HEALTH TIPS

ಸಾರ್ವಜನಿಕ ಸಂಚಾರ ನಡೆಸುವವರು ಕಾನೂನು ಪಾಲಿಸುವುದು ಕಡ್ಡಾಯ: ಆರ್.ಟಿ.ಒ.

         ಕಾಸರಗೋಡು: ವಾಹನಗಳಲ್ಲಿ ಸಾರ್ವಜನಿಕ ಸಂಚಾರ ನಡೆಸುವವರು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಗಳ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾಸರಗೋಡು ರಸ್ತೆ ಸಾರಿಗೆ ಅಧಿಕಾರಿ ಇ.ಮೋಹನದಾಸ್ ತಿಳಿಸಿದರು.
       ಸಾರ್ವಜನಿಕ ಸಂಚಾರ ನಡೆಸುವ ವಾಹನಗಳ ಚಾಲಕರು, ಪ್ರಯಾಣಿಕರು ಪಾಲಿಸಬೇಕಾದ ಕಟ್ಟುನಿಟ್ಟುಗಳ ಸಂಬಂಧ ಕೇರಳ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ 2020 ಮೇ 22 ರಂದು ಪ್ರಕಟಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದವರು ನುಡಿದರು.
          ಚಾಲಕರಿಗೆ ಆದೇಶ:
   ಈ ಆದೇಶ ಪ್ರಕಾರ ಚಾಲಕರು, ಮತ್ತಿತರ ಕಾರ್ಮಿಕರು ಸಂಚಾರ ವೇಳೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ 3 ಲೆಯರ್ ಮಾಸ್ಕ್ ಧರಿಸಲೇಬೇಕು. ಇವರು ವಾಹನವೇರಿದ ಮೇಲೆ ಮತ್ತು ಇಳಿದ ನಂತರ ಸಾಬೂನು/ ಹ್ಯಾಂಡ್ ವಾಷ್ ಬಳಸಿ ಕೈತೊಳೆಯಬೇಕು. ನಂತರ ಸಾನಿಟೈಸರ್ ಬಳಸಿ ಕೈಗಳನ್ನು ರೋಗಾಣುಮುಕ್ತಗೊಳಿಸಬೇಕು.
      ಟ್ಯಾಕ್ಸಿ ಗಳಲ್ಲಿ ಹಿಂಬದಿ ಸೀಟಿನಲ್ಲಿ ಮಾತ್ರ ಪ್ರಯಾಣಿಕರು ಕುಳಿತುಕೊಳ್ಳಬೇಕು. ಇವರು ಪ್ರಯಾಣದುದ್ದಕ್ಕೂ ಮೂಗು, ಬಾಯಿ ಮುಚ್ಚುವ ರೀತಿ ಮಾಸ್ಕ್ ಧರಿಸಬೇಕು. ಅಂಥಾ ಪ್ರಯಾಣಿಕರನ್ನು ಮಾತ್ರ ವಾಹನ ಏರಲು ಅನುಮತಿ ನೀಡಬೇಕು. ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಲಗೇಜ್ ಇತ್ಯಾದಿಗಳನ್ನು ಪ್ರಯಾಣಿಕರೇ ಹ್ಯಾಂಡಲ್ ಮಾಡಬೇಕು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಚಾಲಕರು ಯಾ ಇತ್ತಿತರ ಕಾರ್ಮಿಕರು ಲಗೇಜ್ ಇಳಿಸಿ, ಕೈಗಳನ್ನು ರೋಗಾಣುಮುಕ್ತ ಗೊಳಿಸಬೇಕು.
      ಯಾತ್ರಾ ವಾಹನಗಳಲ್ಲಿ ಟ್ರಾನ್ಸ್ ಪೆರೆಂಟ್ ಶೀಟ್ ಬಳಸಿ ಪ್ಯಾಸೆಂಜರ್ ಕ್ಯಾಬಿನ್ ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳಬೇಕು. ವಾಹನದಲ್ಲಿ ಎ.ಸಿ. ಬಳಸದೇ, ಕಿಟಿಕಿ ಗಾಜಿ ತೆರೆದು ಉತ್ತಮ ವಾಯುಸಂಚಾರ ಖಚಿತಪಡಿಸಿಕೊಳ್ಳಬೇಕು. ವಾಹನಗಳಲ್ಲಿ ಸ್ಯಾನಿಟೈಸರ್  ಕಡ್ಡಾಯವಾಗಿರುವಂತೆ ಚಾಲಕ ಗಮನಿಸಬೇಕು. ಪ್ರಯಾಣಕ್ಕೆ ಮುನ್ನವೇ ವಾಹನವೇರುವ ವೇಳೆ ಪ್ರಯಾಣಿಕರ ಕೈಗಳನ್ನು ಸಾನಿಟೈಸರ್ ನೀಡಿ ರೋಗಾಣುಮಕ್ತಗೊಳಿಸಬೇಕು. ವಾಹನಗಳಲ್ಲಿ ಆಹಾರ ಸೇವನೆ ಇತ್ಯಾದಿ ನಡೆಸಕೂಡದು.
      ಪ್ರಯಣಿಕರಲ್ಲಿ ಜ್ವರ, ಕೆಮ್ಮು, ಶೀತ, ಗಂಟಲುನೋವು ಇತ್ಯಾದಿ ಲಕ್ಷಣ ಕಂಡುಬರುತ್ತಿದ್ದರೆ ಚಾಲಕರು ತಕ್ಷಣ ದೂರವಾಣಿ ಸಂಖ್ಯೆ: 04712552056 ಅಥವಾ 04712551056ಗೆ ಕರೆಮಾಡಿ ಮಾಹಿತಿ ನೀಡಿ, ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆತಂದು ವರದಿ ಸಲ್ಲಿಸಬೇಕು.
     ವಾಹನದಲ್ಲಿ ಪ್ರಯಾಣಿಕರು ಸ್ಪರ್ಶಿಸುವ ಸಾಧ್ಯತೆಗಳಿರುವ ಕಿಟಿಕಿ ಸರಳುಗಳು, ಡೋರ್ ಹ್ಯಾಂಡಲ್ ಮುಟ್ಟದಿರುವಂತೆ ತಿಳಿಸಬೇಕು. ಒಂದೊಮ್ಮೆ ಅವರು ಸ್ಪರ್ಶಿಸಿದರೆ ಸಾನಿಟೈಸರ್ ಬಳಸಿ ರೋಗಾಣುಮುಕ್ತಗೊಳಿಸಬೇಕು. ಯಾವ ಕಾರಣಕ್ಕೂ ಕೈಗಳಿಂದ ಕಣ್ಣು,ಮೂಗು, ಬಾಯಿ, ತುಟಿ, ಮುಖ ಸ್ಪರ್ಶಿಸಬಾರದು. ದೈಹಿಕ ಸ್ಪರ್ಶ, ಹಸ್ತಲಾಘವ, ಅಪ್ಪಿಕೊಳ್ಳುವಿಕೆ ಇತ್ಯಾದಿ ನಡೆಸಲೇ ಕೂಡದು. ವಾಹನದಲ್ಲಿ ಪ್ರಯಾಣಿಕರ, ಸಹಕಾರ್ಮಿಕರ ಆರೋಗ್ಯ ವಿಚಾರಿಸಿ, ಯಾವುದೇ ರೋಗ ಲಕ್ಷಣಗಳಿದ್ದಲ್ಲಿ ತಕ್ಷಣ ದಿಶಾ ಸಂಸ್ಥೆಗೆ ಮಾಹಿತಿ ನೀಡಬೇಕು. ರೋಗಿಗಳಿದ್ದರೆ ಆಂಬುಲೆನ್ಸ್ ನಲ್ಲಿ ಮಾತ್ರ ಆಸ್ಪತ್ರೆಗೆ ಕರೆದೊಯ್ಯಬೇಕು.
       ಪ್ರತಿ ಪ್ರಯಾಣದ ವೇಳೆ ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ನಂಬ್ರ ಇತ್ಯಾದಿ ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ಸಹಚಾಲಕ, ಕಂಡೆಕ್ಟರ್, ಕ್ಲಿನರ್ ಗಳೂ ಈ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಪ್ರಯಾಣದ ನಂತರ ವಾಹನವನ್ನು ಪೂರ್ಣ ರೋಗಾಣುಮುಕ್ತ ಗೊಳಿಸಬೇಕು. ಶೇ 1 ಸಾಮಥ್ರ್ಯದ ಬ್ಲೀಚಿಂಗ್ ಮಿಶ್ರಣ, ಲೈಸಾಲ್ ಅಥವಾ ಸಿಲ್ ವೋಕ್ಸ್ / ಇಕೋ ಶೀಲ್ಡ್ ಇತ್ಯಾದಿ ಅಣುನಾಶಕ ವಸ್ತು ಬಳಸಿ ಈ ಕಾಯಕ ನಡೆಸಬೇಕು. ಕಿಟಿಕಿ ಗಾಜುಗಳನ್ನು ತೆರೆದು ಮುಂದಿನಪ್ರಯಾಣಕ್ಕೆ ಮುನ್ನ ವಾಹನ ಒಣಗುವಂತೆ ನೋಡಿಕೊಳ್ಳಬೇಕು.
         ಪ್ರಯಾಣಿಕರ ಗಮನಕ್ಕೆ:
   ಪ್ರಯಾಣಕ್ಕೆ ಮುನ್ನ ಯಾತ್ರಿಕರು ಜ್ವರ, ಕೆಮ್ಮು, ಗಂಟಲು ನೋವು ಇತ್ಯಾದಿ ರೋಗಲಕ್ಷಣವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಯಾತ್ರೆಯುದ್ದಕ್ಕೂ ಸೂಕ್ತ ರೀತಿಯ ಮಾಸ್ಕ್ ಧರಿಸಲೇ ಬೇಕು. ವಾಹನವೇರುವ ಮುನ್ನ, ಇಳಿಯುವ ಮುನ್ನ, ಕೈಗಳನ್ನು ಸ್ಯಾನಿಟೈಸರ್ ಬಳಸಿ ರೋಗಾಣುಮುಕ್ತಗೊಳಿಸಬೇಕು. ಯಾತ್ರೆ ವೇಳೆ ಸಾನಿಟೈಸರ್ ಪ್ರಯಾಣಿಕರ ಬಳಿಯೂ ಇರಬೇಕು. ಹೆಚ್ಚುವರಿ ಮಾಸ್ಕ್ ಜತೆಗಿರಬೇಕು. ವಾಹನದಲ್ಲಿ ಕುಳಿತುಕೊಳ್ಳುವ ವೇಳೆ ಸಾಮಾಜಿಕ ಅಂತರ ಪಾಲಿಸಬೇಕು.
       ಪ್ರಯಾಣ ವೇಳೆ ಸಾಧ್ಯವಾದಷ್ಟೂ ಕಡಿಮೆ ಲಗೇಜ್ ಹೊಂದಬೇಕು. ಅವನ್ನು ತಾವೇ ಹ್ಯಾಂಡಲ್ ಮಾಡುವಂತಿರಬೇಕು. ಪ್ರಯಾಣ ವೇಳೆ ಜತೆಗೆ ಕೇವಲ ಒಬ್ಬರು ಮಾತ್ರ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries