ತಿರುವನಂತಪುರ: ಆರೋಗ್ಯ ಇಲಾಖೆ ರಾಜ್ಯದ ಕೋವಿಡ್ ರೋಗಿಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಶೇಕಡಾ 95.8 ರಷ್ಟು ಕೋವಿಡ್ ರೋಗಿಗಳು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದವರಾಗಿದ್ದಾರೆ ಎಂದು ದತ್ತಾಂಶಗಳು ತೋರಿಸುತ್ತವೆ. ರಾಜ್ಯದಲ್ಲಿ ಕೋವಿಡ್ ಬಲಿಪಶುಗಳಲ್ಲಿ ಶೇಕಡಾ 73.4 ರಷ್ಟು ಪುರುಷರು ಎಂದು ಅಧ್ಯಯನಗಳು ಬೊಟ್ಟುಮಾಡಿವೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. ಕೋವಿಡ್ ರೋಗಿಗಳಲ್ಲಿ ಹೆಚ್ಚಿನವರು ಸಂಪರ್ಕದ ಮೂಲಕ ರೋಗ ಬಾಧಿತರಾದವರು.
ರಾಜ್ಯದಲ್ಲಿ ಸುಮಾರು 95.8 ರಷ್ಟು ಕೋವಿಡ್ ರೋಗಿಗಳು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಕೇವಲ 3.6 ರಷ್ಟು ಮಂದಿ ಮಾತ್ರ ಗಂಭೀರ ರೋಗಲಕ್ಷಣಗಳನ್ನು ಹೊಂದಿದವರಾಗಿದ್ದಾರೆ. ಕೇವಲ 0.6 ಪ್ರತಿಶತದಷ್ಟು ಜನರು ಮಾತ್ರ ಅತಿ ತೀವ್ರ ರೋಗಲಕ್ಷಣಗಳನ್ನು ಹೊಂದಿದವವರಾಗಿದ್ದಾರೆ. ಆರೋಗ್ಯ ಇಲಾಖೆ 500 ರೋಗಿಗಳ ಕ್ಲಿನಿಕಲ್ ಅಧ್ಯಯನದ ಡೇಟಾವನ್ನು ಬಿಡುಗಡೆ ಮಾಡಿ ಈ ಅಂಕಿಅಂಶ ತಿಳಿಸಿದೆ. ರೋಗ ತೀವ್ರವಾಗಿರುವ ಚೀನಾ ಮತ್ತು ಇಟಲಿಗೆ ಹೋಲಿಸಿದರೆ, ರಾಜ್ಯವು ಗಮನಾರ್ಹ ಲಕ್ಷಣಗಳು ಮತ್ತು ಹೆಚ್ಚು ತೀವ್ರವಾದ ರೋಗವನ್ನು ಹೊಂದಿರುವ ಜನರನ್ನು ಕಡಿಮೆ ಹೊಂದಿದೆ. ಆದರೆ ಸೌಮ್ಯ ರೋಗಲಕ್ಷಣಗಳ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ.
ಶೇ. 42 ರಷ್ಟು ಯಾವುದೇ ಕೋವಿಡ್ ಲಕ್ಷಣಗಳಿಲ್ಲ!
ರಾಜ್ಯದ ಶೇ. 42 ಜನರಿಗೆ ಕೋವಿಡ್ ಲಕ್ಷಣಗಳಿಲ್ಲದೆ ಸೋಂಕು ಬಾಧಿಸಿದೆ. ರೋಗಿಗಳಲ್ಲಿ, 73.4 ಪ್ರತಿಶತ ಪುರುಷರು ಮತ್ತು 26.6 ಪ್ರತಿಶತ ಮಹಿಳೆಯರು ಒಳಗೊಂಡಿದ್ದಾರೆ. 500 ರೋಗಿಗಳಲ್ಲಿ, 414 ಮಂದಿಗೆ ಇತರ ಗಂಭೀರ ಕಾಯಿಲೆ ಇರಲಿಲ್ಲ. ಇತರ ಕಾಯಿಲೆಗಳಿಂದ ಬಳಲುತ್ತಿರುವ 86 ಜನರಲ್ಲಿ, 9.2 ಪ್ರತಿಶತದಷ್ಟು ಜನರು ಮಧುಮೇಹ ಮತ್ತು ಶೇ.9 ರಷ್ಟು ಮಂದಿ ಅಧಿಕ ರಕ್ತದೊತ್ತಡವನ್ನು ಹೊಂದಿದವರಾಗಿದ್ದಾರೆ. 1.6 ರಷ್ಟು ಜನರು ಆಸ್ತಮಾದಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿದವರಾಗಿದ್ದಾರೆ.
ಚಿಕಿತ್ಸೆ ಎಷ್ಟು ಸಮಯ?:
ಕೋವಿಡ್ ರೋಗಲಕ್ಷಣಗಳನ್ನು ತೋರಿಸದವರಲ್ಲಿ, ಒಂದು ವಾರದೊಳಗೆ ಶೇ. 17.6 ಜನರನ್ನು ಗುಣಮುಖರಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಶೇ. 23.8 ಮಂದಿ ಎರಡು ವಾರಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಶೇ.8.6 ಮಂದಿಗಳಿಗೆ ಒಂದು ತಿಂಗಳ ಚಿಕಿತ್ಸೆ ಬೇಕಾಗಿದೆ. 1.9 ರಷ್ಟು ಜನರಿಗೆ ಒಂದು ತಿಂಗಳಿಗಿಂತ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಒಣ ಕೆಮ್ಮು ಮತ್ತು ಅತಿಸಾರದಂತಹ ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿರುವ (ವರ್ಗ ಎ), 14.1 ಪ್ರತಿಶತದವರಿಗೆ ಒಂದು ತಿಂಗಳ ಚಿಕಿತ್ಸೆಯ ಅಗತ್ಯವಿದೆ.
ಒಂದು ತಿಂಗಳಿಗಿಂತ ಹೆಚ್ಚು ಕಾಲ ಚಿಕಿತ್ಸೆ:
ಇತರ ಗಂಭೀರ ಕಾಯಿಲೆಗಳು, ಗರ್ಭಿಣಿಯರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಕೇವಲ 23 ಪ್ರತಿಶತದಷ್ಟು ಜನರಿಗೆ ಎರಡು ವಾರಗಳ ಚಿಕಿತ್ಸೆಯ ಅಗತ್ಯವಿದೆ. ಒಂದು ತಿಂಗಳ ಚಿಕಿತ್ಸೆಯ ನಂತರ ಶೇಕಡಾ 23.9 ರಷ್ಟು ಜನರನ್ನು ಬಿಡುಗಡೆ ಮಾಡಲಾಗಿದೆ. 2.7 ರಷ್ಟು ಜನರಿಗೆ ಒಂದು ತಿಂಗಳಿಗಿಂತ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ವರ್ಗ ಸಿ ಉಸಿರಾಟದ ತೊಂದರೆ ಮತ್ತು ಕಡಿಮೆ ರಕ್ತದೊತ್ತಡದಂತಹ ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಒಳಗೊಂಡಿದೆ. ಈ ವಿಭಾಗದಲ್ಲಿ 21 ರೋಗಿಗಳಿದ್ದರು. ಆ ಪೈಕಿ 23.8 ರಷ್ಟು ಜನರಿಗೆ ಒಂದು ತಿಂಗಳ ಚಿಕಿತ್ಸೆಯ ಅಗತ್ಯವಿದೆ. ಒಬ್ಬ ವ್ಯಕ್ತಿಗೆ ಒಂದು ತಿಂಗಳಿಗಿಂತ ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡುಬಂದಿದೆ.
ವೆಂಟಿಲೇಟರ್ ಬೇಕೇ?:
ರಾಜ್ಯದಲ್ಲಿ ತೀವ್ರ ಕೋವಿಡ್ ಹಂತದಲ್ಲಿದ್ದರೂ ಕೇವಲ ಒಂದು ಶೇಕಡಾ ಜನರು ಮಾತ್ರ ಐಸಿಯು ಬಳಸಿದ್ದಾರೆ. ಶೇ.0.6 ಮಂದಿ ವೆಂಟಿಲೇಟರ್ ಬಳಸಿದ್ದಾರೆ. ನ್ಯುಮೋನಿಯಾ ಶೇ. 1, ಮಯೋಕಾರ್ಡಿಟಿಸ್ ಶೇ.0.6, ಮೂತ್ರಪಿಂಡ ಕಾಯಿಲೆ ಶೇ.0.6 ಮತ್ತು ಶ್ವಾಸಕೋಶದ ಕಾಯಿಲೆ ಶೇ.1 ಮಂದಿಗಳಿಗೆ ವೆಂಟಿಲೇಟರ್ ಬಳಸಿದ್ದಾರೆ.
ಕೇರಳವನ್ನು ಇತರ ದೇಶಗಳೊಂದಿಗೆ ಹೋಲಿಸಿದಾಗ:
ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರು:
ಕೇರಳ ಶೇ.95.8
ಚೀನಾ ಶೇ.80
ಇಟಲಿ ಶೇ.57.2
ಗಮನಾರ್ಹ ಲಕ್ಷಣಗಳು:
ಕೇರಳ ಶೇ.3.6
ಚೀನಾ ಶೇ.13.8
ಇಟಲಿ ಶೇ.22
ತೀವ್ರ ಲಕ್ಷಣಗಳು:
ಕೇರಳ ಶೇ.0.6
ಚೀನಾ ಶೇ.6.2
ಇಟಲಿ ಶೇ.4.7
ಜ್ವರದಿಂದ ಬಳಲುತ್ತಿರುವ ರೋಗಿಗಳು:
ಕೇರಳ ಶೇ.24.2
ಚೀನಾ ಶೇ.87.9
ಭಾರತ ಶೇ.60