HEALTH TIPS

ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕನಿಗೆ ಕೋವಿಡ್-ಬಂಧುಗಳಿಗೂ ರೋಗ ಲಕ್ಷಣ-ಮೂಲ ಅಸ್ಪಷ್ಟ


        ಬದಿಯಡ್ಕ: ತಲೆಗೆ ಶಸ್ತ್ರಚಿಕಿತ್ಸೆ ಒಳಗಾದ 18 ವರ್ಷದ ಯುವಕನೋರ್ವನಿಗೆ ಬಳಿಕ ಕೋವಿಡ್ ದೃಢಪಡಿಸಲಾಗಿದೆ. ಜೊತೆಗೆ ಯುವಕನ ಹೆತ್ತವರಲ್ಲಿಯೂ ಕೋವಿಡ್ ದೃಢಪಡಿಸಲಾಗಿದ್ದು ಬದಿಯಡ್ಕ ಪರಿಸರ ಕಟ್ಟೆಚ್ಚರದಲ್ಲಿದೆ. ನಿಯಮಿತವಾಗಿ ಮಂಗಳೂರಿಗೆ ಹೋಗುತ್ತಿದ್ದ ಯುವಕಕಳೆದ ಒಂದು ವಾರದಿಂದ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದನು.  ಬದಿಯಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಶುಕ್ರವಾರ ಮನೆಯಲ್ಲಿ ಬಿದ್ದು ಯುವಕ ತಲೆಗೆ ಗಾಯಗಳಾಗಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಸ್ಥಿತಿ ಗಂಭೀರವಾಗಿದ್ದರಿಂದ ಬೇರೆಡೆಗೆ ಕರೆದೊಯ್ಯುವ ಅಗತ್ಯವಿದೆ ಎಂದು ವಾಪಸ್ ಕಳುಹಿಸಲಾಯಿತು.
           ಬಳಿಕ ಸಂಬಂಧಿಕರು ಯುವಕರನ್ನು ಶಸ್ತ್ರಚಿಕಿತ್ಸೆಗಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆಯ ಸಮಯದಲ್ಲಿ ಮಾಡಲಾದ ಗಂಟಲ ದ್ರವ ಪರೀಕ್ಷೆಯ ಫಲಿತಾಂಶಗಳು ಹೊರಬಂದಾಗ ಅವನಿಗೆ ಕೋವಿಡ್ ರೋಗ ದೃಢಪಟ್ಟಿತ್ತು. ಅಲ್ಲದೆ ಯುವಕನ ತಾಯಿ, ತಂದೆ ಮತ್ತು ಸಂಬಂಧಿಕರ ಜೊಲ್ಲು ಪರೀಕ್ಷೆ ನಡೆಸಿದಾಗ ಅವರಲ್ಲಿ ಅನೇಕರಿಗೆ ಸೋಂಕು ಪತ್ತೆಯಾಯಿತು. ಇದರ ಜೊತೆಗೆ ಯುವಕನು ಕನಿಷ್ಠ 500 ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿರಬಹುದು ಎಂದು ಪ್ರಾಥಮಿಕ ಅಂದಾಜುಗಳು ಸೂಚಿಸುತ್ತವೆ.ಬದಿಯಡ್ಕದಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಅವರ ಕುಟುಂಬ, ಆಸ್ಪತ್ರೆ ಸಿಬ್ಬಂದಿಗಳು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
          ಕಾರಡ್ಕ ಪಂಚಾಯತ್ ನಲ್ಲಿ ವಾಸಿಸುವ ಯುವಕನ ತಂದೆ ನಾಟೆಕಲ್ಲಿನಲ್ಲಿ  ವ್ಯಾಪಾರಿಯಾಗಿದ್ದಾರೆ. ಜ್ವರದ  ಆರಂಭದಲ್ಲಿ ಸಂಪರ್ಕಿಸಲಾದ ಎರಡು ಆಸ್ಪತ್ರೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಇಬ್ಬರು ವೈದ್ಯರು ಮತ್ತು ಸಿಬ್ಬಂದಿ ಕೂಡ ನಿರೀಕ್ಷಣೆಗೆ ಒಳಗಾಗಿದ್ದಾರೆ.
    ಈ ಮಧ್ಯೆ ಬದಿಯಡ್ಕ ಪೇಟೆಯಲ್ಲೂ ತಲೆಹೊರೆ ಕಾರ್ಮಿಕರಿಗೆ ಸಂಪರ್ಕದ ಮೂಲಕ ರೋಗ ಪತ್ತೆಯಾಗಿದೆ. ನೀರ್ಚಾಲು, ಮುಳ್ಳೇರಿಯ ಪೇಟೆಗಳಲ್ಲಿ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳನ್ನು 7 ದಿನಗಳವರೆಗೆ ಮುಚ್ಚಲು ಆದೇಶಿಸಿ ಕಂಟೈ ನ್ಮೆಂಟ್ ವಲಯವಾಗಿ ಘೋಶಿಸಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಮಾಡುವ ಅಂಗಡಿಗಳು ದಿನಬಿಟ್ಟು ದಿನ  ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಮಾತ್ರ ತೆರೆದಿರಲು ಸೂಚಿಸಲಾಗಿದೆ. ಆಟೋರಿಕ್ಷಾ ಟ್ಯಾಕ್ಸಿಗಳ ಸಂಚಾರ ನಿಷೇಧಿಸಲಾಗಿದೆ. ಬಸ್ ಸಂಚಾರದ ವೇಳೆ ಈ ಪ್ರದೇಶಗಳಲ್ಲಿ ಬಸ್ ನಿಲುಗಡೆಗೆ ಅವಕಾಶ ನೀಡಲಾಗಿಲ್ಲ. ಈ ಪ್ರದೇಶಗಳಲ್ಲಿ  ಕಟ್ಟುನಿಟ್ಟಾದ ಪೆÇಲೀಸ್ ಕಣ್ಗಾವಲು ಏರ್ಪಡಿಸಲಾಗಿದೆ. ರೋಗ ಹರಡುವುದನ್ನು ತಡೆಯಲು ಜನರು ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries