ಕಾಸರಗೋಡು: ಇನ್ನು ಮುಂದೆ ಕಲೆಬೆರಕೆ ರಹಿತ ಆಹಾರ ಸೇವಿಸಬಹುದು. ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿವೆ ಗ್ರಾಮೀಣ ಭಕ್ಷ್ಯಗಳೊಂದಿಗೆ ಕುಟುಂಬಶ್ರೀ ಜನಪರ ಹೋಟೆಲ್ ಗಳು.
ಒಟ್ಟು 12 ಜನಪರ ಹೋಟೆಲ್ ಗಳು ಕಾಸರಗೋಡು ಜಿಲ್ಲೆಯಲ್ಲಿವೆ. ಇಲ್ಲಿ ದಿನಕ್ಕೆ ಸರಾಸರಿ 150 ಮಂದಿಗೆ ಮಧ್ಯಾಹ್ನ ಭೋಜನ 20 ರೂ.ದರದಲ್ಲಿ ವಿತರಣೆಗೊಳ್ಳುತ್ತಿವೆ. ರಾಜ್ಯ ಸರಕಾರದ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ಜನಪರ ಹೋಟೆಲ್ ಗಳ ಚಟುವಟಿಕೆ ಆರಂಭಗೊಂಡು 3 ತಿಂಗಳು ಪೂರ್ಣಗೊಂಡಿರುವ ವೇಳೆ ಸಾರ್ವಜನಿಕ ಬೆಂಬಲವೂ ವ್ಯಾಪಕವಾಗಿದೆ.
ಕಾಸರಗೋಡು ಜಿಲ್ಲೆಯ ಪ್ರಥಮ ಜನಪರ ಹೋಟೆಲ್ ಏ.7ರಂದು ತ್ರಿಕರಿಪುರ ಗ್ರಾಮಪಂಚಾಯತ್ ನಲ್ಲಿ ಚಟುವಟಿಕೆ ಆರಂಭಿಸಿತ್ತು. ತದನಂತರ ವಿವಿಧ ಗ್ರಾಮಪಂಚಾಯತ್ ಗಳಲ್ಲಿ 12 ಜನಪರ ಹೋಟೆಲ್ ಗಳು ಆರಂಭಗೊಂಡುವು. ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಈ ಹೋಟೆಲ್ ಗಳು ಚಟುವಟಿಕೆ ನಡೆಸುತ್ತಿವೆ.
20 ರೂ. ದರದಲ್ಲಿ ಲಭಿಸುವ ಆರೋಗ್ಯ ಪೂರ್ಣ ಭೋಜನ ಅನ್ನ, ಸಾಂಬಾರ್, ಗಸಿ, ಉಪ್ಪಿನಕಾಯಿಯನ್ನು ಹೊಂದಿದೆ. ಅಗತ್ಯವಿರುವವರಿಗೆ ಹೆಚ್ಚುವರಿಯಾಗಿ ಕರಿದ ಮೀನು, ಆಮ್ಲೆಟ್ ಕೈಗೆಕುವ ದರದಲ್ಲಿ ಲಭ್ಯವಿವೆ. ಕೆಲವೆಡೆ ಕುಚುಲಕ್ಕಿ ಗಂಜಿಯೂ ಲಭ್ಯವಿದೆ.
ಪ್ರತಿ ಭೋಜನ್ಕೆ ಹತ್ತು ರೂ.ನಂತೆ ಜನಪರ ಹೋಟೆಲ್ ಗಳಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ನೀಡುತ್ತದೆ. ಹೋಟೆಲ್ ಗೆ ಅಗತ್ಯವಿರುವ ಅಕ್ಕಿ ಸಿವಿಲ್ ಸಪ್ಲೈಸ್ ಇಲಾಖೆಯಿಂದ ಕಿಲೋಗೆ 10.90 ರೂ. ದರದಲ್ಲಿ ತಿಂಗಳೊಂದಕ್ಕೆ 6 ಕಿಟ್ ರೀತಿಯಲ್ಲಿ ಹೋಟೆಲ್ ನಡೆಸುವವರಿಗೆ ಲಭಿಸುತ್ತದೆ. ಇತರ ಧಾನ್ಯಗಳು ರಖಂ ದರದಲ್ಲಿ ದೊರೆಯುತ್ತದೆ. ಹೋಟೆಲ್ ಗಳಿಗೆ ಅಗತ್ಯವಿರುವ ನೀರು, ವಿದ್ಯುತ್ ಸಂಪರ್ಕ, ಕಟ್ಟಡ ಸೌಲಭ್ಯ ಆಯಾ ಸ್ಥಳೀಯಾಡಳಿತ ಸಂಸ್ಥೆ ಒದಗಿಸುತ್ತದೆ. ಜಿಲ್ಲಾ ಮಿಷನ್ ರಿವಾಲ್ವಿಂಗ್ ಫಂಡ್ ನಿಂದ ಹೋಟೆಲ್ ಗೆ ನೇಆದ ಪೀಠೋಕರಣ, ಪಾತ್ರೆಗಳು ಇತ್ಯಾದಿ ಅಗತ್ಯದ ಪರಿಕರಗಳ ಖರೀದಿಗೆ ಹಣ ದೊರೆಯುತ್ತದೆ.
ಪ್ರತಿ ಹೋಟೆಲ್ ನ್ನು ಕನಿಷ್ಠ ಮೂವರು ಜತೆ ಸೇರಿ ನಡೆಸುತ್ತಿದ್ದಾರೆ. ಯೋಜನೆ ಪ್ರಕರ ಹತ್ತು ಮಂದಿ ಸೇರಿ ಒಂದು ಹೋಟೆಲ್ ನಡೆಸಬಹುದಾಗಿದೆ. ಸಮವಸ್ತ್ರ ಧಾರಣೆಯೊಂದಿಗೆ ಕುಟುಂಬಶ್ರೀ ಕಾರ್ಯಕರ್ತರು ಹೋಟೆಲ್ಗಳಲ್ಲಿ ಕಾಯಕ ನಡೆಸುತ್ತಿದ್ದಾರೆ. ಕೋವಿಡ್ ಪ್ರತಿರೋಧದ ಎರಡನೇ ಹಂತದಲ್ಲಿ ಸಮುದಾಯ ಅಡುಗೆಮನೆಗಳಗಿ ಬಹುತೇಕ ಜನಪರ ಹೋಟೆಲ್ಗಳು ಚಟುವಟಿಕೆ ನಡೆಸುತ್ತಿವೆ.


