HEALTH TIPS

ಗಡಿ ಪ್ರದೇಶದಲ್ಲಿ ಹೊಸದಾಗಿ ಮುಚ್ಚುಗಡೆ ನಡೆಸಿಲ್ಲ-ಜಿಲ್ಲಾಧಿಕಾರಿ ಸ್ಪಷ್ಟನೆ

 
            ಕಾಸರಗೋಡು: ಜಿಲ್ಲೆಯ ಗಡಿ ಪ್ರದೇಶಗಳನ್ನು ಹೊಸದಾಗಿ ಎಲ್ಲಿಯೂ ಮುಚ್ಚುಗಡೆ ನಡೆಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದವರು ನುಡಿದರು.
       ಕಾಸರಗೋಡು ಜಿಲ್ಲೆಯ ಗಡಿಗಳನ್ನು ನೂತನವಾಗಿ ಮುಚ್ಚುಗಡೆ ನಡೆಸಲಾಗಿದೆ ಎಂಬ ಹುಸಿ ಪ್ರಚಾರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಿರುವುದಾಗಿ ಅವರು ಹೇಳಿದ್ದಾರೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ಹಿಂದೆಯೇ ಗಡಿ ಪ್ರದೇಶಗಳನ್ನು ಮುಚ್ಚುಗಡೆನಡೆಸಲಾಗಿದ್ದು, ಈಗಲೂ ಅದೇ ರೀತಿ ಮುಂದುವರಿಯುತ್ತಿದೆ. ಅದಲ್ಲದೆ ನೂತನವಾಗಿ ಯಾವುದೇ ಮುಚ್ಚುಗಡೆಗೆ ಜಿಲ್ಲಾಡಳಿತೆ ಕ್ರಮ
ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
        ಜೂ.30ರಂದು ಜಿಲ್ಲೆಯಲ್ಲಿ ಕೋವಿಡ್-19 ಖಚಿತಗೊಂಡಿದ್ದ ಚೆಂಗಳ ಗ್ರಾಮಪಂಚಾಯತ್ ನಿವಾಸಿಯೊಬ್ಬರು ಮುಚ್ಚುಗಡೆ ನಡೆಸಿದ್ದ ಗಡಿ ಮೂಲಕ ಅಕ್ರಮ ಪ್ರವೇಶ ನಡೆಸಿ ಜಿಲ್ಲೆಗೆ ಬಂದಿರುವುದು ತನಿಖೆಯಲ್ಲಿ ಖಚಿತಗೊಂಡಿದೆ. ಈ ರೀತಿಯ ಅಕ್ರಮ ಪ್ರವೇಶ ತಡೆಯುವ ನಿಟ್ಟಿನಲ್ಲಿ ಎಲ್ಲ ಗಡಿ ಚೆಕ್ ಪೆÇೀಸ್ಟ್ ಗಳಲ್ಲಿ ಪೆÇಲೀಸ್, ಆರೋಗ್ಯ, ಅರಣ್ಯ ಇಲಾಖೆಗಳ ಸಿಬ್ಬಂದಿಯನ್ನು ನಿಗಾ ಕರ್ತವ್ಯ ಕ್ಕೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries