HEALTH TIPS

ಭಾರತೀಯ ಆ್ಯಂಟಿಜೆನ್ ಕಿಟ್‌ಗೆ ಐಸಿಎಂಆರ್ ಅನುಮೋದನೆ

               ನವದೆಹಲಿ: ದೇಶೀಯ ಮೊದಲ ಆ್ಯಂಟಿಜೆನ್ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿದೆ.
          ಪ್ಯಾಥೋಕ್ಯಾಚ್​ ಕೊವಿಡ್​-19 ಆ್ಯಂಟಿಜೆನ್​ ರಾಪಿಡ್​ ಟೆಸ್ಟಿಂಗ್​ ಕಿಟ್​ ಎಂಬ ಹೆಸರಿನ ಈ ಕಿಟ್​ ಅನ್ನು ಭಾರತದಲ್ಲೇ ಅಭಿವೃದ್ಧಿಪಡಿಸಿದ್ದು, ಪ್ರತಿ ಕಿಟ್​ಗೆ 450 ರೂ.ನಂತೆ ಮಾರುಕಟ್ಟೆಯಲ್ಲಿ ದೊರೆಯಲಿದೆ.ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಆ್ಯಂಟಿಜೆನ್​ ಕಿಟ್​ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಅನುಮೋದನೆ ನೀಡಿದೆ. ಕೊರೊನಾ ಸೋಂಕು ಪತ್ತೆಗೆ ಈ ಕಿಟ್​ಗಳನ್ನು ಬಳಸಲಾಗುತ್ತದೆ.
             ರಾಷ್ಟ್ರದಲ್ಲಿನ ಕೊವಿಡ್​ ಪರೀಕ್ಷೆಯನ್ನು ಚುರುಕುಗೊಳಿಸಲು ಆರ್​ಆರ್​ಟಿ-ಪಿಸಿಆರ್​ ಜತೆಗೆ ಆ್ಯಂಟಿಜೆನ್​ ಆಧಾರಿತ ಪರೀಕ್ಷಾ ಸಾಧನಗಳನ್ನೂ ಬಳಸಲಾಗುತ್ತಿದೆ. ಆರ್​ಆರ್​ಟಿ-ಪಿಸಿಆರ್​ ಟೆಸ್ಟಿಂಗ್​ಗೆ ಹೋಲಿಸಿದರೆ ಆ್ಯಂಟಿಜೆನ್​ ಪರೀಕ್ಷೆಯಲ್ಲಿ ಕೇವಲ 30 ನಿಮಿಷದಲ್ಲಿ ಫಲಿತಾಂಶ ಬರುತ್ತದೆ ಎಂದು ವಿವರಿಸಿದ್ದಾರೆ. ಕೊವಿಡ್​-19 ಪಿಡುಗನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಲೇ ಇದೆ. ವಿದೇಶಿ ಕಿಟ್​ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸುಲಭ ದರದ ಆರ್​ಟಿ-ಪಿಸಿಆರ್​ ಟೆಸ್ಟ್​ ಅನ್ನು ಬಿಡುಗಡೆ ಮಾಡಿದ ಬಳಿಕ ಕೊರೊನಾ ಸೋಂಕಿನ ಪರೀಕ್ಷೆಯನ್ನು ತ್ವರಿತಗೊಳಿಸಲು ಕಾಂಪ್ಯಾಕ್ಟ್​ ಎಕ್ಸ್​ಎಲ್​ ಎಂಬ ಕಿಟ್​ ಅನ್ನು ಬಿಡುಗಡೆ ಮಾಡಿದೆವು. ಮೊದಲ ಆ್ಯಂಟಿಜೆನ್​ ಟೆಸ್ಟಿಂಗ್​ ಕಿಟ್​ ಅನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ನ ಎಂಡಿ ಹಸ್ಮುಖ್​ ರಾವಲ್​ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries