ಕಾಸರಗೋಡು: ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನೆ ಕೇಂದ್ರ ವ್ಯಾಪ್ತಿಯಲ್ಲಿ ಅಗ್ರಿ ಬಿಸಿನೆಸ್ ಇನ್ ಕ್ಯೂ ಬೇಟ್ ಮತ್ತು ಕೇರಳ ಸ್ಟಾರ್ಟ್ ಅಪ್ ಮಿಷನ್ ಜಂಟಿಯಾಗಿ ನಡೆಸುವ ವಾರಾಂತ್ಯದ ಕಲ್ಪ ಗ್ರೀನ್ ವೆಬ್ ಚಾಟ್ ಸೀರೀಸ್ ನಲ್ಲಿ ಜು.18ರಂದು ತರಗತಿ ನಡೆಯಲಿದೆ.
"ಸ್ಟಾರ್ಟ್ ಅಪ್ ಸಾಧ್ಯತೆಗಳು ಮತ್ತು ಆರ್ಥಿಕ ಸಹಾಯಗಳು" ಎಂಬ ವಿಷಯದಲ್ಲಿ ಕೇರಳ ಸ್ಟಾರ್ಟ್ ಅಪ್ ಮಿಷನ್ ಪ್ರಾಜೆಕ್ಟ್ ನಿರ್ದೇಶಕ ರಿಯಾಝ್ ಪಿ.ಎಂ., ಲೀಡ್ ಬ್ಯಾಂಕ್ ಮೆನೆಜರ್ ಕೆ.ಕಣ್ಣನ್ ತರಗತಿ ನಡೆಸುವರು. ಅಂದು ಬೆಳಗ್ಗೆ 10.30ಲ್ಲೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ತೋಟ ಬೆಳೆ ಸಂಶೋಧನೆ ಕೇಂದ್ರದ ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ. ಮುರಳೀಧರನ್ ನಿಯಂತ್ರಕರಾಗಿರುವರು. ನೋಂದಣಿ ಮತ್ತು ಮಾಹಿತಿಗಾಗಿತಿತಿತಿ.ಛಿಠಿಛಿಡಿiಚಿgಡಿibiz.iಟಿಎಂಬ ವೆಬ್ಸೈಟ್ ಸಂದರ್ಶಿಸಬಹುದು. ದೂರವಾಣಿ ಸಂಖ್ಯೆ: 8129182004.


