ಕಾಸರಗೋಡು: ಬುಧವಾರ ಪ್ರಕಟಗೊಂಡ 2019-20ನೇ ಸಾಲಿನ ಹೈಯರ್ ಸೆಕೆಂಡರಿ ಪ್ಲಸ್ ಟು ಪರೀಕ್ಷೆಯಲ್ಲಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನಿರುದ್ದ ವಾಸಿಷ್ಠ ಶರ್ಮಾ ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾನೆ.
ಈತ ಖ್ಯಾತ ವೈದಿಕ ವಿದ್ವಾಂಸ ರಾಘವೇಂದ್ರ ಉಡುಪಮೂಲೆ- ನೃತ್ಯ ವಿದುಷಿಃ ಅನುಪಮಾ ರಾಘವೇಂದ್ರ ದಂಪತಿಗಳ ಪುತ್ರನಾಗಿದ್ದು ಯುವ ಯಕ್ಷಗಾನ ಕಲಾವಿದನಾಗಿ ಗಮನ ಸೆಳೆಯುತ್ತಿದ್ದಾನೆ. ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವ ಈತನ ಸಾಧನೆಗೆ ಶಾಲಾ ಆಡಳಿತ, ಶಿಕ್ಷಕ,ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದೆ.


