HEALTH TIPS

ಮನೆಗಳಲ್ಲಿ ಮಹಿಳೆಯರ, ಮಕ್ಕಳ ಮೇಲೆ ದೌರ್ಜನ್ಯ: ವಾಟ್ಸ್ ಅಪ್ ಮೂಲಕ ದೂರು ಸಲ್ಲಿಸಬಹುದು

      
             ಕಾಸರಗೋಡು: ಮನೆಗಳಲ್ಲಿ ಮಹಿಳೆಯರ, ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ, ಈ ಬಗ್ಗೆ ದೂರು ಸಲ್ಲಿಸಲು ವಾಟ್ಸ್ ಆಪ್ ಸೌಲಭ್ಯ ಸಿದ್ಧಪಡಿಸಲಾಗಿದೆ. ಪೀಡಿತ ಮಹಿಳೆಯರಿಗೆ, ಮಕ್ಕಳಿಗೆ ಸೂಕ್ತ ಕಾನೂನು ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆಯೊಂದಿಗೆ ಕೈಜೋಡಿಸಿ ಈ ಸೌಲಭ್ಯ ಒದಗಿಸಲಾಗುತ್ತಿದೆ. 
           "9400080292" ಎಂಬ ನಂಬ್ರಕ್ಕೆ ವಾಟ್ಸ್ ಆಪ್ ಮೂಲಕ ಯಾ ಟೆಕ್ಸಟ್ ಮೆಸೇಜ್ ರೂಪದಲ್ಲೋ ದೂರು ದಾಖಲಿಸಬಹುದಾಗಿದೆ. "1098" ಎಂಬ ಚೈಲ್ಡ್ ಲೈನ್ ನಂಬ್ರ,"181" ಎಂಬ ಮಹಿಳೆಯರ ಮಿತ್ರ ಹೆಲ್ಪ್ ಲೈನ್ ನಂಬ್ರಗಳ ಮೂಲಕ ದೂರು ದಾಖಲಿಸಬಹುದು.     
           ಏ.11ರಂದು ಈ ಯೋಜನೆ ಆರಂಭಗೊಂಡಿದ್ದು, ಕಾನೂನು ಸಂರಕ್ಷಣೆ ಒದಗಿಸಲು ಜಿಲ್ಲಾ ಮಿಮೆನ್ ಪೆÇ್ರಟೆಕ್ಷನ್ ಕಚೇರಿ ಸಜ್ಜಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ತಾಂತ್ರಿಕ ಸೆಲ್ ಸಹಾಯ ಒದಗಿಸುತ್ತಿದೆ. 
          ಲಾಕ್ ಡೌನ್ ಆದೇಶ ಜಾರಿಗೊಂಡಿದ್ದ ಆರಂಭ ಹಂತದಲ್ಲಿ ಈ ಮೂಲಕ ದೂರುಗಳು ಕಡಿಮೆಯಿದ್ದರೂ, ನಂತರದ ದಿನಗಳಲ್ಲಿ ದೂರುಗಳ ಸಂಖ್ಯೆ ಅಧಿಕಗೊಂಡಿವೆ. ಯು.ಎನ್.ವಿಮೆನ್ ಕೌನ್ಸಿಲ್ , ರಾಷ್ಟ್ರೀಯ ಮಹಿಳಾ ಆಯೋಗ ಲಾಕ್ ಡೌನ್ ಅವಧಿಯಲ್ಲಿ ವಯೋಮಿತಿಯ ಭೇದವಿಲ್ಲದೆ ಮನೆಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಅಧಿಕಗೊಳ್ಳುತ್ತಿರುವುದಾಗಿ ವರದಿ ಮಾಡಿವೆ. 
       ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಮೂರು ಕೇಸುಗಳು ದಾಖಲಾಗಿವೆ ಎಂದು ಜಿಲ್ಲಾ ವಿಮೆನ್ ಪೆÇ್ರಟೆಕ್ಷನ್ ಅಧಿಕಾರಿ ಎಂ.ವಿ.ಸುನಿತಾ ತಿಳಿಸಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries