ಕಾಸರಗೋಡು: ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದ ತರಕಾರಿ ಅಂಗಡಿಯ ನಾಲ್ಕು ಮಂದಿ ಮತ್ತು ಅದರ ಪಕ್ಕದ ಹಣ್ಣು ಹಂಪಲು ಅಂಗಡಿಯೊಂದರ ಓರ್ವ ಕಾರ್ಮಿಕನಿಗೆ ಕೋವಿಡ್ 19 ದೃಢೀಕರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಆ ಅಂಗಡಿಗಳು ಮತ್ತು ಪರಿಸರದ ಇತರ ಎಲ್ಲಾ ಅಂಗಡಿಗಳ ಮಾಲಕರು, ನೌಕರರನ್ನು ರ್ಯಾಪಿಡ್ ತಪಾಸಣೆಗೊಳಪಡಿಸಲಾಗಿದೆ.
ಕಾಸರಗೋಡು ಸರಕಾರಿ ಹೈಸ್ಕೂಲ್‍ನಲ್ಲಿ ಸುಮಾರು 50 ಕ್ಕೂ ಹೆಚ್ಚು ಮಂದಿಯನ್ನು ರ್ಯಾಪಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಅವರ ಆರೋಗ್ಯ ತಪಾಸಣೆ ಮತ್ತು ಗಂಟಲ ದ್ರವ ತೆಗೆದು ಕೋವಿಡ್ ತಪಾಸಣಾ ಲ್ಯಾಬ್‍ಗೆ ಕಳುಹಿಸಿಕೊಡಲಾಗಿದೆ. ಪರೀಕ್ಷಾ ಫಲಿತಾಂಶ ಲಭಿಸಿದ ಬಳಿಕವಷ್ಟೇ ಇವರಿಗೆ ಸಂಪರ್ಕ ಮೂಲಕ ಕೋವಿಡ್ ತಗಲಿದೆಯೇ ಎಂಬುದನ್ನು ಖಚಿತಪಡಿಸಬಹುದು.
ಕೋವಿಡ್ ರೋಗ ಹರಡುವುದನ್ನು ಪತ್ತೆಹಚ್ಚಲು ತುರ್ತಾಗಿ ತಪಾಸಣೆ ನಡೆಸುವ ಕ್ರಮವಾಗಿದೆ ರ್ಯಾಪಿಡ್ ಟೆಸ್ಟ್.


