HEALTH TIPS

ಕೇಂದ್ರದಿಂದ ಕೇರಳಕ್ಕೆ 1388 ಕೋಟಿ ರೂ. ಆಹಾರ ಧಾನ್ಯ

            ತಿರುವನಂತಪುರ:: ಕೋವಿಡ್ ಪ್ರತಿರೋಧದ ಅಂಗವಾಗಿ ಕೇಂದ್ರ ಸರಕಾರ ಜಾರಿಗೊಳಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ (ಪಿಎಂಜಿಕೆಎವೈ) ಪ್ರಕಾರ ಕೇರಳಕ್ಕೆ 1388 ಕೋಟಿ ರೂಪಾಯಿಗಳ ಆಹಾರ ಸಾಮಾಗ್ರಿ ಲಭಿಸಲಿದೆ.
         ಐದನೇ ತಿಂಗಳಿಗೆ ವಿಸ್ತರಿಸಿದ ಯೋಜನೆಯ ದ್ವಿತೀಯ ಹಂತದಲ್ಲಿ 3.87 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸಲಾಗುವುದು.
       1.54 ಕೋಟಿ ಮಂದಿಗೆ ಇದರ ಪ್ರಯೋಜನ ಲಭಿಸಲಿದೆ. ಮೊದಲ ಹಂತದಲ್ಲಿ 2020 ಎಪ್ರಿಲ್‍ನಿಂದ ಜೂನ್‍ವರೆಗೆ 2.32 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉಚಿತವಾಗಿ ವಿತರಿಸಲು ಕೇರಳಕ್ಕೆ ಒದಗಿಸಲಾಗಿದೆ ಯೆಂದು ಫುಡ್ ಕಾರ್ಪರೇಶನ್ ಆಫ್ ಇಂಡಿಯಾ ತಿಳಿಸಿದೆ. ಜುಲೈಯಿಂದ ಆರಂಭಿಸಿದ ದ್ವಿತೀಯ ಹಂತದಲ್ಲಿ 0.632 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಹಾಗು 0.142 ಲಕ್ಷ ಮೆಟ್ರಿಕ್ ಟನ್ ಗೋಧಿ ಪ್ರತಿ ತಿಂಗಳು ಕೇರಳಕ್ಕೆ ಮಂಜೂರು ಮಾಡಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries