ಬದಿಯಡ್ಕ: ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿ ನಿರ್ದೇಶನದ ಪ್ರಕಾರ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಚಿನ್ನ ಕಳ್ಳಸಾಗಣೆಗೆ ಆರೋಪಿಗಳನ್ನು ಕೇರಳ ಮುಖ್ಯಮಂತ್ರಿ ಸಂರಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಎದುರಾಗಿ ಬದಿಯಡ್ಕ ಪೋಲೀಸ್ ಠಾಣೆಯ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಯಿತು.
ಬೃಹತ್ ವಂಚನೆಗೆ ಸಂಬಂಧಿಸಿ ಸ್ವತಃ ಮುಖ್ಯಮಂತ್ರಿಗಳ ಕಾರ್ಯಾಲಯವೇ ಅಕ್ರಮಕ್ಕೆ ಕೈಜೋಡಿಸಿರುವುದು ಹೇಯಕರವಾಗಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಅವರು ಪ್ರತಿಭಟನೆ ಉದ್ಘಾಟಿಸಿ ಕರೆನೀಡಿದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಎಂ ನಿರ್ಚಾಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ ಮಾತನಾಡಿ, ಆರೋಪದಲ್ಲಿ ಭಾಗಿಗಳಾದ ಪ್ರತಿಯೊಬ್ಬರನ್ನೂ ಸ್ಥಾನಮಾನಗಳನ್ನು ಗ್ರಹಿಸದೆ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.
ಮಾಜಿ ಸದಸ್ಯ ಅಬ್ಬಾಸ್, ಕಾಸರಗೋಡು ಮಂಡಲ ಯೂತ್ ಕಾಂಗ್ರೆಸ್ ಅಧ್ಯಕ್ಷ ಮ್ಯಾಥ್ಯೂಸ್ ಮೊದಲಾದವರು ಮಾತನಾಡಿದರು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮ್ ಪ್ರಸಾದ್ ಮಾನ್ಯ ಸ್ವಾಗತಿಸಿ, ಉಪಾಧ್ಯಕ್ಷ ಪಿ.ಜಿ. ಜಗನ್ನಾಥ ರೈ ವಂದಿಸಿದರು.