ಕುಂಬಳೆ: ಅಸೌಖ್ಯ ಕಾರಣ ಚಿಕಿತ್ಸೆಯಲ್ಲಿದ್ದ ಯುವ ಶಿಕ್ಷಕರೋರ್ವರು ಮ್ರತಪಟ್ಟ ಘಟನೆ ಗುರುವಾರ ನಡೆದಿದೆ.
ನಿವ್ರತ್ತ ವಿದ್ಯಾಭ್ಯಾಸ ಇಲಾಖಾ ನಿರ್ದೇಶಕ ಮಹಾಲಿಂಗೇಶ್ವರ ರಾಜ್- ಶಿಕ್ಷಕಿ ಶಶಿಕಲಾ ದಂಪತಿಗಳ ಪುತ್ರ, ನಾರಾಯಣಮಂಗಲ ಅನುದಾನಿತ ಶಾಲಾ ಶಿಕ್ಷಕ ಸುಕೇಶ್ ರಾಮ್(೨೬)ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ಕೆಲವು ಕಾಲಗಳಿಂದ ಚಿಕಿತ್ಸೆಯಲ್ಲಿದ್ದರು. ಆದರೆ ಅಸೌಖ್ಯ ಉಲ್ಬಣಗೊಂಡು ಗುರುವಾರ ಬೆಳಿಗ್ಗೆ ಸ್ವಗ್ರಹದಲ್ಲಿ ಕೊನೆಯುಸಿರೆಳೆದರು.ಮ್ರತರು ತಂದೆ,ತಾಯಿ ಸಹಿತ ಅಪಾರ ಬಂಧುಬಳಗ,ಮಿತ್ರರನ್ನು ಅಗಲಿದ್ದಾರೆ.

