ಕಾಸರಗೋಡು: ಜನಜೀವನವನ್ನು ಏಕಾಏಕಿ ಬುಡಮೇಲು ಮಾಡಿ, ಕರಾಳ ಪ್ರಭಾವ ಬೀರಿರುವ ಕೋವಿಡ್ ಬಾಧೆ ಜನತೆಯ ಅಹವಾಲು ಆಲಿಸಲು ಇಲ್ಲಿ ತಡೆಯಾಗಲಿಲ್ಲ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಆನ್ ಲೈನ್ ಮೂಲಕ ಶನಿವಾರ ವೆಳ್ಳರಿಕುಂಡ್ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ನಡೆಸಿದರು.
ಒಟ್ಟು 54 ದೂರುಗಳು ಅದಾಲತ್ ನಲ್ಲಿ ಪರಿಶೀಲನೆಗೊಂಡುವು. ಜಿಲ್ಲಾಧಿಕಾರಿ ನೇರವಾಗಿ 12 ದೂರುಗಳನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಅದಾಲತ್ ಆನ್ ಲೈನ್ ಸೌಲಭ್ಯಗಳೊಂದಿಗೆ ನಡೆಯಿತು. ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿಗಳಾದ ಸಜಿ ಎಫ್.ಮೆಂಡನ್, ವಿ.ಜೆ.ಶಂಸುದ್ದೀನ್, ಎಲ್.ಐ.ಸಿ. ಜಿಲ್ಲಾ ಅಧಿಕಾರಿ ಕೆ.ರಾಜನ್, ವೆಳ್ಳರಿಕುಂಡ್ ತಹಸೀಲ್ದಾರ್ ಕುಂuಟಿಜeಜಿiಟಿeಜಕಣ್ಣನ್, ಕೃಷಿ ಸಹಾಯಕ ನಿರ್ದೇಶಕ ಎಸ್.ಲಕ್ಷ್ಮಿ ದೇವಿ, ಉದ್ಯೋಗ ಅಧಿಕಾರಿ ಕೆ.ಗೀತಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.


