HEALTH TIPS

ಸಿಎಎ, ಹಿಂದೂ ವಿರೋಧಿ ಗಲಭೆಗಳಿಗೆ ವಿದೇಶಗಳಿಂದ ಹಣದ ಹೊಳೆ- ಬಯಲಾಗಿದೆ ಭಯಾನಕ ಮಾಹಿತಿ!

            ನವದೆಹಲಿ: ಕಳೆದ ಫೆಬ್ರವರಿ ಕೊನೆಯ ವಾರದಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಹಿಂಸಾತ್ಮಕ ಹಿಂದೂ ವಿರೋಧಿ ಗಲಭೆಗೆ ದೆಹಲಿ ಸಾಕ್ಷಿಯಾಗಿತ್ತು. ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದ ಈ ಗಲಭೆಗೆ ಹಲವು ದೇಶಗಳಿಂದ ಹಣದ ಹೊಳೆ ಹರಿದುಬಂದಿರುವ ಮಾಹಿತಿಯನ್ನು ಇದೀಗ ಪೊಲೀಸರು ಪತ್ತೆ ಹಚ್ಚಿದ್ದಾರೆ.
          ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಈ ಹಿಂಸಾಚಾರಕ್ಕೆ ಯುನೈಟೆಡ್ ಕಿಂಗ್‌ಡಮ್, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಹಣ ಹರಿದು ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಹಿಂದೂ ವಿರೋಧಿ ಹಿಂಸೆ ನಡೆಸುವ ಉದ್ದೇಶದಿಂದಲೇ ಹಣದ ನೆರವು ಹರಿದುಬಂದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದಿದ್ದಾರೆ ಪೊಲೀಸರು. ಈ ಗಲಭೆಗೆ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ಮಾಹಿತಿ ಸಿಕ್ಕಿವೆ.
          ಇದೇ ವೇಳೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕೇಂದ್ರಿತ ದೆಹಲಿಯಲ್ಲಿ ನಡೆದ ಗಲಭೆಗಳನ್ನು ಪ್ರಚೋದಿಸಲು ಕೂಡ ಇಲ್ಲಿಂದಲೇ ಹಣ ಬಂದಿರುವುದು ಬೆಳಕಿಗೆ ಬಂದಿದೆ. ಗಲಭೆಗೆ ಕುರಿತಂತೆ ಬಂಧಿಸಲಾಗಿರುವ ಜಾಮಿಯಾ ಸಮನ್ವಯ ಸಮಿತಿಯ ಸದಸ್ಯರಿಂದ ದೊರೆತಿರುವ ದಾಖಲೆಗಳಲ್ಲಿ ಹಣ ಬಂದಿರುವ ವಿಷಯ ತಿಳಿದುಬಂದಿದೆ. ಮಾತ್ರವಲ್ಲದೇ, ಸಿಎಎ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ಮಾಡುವಂತೆ 5 ಲಕ್ಷ ರೂ.ಗಳನ್ನು ಹೈದರ್ ಎಂಬಾತನ ಖಾತೆಗೆ ವರ್ಗಾಯಿಸಿರುವುದು ತಿಳಿದುಬಂದಿದೆ.
         ಗಲಭೆಯ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತಂಡವು ಜಾಮಿಯಾ ಸಮನ್ವಯ ಸಮಿತಿಯ ಸದಸ್ಯ ಮಿರಾನ್ ಹೈದರ್‌ನನ್ನು ಈಗಾಗಲೇ ಬಂಧಿಸಿದೆ ಮತ್ತು ಹಿಂಸಾಚಾರದ ವಿವರಗಳನ್ನು ಒಳಗೊಂಡ ರಿಜಿಸ್ಟರ್ ಅನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಹೈದರ್‌ನನ್ನು ಏಪ್ರಿಲ್‌ನಲ್ಲಿ ಬಂಧಿಸಲಾಗಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
           ಕೆಲವು ದಾಖಲೆಗಳಲ್ಲಿ ಕೈಬರಹಗಳು ಇದ್ದು, ಅವುಗಳನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಗಲಭೆಯ ಇನ್ನೋರ್ವ ಆರೋಪಿ ಖಾಲಿದ್ ಸೈಫಿಗೆ ಮೀರತ್ ಮೂಲದ ಸ್ವಯಂಸೇವಾ ಸಂಸ್ಥೆಯ ಮೂಲಕ ಮಲೇಷ್ಯಾದಿಂದ ಹಣ ಬಂದಿರುವುದು ತಿಳಿದುಬಂದಿದೆ.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries