ಕಾಸರಗೋಡು: ಈಗ ಕೃಷಿಕರು ಬಳಸುತ್ತಿರುವ ನೀರಿನ ಪಂಪ್ ಗಳನ್ನು ಸೋಲಾರ್ ವ್ಯವಸ್ಥೆಗೆ ಬದಲಿಸುವ ನಿಟ್ಟಿನಲ್ಲಿ ಸೌಲಭ್ಯ ಏರ್ಪಡಿಸಲಾಗಿದೆ.
ಆನ್ ಡಿಗ್ರಿ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಲು ಕೇಂದ್ರ-ರಾಜ್ಯ ಸರಕಾರಗಳು ಶೇ 60 ಸಬ್ಸಿಡಿ ನೀಡುತ್ತಿವೆ. ಹೆಚ್ಚುವರಿಯಾಗಿ ಉತ್ಪಾದಿಸುವ ವಿದ್ಯುತ್ ಗ್ರಿಡ್ ಗೆ ನೀಡಬಹುದಾಗಿದ್ದು, ಆ ಮೂಲಕ ಕೃಷಿಕರಿಗೆ ಹೆಚ್ಚುವರಿ ಆದಾಯವೂ ಲಭಿಸಲಿದೆ.
ಕನಿಷ್ಠ 25 ಸೆಂಟ್ಸ್ ಜಾಗ ಹೊಂದಿರುವವರು ಈ ಸಂಬಂಧ ಅರ್ಜಿ ಸಲ್ಲಿಸಬಹುದು. ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಸ್ಥಾಪನೆಗೆ 10 ಚದರ ಅಡಿ ನೆರಳಿಲ್ಲದ ಪ್ರದೇಶ ಅಗತ್ಯವಿದೆ. ಕೆ.ಎಸ್.ಇ.ಬಿ ಕೃಷಿ ಸಂಪರ್ಕ ದ ವಿದ್ಯುತ್ ಶುಲ್ಕ ರಶೀದಿ, ಭೂ ತೆರಿಗೆ ರಶೀದಿ, ಆಧಾರ್ ಕಾರ್ಡ್ ನಕಲು ಸಹಿತ ಅನರ್ಟ್ ಕಾಸರಗೋಡು ಜಿಲ್ಲಾ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ 1690 ರೂ. ಆಗಿದೆ.
ವಿದ್ಯುತ್ ಇಲ್ಲದಲ್ಲಿ ಸೋಲಾರ್ ಪಂಪ್ ಸೆಟ್:
ವಿದ್ಯುತ್ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಕೃಷಿಕರಿಗೆ ಸೋಲಾರ್ ಪಂಪ್ ಸೆಟ್ ಒದಗಿಸುವ, ಡೀಸೆಲ್ ಪಂಪ್ ಸೆಟ್ ಬದಲಿಸಿ ಸೋಲಾರ್ ಪಂಪ್ ಸೆಟ್ ಸ್ಥಾಪಿಸುವ ಯೋಜನೆಗಳೂ ಇಲ್ಲಿವೆ.
ಸದ್ರಿ ವೇಳೆ ಒಂದೂವರೆ ಕಿ.ಮೀ. ಸುತ್ತಳತೆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಲಭಿಸದೇ ಇರುವ ಪ್ರದೇಶಗಳಲ್ಲಿ ವಾಸಿಸುವ ಕೃಷಿಕರು ಕೃಷಿ ಅಗತ್ಯಗಳಿಗಾಗಿ ಬಳಸುವ ನಿಟ್ಟಿನಲ್ಲಿ ಸ್ಟಾಡ್ ಓಲೋನ್ ಸೋಲಾರ್ ಪಂಪ್ ಸೆಟ್ ಸ್ಥಾಪಿಸಲಾಗುವುದು. ಸ್ಥಾಪಿಸುವ ಪಂಪ್ ಸೆಟ್ ಗಳಿಗೆ ಅನುಸಾರ ಎಂ.ಎನ್.ಆರ್. ಇ.ಬೆಂಚ್ ಮಾರ್ಕ್ ದರದ ಶೇ 60 ಕೇಂದ್ರ-ರಾಜ್ಯ ಸರಕಾರಗಳು ಸಬ್ಸಿಡಿ ರೂಪದಲ್ಲಿ ನೀಡಲಿವೆ.
ಜಾರಿ ವೇಳೆ ಡೀಸೆಲ್ ಪಂಪ್ ಸೆಟ್ ಬಳಸುವ ಕೃಷಿಕರಿಗಾಗಿ ಅವನ್ನು ಬದಲಿಸಿ ಸೋಲಾರ್ ಪಂಪ್ ಸ್ಥಾಪಿಸುವ ನಿಟ್ಟಿನಲ್ಲೂ ಈ ಸೌಲಭ್ಯ ದೊರೆಯಲಿದೆ. ಕನಿಷ್ಠ 25 ಸೆಂಟ್ಸ್ ಜಾಗ ಹೊಂದಿರುವ ಮಂದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 500 ರೂ. ಆಗಿದೆ.
ಸರಕಾರಿ ಸಂಸ್ಥೆಗಳಲ್ಲಿ ಆಫ್ ಗ್ರಿಡ್ ಸೋಲಾರ್ ಪವರ್ ಪ್ಲಾಂಟ್:
ಸರಕಾರಿ ಸಂಸ್ಥೆಗಳಲ್ಲಿ ಆಫ್ ಗ್ರಿಡ್ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸುವ ಯೋಜನೆ ಇಲ್ಲಿದೆ. ಹಗಲು ಹೊತ್ತಿನಲ್ಲಿ ವಿದ್ಯುತ್ ಬಳಕೆ ಅತ್ಯಧಿಕ ಪ್ರಮಾಣದಲ್ಲಿರುವ, ಜಾರಿಯಲ್ಲಿರುವ ವಿದ್ಯುತ್ ಶುಲ್ಕ ದರದಲ್ಲಿ ಗಣನೀಯ ಕಡಿತವುಂಟಾಗಬಹುದಾದ ಯೋಜನೆ ಇದಾಗಿದೆ. ಈ ಯೋಜನೆಗೆ ಎಂ.ಎನ್.ಆರ್.ಇ. ಬೆಂಚ್ ಮಾರ್ಕ್ ದರದ ಶೇ 30 ಸಬ್ಸಿಡಿ ದೊರೆಯಲಿದೆ.


