ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 11 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ನಾಲ್ಕು ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕದಿಂದ ಸೋಂಕು : ಮಂಗಲ್ಪಾಡಿ ಪಂಚಾಯತ್‍ನ 30 ವರ್ಷದ ಮಹಿಳೆ, 46, 30, 36 ವರ್ಷದ ಪುರುಷರು, 14, 3 ವರ್ಷ ಮತ್ತು 40 ದಿನಗಳ ವಯೋಮಾನದ ಮಕ್ಕಳು, ಮಧೂರು ಪಂಚಾಯತ್‍ನ 21 ವರ್ಷದ ಪುರುಷ, ಚೆಮ್ನಾಡ್ ಪಂಚಾಯತ್ ನ 46 ವರ್ಷದ ಮಹಿಳೆ, ಪನತ್ತಡಿ ಪಂಚಾಯತ್‍ನ 65 ವರ್ಷದ ಪುರುಷ ಸಂಪರ್ಕದಿಂದ ಸೋಂಕು ಖಚಿತಗೊಂಡವರು.
ಇತರ ರಾಜ್ಯ ಗಳಿಂದ ಬಂದವರು : ಮಂಗಳೂರಿನಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್‍ನ 26, 55 ವರ್ಷದ ಪುರುಷರು, ಬೆಂಗಳೂರಿನಿಂದ ಬಂದಿದ್ದ ಕಳ್ಳಾರ್ ಪಂಚಾಯತ್‍ನ 27 ವರ್ಷದ ಪುರುಷ ಸೋಂಕು ತಗುಲಿದವರು.
ವಿದೇಶಗಳಿಂದ ಆಗಮಿಸಿದವರು : ಶಾರ್ಜಾದಿಂದ ಬಂದಿದ್ದ ಚೆಂಗಳ ಪಂಚಾಯತ್‍ನ 30 ವರ್ಷದ ಮಹಿಳೆ, ಅಜ್ ಮಾನ್ ನಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್‍ನ 20 ವರ್ಷದ ಪುರುಷ, ದುಬಾಯಿಯಿಂದ ಬಂದಿದ್ದ ಅಜಾನೂರು ಪಂಚಾಯತ್‍ನ 27 ವರ್ಷದ ಪುರುಷ, ಕುವೈತ್‍ನಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್‍ನ 32 ವರ್ಷದ ಪುರುಷ ಕೋವಿಡ್ ಪಾಸಿಟಿವ್ ಆದವರು.
23 ಮಂದಿಗೆ ಕೋವಿಡ್ ನೆಗೆಟಿವ್ : ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 23 ಮಂದಿ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬದಿಯಡ್ಕ ಪಂಚಾಯತ್‍ನ 40 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್‍ನ 40 ವರ್ಷದ ಪುರುಷ, ಮಧೂರು ಪಂಚಾಯತ್ ನ 40 ವರ್ಷದ ಪುರುಷ, ಮೀಂಜ ಪಂಚಾಯತ್ ನ 26 ವರ್ಷದ ಪುರುಷ, ಕುಂಬಳೆ ಪಂಚಾಯತ್‍ನ 34,33,24 ವರ್ಷದ ಪುರುಷರು, ಪಳ್ಳಿಕ್ಕರೆ ಪಂಚಾಯತ್‍ನ 64 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ಪಂಚಾಯತ್ ನ 23,43 ವರ್ಷದ ಪುರುಷರು, ಮಂಜೇಶ್ವರ ಪಂಚಾಯತ್‍ನ 27 ವರ್ಷದ ಪುರುಷ.
ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಪುಲ್ಲೂರು-ಪೆರಿಯ ಪಂಚಾಯತ್‍ನ 27 ವರ್ಷದ ಪುರುಷ, ಮಂಜೇಶ್ವರ ಪಂಚಾಯತ್‍ನ 47,21 ವರ್ಷದ ಪುರುಷರು, ವರ್ಕಾಡಿ ಪಂಚಾಯತ್‍ನ 21 ವರ್ಷದ, ಪೈವಳಿಕೆ ಪಂಚಾಯತ್ ನ 26 ವರ್ಷದ ಮಹಿಳೆಯರು, ಮೊಗ್ರಾಲ್ ಪುತ್ತೂರು ಪಂಚಾಯತ್‍ನ 47,34 ವರ್ಷದ ಪುರುಷರು, ಎಣ್ಮಕಜೆ ಪಂಚಾಯತ್‍ನ 36 ವರ್ಷದ ಮಹಿಳೆ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಂಗಲ್ಪಾಡಿ ಪಂಚಾಯತ್‍ನ 27 ವರ್ಷದ ಪುರುಷ, ಮಧೂರು ಪಂಚಾಯತ್‍ನ 50 ವರ್ಷದ, ದೇಲಂಪಾಡಿ ಪಂಚಾಯತ್‍ನ 28 ವರ್ಷದ, ಪನತ್ತಡಿ ಪಂಚಾಯತ್‍ನ 30 ವರ್ಷದ ಪುರುಷರು ಸೋಂಕಿನಿಂದ ಮುಕ್ತರಾದವರು.
ಕಾಸರಗೋಡು ಜಿಲ್ಲೆಯಲ್ಲಿ 6246 ಮಂದಿ ನಿಗಾದಲ್ಲಿ :
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಶಂಕೆಯ ಹಿನ್ನೆಲೆಯಲ್ಲಿ 6246 ಮಂದಿ ನಿಗಾದಲ್ಲಿದ್ದಾರೆ.
ಇವರಲ್ಲಿ ಮನೆಗಳಲ್ಲಿ 5432 ಮಂದಿ, ಸಾಂಸ್ಥಿಕವಾಗಿ 814 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 391 ಮಂದಿ ನಿಗಾ ಪ್ರವೇಶಿಸಿದ್ದಾರೆ. 441 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 523 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1568 ಮಂದಿಯ ಫಲಿತಾಂಶ ಲಭಿಸಿಲ್ಲ.
ಕೇರಳದಲ್ಲಿ 722 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಗುರುವಾರ 722 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರೋಗ ಬಾಧಿತರಲ್ಲಿ 157 ಮಂದಿ ವಿದೇಶದಿಂದಲೂ, 62 ಮಂದಿ ಇತರ ರಾಜ್ಯಗಳಿಂದ ಬಂದವರು. 481 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 12 ಮಂದಿ ಆರೋಗ್ಯ ಕಾರ್ಯಕರ್ತರು, ಬಿಎಸ್‍ಎಫ್‍ನ ಐದು ಮಂದಿ, ಎಟಿಬಿಪಿಯ ಮೂವರಿಗೆ ರೋಗ ಬಾಧಿಸಿದೆ. 228 ಮಂದಿ ಗುಣಮುಖರಾಗಿದ್ದಾರೆ.
ಇಬ್ಬರು ಸಾವಿಗೀಡಾಗಿದ್ದಾರೆ. ತೃಶ್ಶೂರು ಜಿಲ್ಲೆಯ ತಂಬುರಾನ್ ಪಾಡಿ ನಿವಾಸಿ ಅನೀಶ್, ಕಣ್ಣೂರು ಪುಳಿಯನಬ್ರಾ ನಿವಾಸಿ ಮುಹಮ್ಮದ್ ಸಲೀಹ ಸಾವಿಗೀಡಾದರು.
ತಿರುವನಂತಪುರ-339, ಕೊಲ್ಲಂ-42, ಪತ್ತನಂತಿಟ್ಟ-39, ಕೋಟ್ಟಯಂ-13, ಆಲಪ್ಪುಳ-20, ಇಡುಕ್ಕಿ-26, ಎರ್ನಾಕುಳಂ-57, ತೃಶ್ಶೂರು-32, ಪಾಲ್ಘಾಟ್-25. ಮಲಪ್ಪುರಂ-42, ಕಲ್ಲಿಕೋಟೆ-33, ವಯನಾಡು-13, ಕಣ್ಣೂರು-23, ಕಾಸರಗೋಡು-18 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-1, ಕೊಲ್ಲಂ-17, ಪತ್ತನಂತಿಟ್ಟ-18, ಕೋಟ್ಟಯಂ-7, ಆಲಪ್ಪುಳ-13, ಇಡುಕ್ಕಿ-6, ಎರ್ನಾಕುಳಂ-7, ತೃಶ್ಶೂರು-8, ಪಾಲ್ಘಾಟ್-72, ಮಲಪ್ಪುರಂ-37, ಕಲ್ಲಿಕೋಟೆ-10, ವಯನಾಡು-1, ಕಣ್ಣೂರು-8, ಕಾಸರಗೋಡು-23 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 165 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 165 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 12948 ಆಗಿದೆ.
ಲಾಕ್ ಡೌನ್ ಉಲ್ಲಂಘನೆ : 8 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 8 ಕೇಸುಗಳನ್ನು ದಾಖಲಿಸಲಾಗಿದೆ. 27 ಮಂದಿಯನ್ನು ಬಂಧಿಸಲಾಗಿದೆ. ಯಾವುದೇ ವಾಹನಗಳನ್ನು ವಶಪಡಿಸಿಲ್ಲ. ಮೇಲ್ಪರಂಬ ಪೆÇಲೀಸ್ ಠಾಣೆಯಲ್ಲಿ 1, ಅಂಬಲತ್ತರ 1, ಹೊಸದುರ್ಗ 2, ಚಂದೇರ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3104 ಆಗಿದೆ. 40583 ಮಂದಿಯನ್ನು ಬಂಧಿಸಲಾಗಿದೆ. 1274 ವಾಹನಗಳನ್ನು ವಶಪಡಿಸಲಾಗಿದೆ.


