HEALTH TIPS

ಕುಂಬಳೆ ಐ.ಎಚ್.ಆರ್.ಡಿ. ಕಾಲೇಜಿಗೆ ನೂತನ ಕಟ್ಟಡ


      ಕುಂಬಳೆ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರ್ಪಡೆಗೊಳಿಸಿ 4.38 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡಕ್ಕಿರುವ ಆಡಳಿತಾನುಮತಿ ಲಭಿಸಿದರೆ ಕುಂಬಳೆ ಐಎಚ್‍ಆರ್‍ಡಿ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಲು ಇತ್ತೀಚೆಗೆ ನಡೆದ ಅಭಿವೃದ್ಧಿ ಸಮಿತಿ ಸಭೆ ನಿರ್ಧರಿಸಿದೆ.
      ಶುಚಿತ್ವ ಸಮುಚ್ಛಯಕ್ಕಾಗಿ ಜಿಲ್ಲಾ ಪಂಚಾಯತಿ 10 ಲಕ್ಷ ರೂ. ಮಂಜೂರು ಮಾಡಿದೆ. ಇದರ ಕಾಮಗಾರಿ ಪೂರ್ತಿ ಗೊಳ್ಳುವುದರೊಂದಿಗೆ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳ್ಳಲಿದೆ.
       ಕಾಲೇಜು ಕಳೆದ 11 ವರ್ಷಗಳಿಂದ ಗ್ರಾಮ ಪಂಚಾಯತಿ ಕಮ್ಯೂನಿಟಿ ಹಾಲ್‍ನಲ್ಲಿ ಕಾರ್ಯಾಚರಿಸುತ್ತಿದೆ.  ಹೊಸದಾಗಿ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಿರುವ ಕ್ರಮಗಳ ಅಂಗವಾಗಿ ಕಣ್ಣೂರು ವಿಶ್ವವಿದ್ಯಾಲಯ ಅಧಿಕಾರಿಗಳು ಕಾಲೇಜು ಸಂದರ್ಶಿಸಿದ್ದಾರೆ.
      ಅಭಿವೃದ್ಧಿ ಸಮಿತಿ ಸಭೆಯನ್ನು ಶಾಸಕ ಎಂ.ಸಿ.ಖಮರುದ್ದೀನ್ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಪ್ರಾಂಶುಪಾಲೆ ನಳಿನಿ ಕುಂಡುವಳಪ್ಪಿಲ್, ಜನಪ್ರತಿನಿಧಿಗಳಾಧ ಸತ್ಯಶಂಕರ ಭಟ್, ಪಿ.ರಘುದೇವನ್, ಪಿ.ರಾಜೇಂದ್ರನ್, ಡಿ.ಗೋಪಾಲ, ಪಿ.ಎಸ್.ಅಜಯ್ ಕುಮಾರ್, ಎಂ.ಎ.ರಹ್ಮಾನ್, ಅಶ್ರಫ್ ಕೊಡ್ಯಮ್ಮೆ ಮೊದಲಾದವರು ಉಪಸ್ಥಿತರಿದ್ದರು.
    ಐಎಚ್‍ಆರ್‍ಡಿ ಕಾಲೇಜಿನ ಅತಂತ್ರತತೆಯ ಬಗ್ಗೆ ಕಳೆದ ವರ್ಷ  ಸಮರಸ ಸುದ್ದಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಆ ಬಳಿಕ ಕಾಲೇಜಿನ ಅಭಿವೃದ್ದಿಯ ಬಗ್ಗೆ ಸಾರ್ವಜನಿಕ ಚರ್ಚೆಗಳಾಗಿದ್ದು ತನ್ಮೂಲಕ ಆಡಳಿತ ಯಂತ್ರ ಚುರುಕುಗೊಳ್ಳಲು ಕಾರಣವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries