ಕಾಸರಗೋಡು: ಮಂಗಳವಾರ ರಾಜ್ಯಾದ್ಯಂತ ಕೊರೊನಆ ವೈರಸ್ ಬಾಧೆ ವ್ಯಾಪಕ ಪ್ರಮಾಣದಲ್ಲಿ ಜನರಲ್ಲಿ ದೃಢಪಟ್ಟಿದ್ದು ಸಾಮುದಾಯಿಕ ಹರಡುವಿಕೆಯ ಸನಿಹ ಬಂದಿದೆ. ರಾಜ್ಯದಲ್ಲಿ ಇಂದು 608 ಮಂದಿಗೆ ರೋಗ ದೃಢಪಟ್ಟಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 44 ಮಂದಿಗೆ ಸೋಂಕು ದೃಢೀಕರಿಸಲಾಗಿದೆ. ಇವರಲ್ಲಿ 20 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. 9 ಮಂದಿ ಇತರ ರಾಜ್ಯಗಳಿಂದ ಬಂದವರು ಹಾಗು 15 ಮಂದಿ ವಿದೇಶದಿಂದ ಬಂದವರೆಂದು ಡಿಎಂಒ ವಿ.ರಾಮದಾಸ್ ತಿಳಿಸಿದ್ದಾರೆ. ಐದು ಮಂದಿ ಗುಣಮುಖರಾಗಿದ್ದಾರೆ.
ಸಂಪರ್ಕದ ಮೂಲಕ ಮಂಜೇಶ್ವರ ಪಂಚಾಯತ್‍ನ 42 ವರ್ಷದ ವ್ಯಕ್ತಿ, 62 ವರ್ಷದ ವ್ಯಕ್ತಿ, ಮೀಂಜ ಗ್ರಾಮ ಪಂಚಾಯತ್‍ನ 62, 32 ವರ್ಷದ ವ್ಯಕ್ತಿಗಳು, ಚೆಂಗಳ ಪಂಚಾಯತ್‍ನ 26, 62, 29 ವರ್ಷದ ಮಹಿಳೆ, 32, 16, 34, 37, 75 ವರ್ಷದ ಪುರುಷರು, ಚೆಮ್ನಾಡ್ ಪಂಚಾಯತ್‍ನ 26 ವರ್ಷದ ಮಹಿಳೆ, 54 ವರ್ಷದ ವ್ಯಕ್ತಿ, ಮಧೂರು ಪಂಚಾಯತ್‍ನ 26 ರ ಮಹಿಳೆ, 26, 35 ವರ್ಷದ ಪುರುಷರು, ಕಾಸರಗೋಡು ನಗರಸಭೆಯ 48 ವರ್ಷದ ಇಬ್ಬರು, ಮೊಗ್ರಾಲ್‍ಪುತ್ತೂರು ಪಂಚಾಯತ್‍ನ 23ರ ಮಹಿಳೆಗೆ ರೋಗ ಬಾಧಿಸಿದೆ.
ವಿದೇಶದಿಂದ ಬಂದವರು : ಶಾರ್ಜಾದಿಂದ ಬಂದ ಚೆಮ್ನಾಡ್ ಪಂಚಾಯತ್‍ನ 45, ಪಳ್ಳಿಕೆರೆ ಪಂಚಾಯತ್‍ನ 33 ವರ್ಷದ ವ್ಯಕ್ತಿ, ಕಾರಡ್ಕ ಪಂಚಾಯತ್‍ನ 58 ವರ್ಷ, ಖತ್ತರ್‍ನಿಂದ ಬಂದ ಮಡಿಕೈ ಪಂಚಾಯತ್‍ನ 35 ವರ್ಷ, ಕಾಸರಗೋಡು ನಗರಸಭೆ 48 ವರ್ಷ, ದುಬೈಯಿಂದ ಬಂದ ಚೆಮ್ನಾಡ್ ಪಂಚಾಯತ್‍ನ 32 ವರ್ಷ, ಬದಿಯಡ್ಕ ಪಂಚಾಯತ್‍ನ 29 ವರ್ಷದ, ಕಾಂಞಂಗಾಡ್ ನಗರಸಭೆಯ 28 ವರ್ಷ, ಪಳ್ಳಿಕೆರೆ ಪಂಚಾಯತ್‍ನ 29 ವರ್ಷ, ಅಜಾನೂರು ಪಂಚಾಯತ್‍ನ 35 ವರ್ಷ, ಕಾರಡ್ಕ ಪಂಚಾಯತ್‍ನ 40 ವರ್ಷ ಕಾಸರಗೋಡು ನಗರಸಭೆಯ 33, 26 ವರ್ಷದ ವ್ಯಕ್ತಿಗಳು, ಕುವೈತ್‍ನಿಂದ ಬಂದ ಪಡನ್ನ ಪಂಚಾಯತ್‍ನ 40 ವರ್ಷ, ಸೌದಿಯಿಂದ ಬಂದ ವಲಿಯಪರಂಬ ಪಂಚಾಯತ್‍ನ 52 ವರ್ಷದ ವ್ಯಕ್ತಿಗೆ ರೋಗ ಬಾಧಿಸಿದೆ.
ಇತರ ರಾಜ್ಯಗಳಿಂದ ಆಗಮಿಸಿದವರು :
ಮಂಗಳೂರಿನಿಂದ ಆಗಮಿಸಿದ್ದ ಚೆಂಗಳ ಪಂಚಾಯತ್‍ನ 27 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್‍ನ 35 ವರ್ಷದ ನಿವಾಸಿ, ಉದುಮ ಪಂಚಾಯತ್‍ನ ಒಂದೇ ಕುಟುಂಬದ ಸದಸ್ಯರಾದ 3, 6 ವರ್ಷದ ಹೆಣ್ಣು ಮಕ್ಕಳು, 31 ವರ್ಷದ ವ್ಯಕ್ತಿ, ಚೆಮ್ನಾಡ್ ಪಂಚಾಯತ್‍ನ 38 ವರ್ಷದ ವ್ಯಕ್ತಿ, ಕರ್ನಾಟಕದಿಂದ ಬಂದಿದ್ದ ಕುಂಬಳೆ ಪಂಚಾಯತ್‍ನ 55 ವರ್ಷದ ನಿವಾಸಿ, ಮೊಗ್ರಾಲ್ ಪಂಚಾಯತ್ ನಿವಾಸಿ 36 ವರ್ಷದ ನಿವಾಸಿ, ಹೈದರಾಬಾದ್‍ನಿಂದ ಆಗಮಿಸಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 30 ವರ್ಷದ ನಿವಾಸಿಗಳು ಸೋಂಕು ಬಾಧಿತರು.
ಕೇರಳದಲ್ಲಿ 608 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಮಂಗಳವಾರ 608 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಈ ತನಕ ದೃಢಗೊಂಡ ರೋಗಿಗಳ ಸಂಖ್ಯೆ ಅತೀ ಹೆಚ್ಚಿನದು. ಆಲಪ್ಪುಳ ಚೆನಕರದ 47 ರ ಹರೆಯದ ನಸೀರ್ ಉಸ್ಮಾನ್ ಕುಟ್ಟಿ ಸಾವಿಗೀಡಾಗಿದ್ದಾರೆ. ಇವರು ಸೌದಿ ಅರೇಬಿಯಾದಿಂದ ಬಂದಿದ್ದರು. ಇದೇ ವೇಳೆ 183 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರಲ್ಲಿ 130 ಮಂದಿ ವಿದೇಶದಿಂದಲೂ, 68 ಮಂದಿ ಇತರ ರಾಜ್ಯಗಳಿಂದ ಬಂದವರು. 396 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಆರೋಗ್ಯ ಕಾರ್ಯಕರ್ತರು-8, ಬಿಎಸ್‍ಎಫ್-1, ಐಟಿಬಿಪಿ-2, ಸಿಎಸ್‍ಎಫ್-2 ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ. 26 ಮಂದಿಗೆ ರೋಗಕ್ಕೆ ಕಾರಣ ತಿಳಿದು ಬಂದಿಲ್ಲ.
ತಿರುವನಂತಪುರ-201, ಕೊಲ್ಲಂ-23, ಆಲಪ್ಪುಳ-34, ಪತ್ತನಂತಿಟ್ಟ-3, ಕೋಟ್ಟಯಂ-25, ಎರ್ನಾಕುಳಂ-70, ತೃಶ್ಶೂರು-42, ಪಾಲ್ಘಾಟ್-26, ಮಲಪ್ಪುರಂ-58, ಕಲ್ಲಿಕೋಟೆ-58, ಕಣ್ಣೂರು-12, ವಯನಾಡು-12, ಕಾಸರಗೋಡು-44 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-15, ಕೊಲ್ಲಂ-2, ಆಲಪ್ಪುಳ-17, ಕೋಟ್ಟಯಂ-5, ಎರ್ನಾಕುಳಂ-2, ತೃಶ್ಶೂರು-9, ಪಾಲ್ಘಾಟ್-49, ಮಲಪ್ಪುರಂ-9, ಕಲ್ಲಿಕೋಟೆ-21, ಕಣ್ಣೂರು-9, ಕಾಸರಗೋಡು-5 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 194 ಮಂದಿ ವಿರುದ್ಧ ಕೇಸು :
ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ 194 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗಿರುವ ಕೇಸುಗಳ ಸಂಖ್ಯೆ 12595 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 16 ಕೇಸುಗಳ ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 16 ಕೇಸುಗಳನ್ನು ದಾಖಲಿಸಲಾಗಿದೆ. 27 ಮಂದಿಯನ್ನು ಬಂಧಿಸಲಾಗಿದ್ದು, ಮೂರು ವಾಹನಗಳನ್ನು ವಶಪಡಿಸಲಾಗಿದೆ. ಕಾಸರಗೋಡು ನಗರ ಠಾಣೆಯಲ್ಲಿ 2 ಕೇಸುಗಳು, ಆದೂರು 2, ಬದಿಯಡ್ಕ 1, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 2, ನೀಲೇಶ್ವರ 1, ಚಂದೇರ 3, ಚೀಮೇನಿ 1, ಚಿತ್ತಾರಿಕಲ್ 1 ಕೇಸು ದಾಖಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3086 ಆಗಿದೆ. 4025 ಮಂದಿಯನ್ನು ಬಂಧಿಸಲಾಗಿದೆ. 1269 ವಾಹನಗಳನ್ನು ವಶಪಡಿಸಲಾಗಿದೆ.



