ಕಾಸರಗೋಡು: ಅಡ್ಡ ಹಾದಿಗಳ ಮೂಲಕ ಅಕ್ರಮವಾಗಿ ಜನರನ್ನು ಕಾಸರಗೋಡು ಜಿಲ್ಲೆಗೆ ಕರೆತರುವ ಕೆಲವರ ವ್ಯವಸ್ಥಿತ ಸಂಚಿನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ರೀತಿ ಅಕ್ರಮವಾಗಿ ಜನರನ್ನು ಕರೆತರುವ ಕೆಲವು ಏಜೆಂಟರಿದ್ದು, ಅವರಿಗೆ ಹಣ ನೀಡಿ ಕೆಲವರು ಈ ಕಾಯಕ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿಪ್ರದೇಶಗಳಲ್ಲಿ, ಅಡ್ಡದಾರಿಗಳಲ್ಲಿ ಬಿಗಿ ಪಹರೆ ಏರ್ಪಡಿಸಲಾಗಿದೆ.
ಇದೇ ಪ್ರಕರಣದಲ್ಲಿ ಚಟುವಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಸಾಜನ್ ಉಪ್ಪಳ ಎಂಬಾತನನ್ನು ಮಂಜೇಶ್ವರ ಪೆÇಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.


