ್ಮೇಟಿಕ್, ಸಂಸ್ಕøತ, ಕಂಪ್ಯೂಟರ್ ಸಯನ್ಸ್, ಇಕೊನೊಮಿಕ್ಸ್, ಬ್ಯುಸಿನೆಸ್ ಸ್ಟಡೀಸ್ ವಿಷಯಗಳಲ್ಲಿ ತಲಾ 100 ಅಂಕಗಳಿಸಿದ ಅನೂಪ್ ಇಂಗ್ಲೀಷ್ ನಲ್ಲಿ 92 ಅಂಕ ಪಡೆದಿದ್ದು ವಾಣಿಜ್ಯ ವಿಭಾಗದಲ್ಲಿ ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
          ಸ್ವರ್ಗದ ವ್ಯಾಪಾ ರಿ ಹಾಗೂ ಕೃಷಿಕ ವಿವೇಕ ಸ್ವರ್ಗ ಮತ್ತು ವೀಣಾ ದಂಪತಿಗಳ ದ್ವಿತೀಯ ಪುತ್ರ ಅನೂಪ್ ತನ್ನ ಏಳನೆ ವಯಸ್ಸಿನಲ್ಲಿ ಯಕ್ಷಗಾನದ ಹಿಮ್ಮೇಳ ಚೆಂಡೆ ವಾದನದಲ್ಲಿ ಆಕರ್ಷಿತನಾದಾಗ  ಸ್ವತಃ ಮದ್ದಳೆ ವಾದಕರೂ ಆಗಿರುವ ವಿವೇಕರು ಪೆರ್ಲದ 'ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ'ದಲ್ಲಿ ತರಬೇತಿಗೆ ಸೇರಿಸಿದ್ದರು. ದಕ್ಷಿಣ ಕನ್ನಡ ರಾಜ್ಯ ಪ್ರಶಸ್ತಿ ವಿಜೇತ ನಾಟ್ಯ ಗುರು ಸಬ್ಬಣಕೊಡಿ ರಾಮ ಭಟ್ ಮಾರ್ಗದರ್ಶನದಲ್ಲಿ ಖ್ಯಾತ ಭಾಗವತ, ಹಿಮ್ಮೇಳ ಗುರು ತೆಂಕಬೈಲ್ ತಿರುಮಲೇಶ್ವರ ಶಾಸ್ತ್ರೀಗಳಲ್ಲಿ ಚೆಂಡೆ, ಮದ್ದಳೆಗಳ ಜತೆ ಭಾಗವತಿಕೆಯನ್ನೂ ಅಭ್ಯಾಸಿಸಿದ್ದು ಈಗಾಗಲೇ ಐನೂರಕ್ಕೂ ಹೆಚ್ಚು ಯಕ್ಷಗಾನ ಬಯಲಾಟ, ತಾಳಮದ್ದಳೆ, ಗಾನ ವೈಭವ, ಏಕ ವ್ಯಕ್ತಿ ಯಕ್ಷ ಹಿಮ್ಮೇಳಗಳಲ್ಲಿ ತನ್ನ ಕಲಾ ಪ್ರೌಢಿಮೆಯಿಂದ ಮಿಂಚಿದ್ದಾನೆ. ಹೆಸರಾಂತ ಹಿರಿಯ ಕಿರಿಯ ಭಾಗವತರ ಜತೆ ಚೆಂಡೆ ಮದ್ದಳೆಗಳಲ್ಲಿ ಸಾಥ್ ನೀಡಿದ್ದಾನೆ.
        'ಏಕವ್ಯಕ್ತಿ ಯಕ್ಷ ಹಿಮ್ಮೇಳ' ಎಂಬ ವಿನೂತನ ಕಾರ್ಯಕ್ರಮ ದಲ್ಲಿ ಏಕಕಾಲದಲ್ಲಿ ಚೆಂಡೆ ಮದ್ದಳೆ ಜತೆ ಭಾಗವತಿಕೆಯನ್ನೂ ಮಾಡಿ ಶೇಣಿ ರಂಗ ಜಂಗಮ ಟ್ರಸ್ಟ್ ನ ಸಂಚಾಲಕ ಶೇಣಿ ವೇಣು ಗೋಪಾಲ ಭಟ್ ಅವರಿಂದ ವಿಶೇಷ ಅಭಿನಂದನೆಗೆ ಪಾತ್ರನಾದುದಲ್ಲದೆ ಅವರ ಎಲ್ಲಾ ಕಾರ್ಯಕ್ರಮಗಳಲ್ಲೂ ಖಾಯಂ ಆಗಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ. ತನ್ನ ಒಂಭತ್ತನೇ ವಯಸ್ಸಿನಲ್ಲಿ  ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ ಅನೂಪ್, ಕೊಲ್ಲಂಗಾನ ,
ಎಡನೀರು, ಮಂಗಳಾದೇವಿ, ಕಟೀಲು ಮೇಳಗಳ ಯಕ್ಷಗಾನ ಬಯಲಾಟಗಳಲ್ಲಿ ಚೆಂಡೆ ಮದ್ದಳೆ ಬಾರಿಸಿ ಸೈ ಎನಿಸಿದ್ದಾನೆ.
       ಬಳ್ಳಪದವು ಯೋಗೀಶ್ ಶರ್ಮ ಅವರ ಬಳಿ ಮೃದಂಗ ಹಾಗೂ ಶುಭಾ ವೀಘ್ನೇಶ್ ಅವರ ಬಳಿ ಕರ್ಣಾಟಕ ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಜೂನಿಯರ್ ಸಂಗೀತ ಪರೀಕ್ಷೆಯಲ್ಲಿ ಶೇಕಡಾ 92 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಕ್ರೀಡೆಯಲ್ಲೂ ವಿಶೇಷ ಆಸಕ್ತನಾದ ಅನೂಪ್ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಶಟ್ಲ್ ಬ್ಯಾಟ್ಮಿಂಟನ್ ಆಟಗಳಲ್ಲಿ ಶಾಲೆ ಹಾಗೂ ಇತರ ತಂಡಗಳನ್ನು ಪ್ರತಿನಿಧೀಕರಿಸಿದ್ದಾನೆ.
        ಓದಿನಲ್ಲೂ ಸದಾ ಮುಂಚೂಣಿಯಲ್ಲಿರುವ ಈತ 7ನೇ ತರಗತಿ ವರೆಗೆ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆ, ಹೈಸ್ಕೂಲ್ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೇಕಡಾ 91.4 ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಸಾಧನೆ ಮೆರೆದಿರುವ ಅನೂಪ್ ಸಿಎ, ಐಎಎಸ್ ಪಡೆಯುವ ಗುರಿ ಹೊಂದಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries