ಕಾಸರಗೋಡು: ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಹೊರಡಿಸಿದ ಸಾರ್ವಜನಿಕ ವರ್ಗಾವಣೆ ಆದೇಶ ಮಾನದಂಡಗಳನ್ನು ಪಾಲಿಸದೆ ಮಾಡಲಾಗಿದೆ ಎಂದೂ ಈ ಆದೇಶವನ್ನು ಪುನರ್ ಪರಿಶೀಲಿಸಿ ಅರ್ಹರಾದ ಎಲ್ಲಾ ನೌಕರರಿಗೂ ವರ್ಗಾವಣೆ ಪಕ್ಷಪಾತ ರಹಿತವಾಗಿ ಮಂಜೂರು ಮಾಡಬೇಕೆಂದು ಎನ್‍ಜಿಒ ಸಂಘ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದವರ ಅಂತಿಮ ಯಾದಿ ಪ್ರಕಟಿಸಲಾಗಿದೆಯಾದರೂ ಅದನ್ನು ಬುಡಮೇಲುಗೊಳಿಸಿ ಆಡಳಿತ ಬೆಂಬಲಿತ ಸಂಘಟನೆಗಳಿಗೆ ಸೇರಿದವರಿಗೆ ಮಾತ್ರ ವರ್ಗಾವಣೆ ನೀಡಿದೆ.
ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಸ್ತುತ್ಯಾರ್ಹವಾದ ಚಟುವಟಿಕೆ ನಡೆಸಲು ನೌಕರ ವರ್ಗಾವಣೆ ಕೂಡ ಈ ರೀತಿಯಲ್ಲಿ ತಡೆಹಿಡಿಯಲಾಗಿದೆ. ತೀರ ಪ್ರದೇಶದ ಪಂಚಾಯತ್‍ಗಳಲ್ಲೂ, ಜಿಲ್ಲಾ ಕಚೇರಿಗಳಲ್ಲೂ ಈ ಬಾರಿ ಸಂಘಟನೆಯ ಪರಿಗಣನೆ ನೀಡಿ ಮಾತ್ರವೇ ವರ್ಗಾವಣೆ ನೀಡಲಾಗಿದೆ ಎಂದು ಎನ್‍ಜಿಒ ಸಂಘ್ ದೂರಿದೆ.
ಜಿಲ್ಲಾಧ್ಯಕ್ಷ ಎಂ.ಗಂಗಾಧರನ್ ಅಧ್ಯಕ್ಷತೆ ವಹಿಸಿದರು. ಪಿ.ಪಿ.ಪೀತಾಂಬರನ್, ಸಿ.ವಿಜಯ, ಪೂವಪ್ಪ ಶೆಟ್ಟಿ, ಕರುಣಾಕರನ್ ಮೊದಲಾದವರು ಮಾತನಾಡಿದರು.