HEALTH TIPS

ಸಂಪರ್ಕ ಕಾರಣದ ಕೋವಿಡ್ ಹೆಚ್ಚಳ-ಸೋಂಕು ಮೂಲ ಪತ್ತೆಯಾಗದ ಪ್ರಮಾಣದಲ್ಲೂ ಏರಕೆ

   
          ತಿರುವನಂತಪುರ: ರಾಜ್ಯದಲ್ಲಿ ಭಾನುವಾರ ಕೊರೊನಾ ಸೋಂಕು ಪತ್ತೆಯಾದವರಲ್ಲಿ ಇದೇ ಮೊದಲ ಬಾರಿಗೆ 800 ಕ್ಕೂ ಮೀರಿದ್ದು ಈ ಪೈಕಿ 600ಕ್ಕಿಂತಲೂ ಹೆಚ್ಚು ಸೋಂಕಿತರಿಗೆ ಸಂಪರ್ಕ ಕಾರಣ ರೋಗ ಬಾಧಿಸಿದೆಯೆಂಬುದು ಆತಂಕಕಾರಿಯಾಗಿದೆ.
    ಭಾನುವಾರ ಒಟ್ಟು 821 ಕೋವಿಡ್ ಸೋಂಕಿತರನ್ನು ಪತ್ತೆಹಚ್ಚಲಾಗಿದ್ದು ಈ ಪೈಕಿ 629 ಮಂದಿಗಳಿಗೂ ಬೇರೊಬ್ಬರಿಂದ ಸಂಪರ್ಕ ಕಾರಣ ವೈರಸ್ ಹರಡಿ ಸೋಂಕಿಗೊಳಗಾದವರು. ಜೊತೆಗೆ ಇವರಲ್ಲಿ 43 ಮಂದಿಗಳ ರೋಗ ಮೂಲವನ್ನು ಪತ್ತೆಹಚ್ಚಲಾಗದಿರುವುದೂ ಕಳವಳಕ್ಕೆ ಕಾರಣವಾಗಿದೆ. ನಿನ್ನೆ ಅತ್ಯಂತ ಹೆಚ್ಚು ಸೋಂಕಿತರಾಗಿರುವುದು ತಿರುವನಂತಪುರದ ಕರಾವಳಿ ಪ್ರದೇಶದವರಾಗಿದ್ದಾರೆ.
                ತಿರುವನಂತಪುರಂನಲ್ಲಿ ಅತೀ ಹೆಚ್ಚು:
      ತಿರುವನಂತಪುರದಲ್ಲಿ ನಿನ್ನೆ  222 ಜನರಿಗೆ ಕೋವಿಡ್ -19 ದೃಢಪಟ್ಟಿದೆ. ಈ ಪೈಕಿ 203 ಮಂದಿಗಳಿಗೆ ಸಂಪರ್ಕ ಕಾರಣ ಕೋವಿಡ್ ಬಾಧಿಸಿದೆ. ವರದಿಗಳ ಪ್ರಕಾರ, ನಿನ್ನೆಯ ಎಲ್ಲಾ ಕೋವಿಡ್ ಪ್ರಕರಣಗಳಲ್ಲಿ ಶೇ.91 ಸಂಪರ್ಕದ ಮೂಲಕ ಎನ್ನುವುದೂ ಗಂಭೀರವಾದುದಾಗಿದೆ. ತಿರುವನಂತಪುರಂನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಹಿಂದೆ ಇಲ್ಲಿ ಎರಡು ಸ್ಥಳಗಳಲ್ಲಿ ಸಾಮಾಜಿಕ ವಿಸ್ತರಣೆ ನಡೆದಿರುವುದು ದೃಢಪಟ್ಟಿದೆ.
                ಜಿಲ್ಲೆಯ ಪ್ರಕಾರ ಇತರ ಸಂಪರ್ಕ ಪ್ರಕರಣಗಳು:
      ಎರ್ನಾಕುಳಂ ಜಿಲ್ಲೆಯಲ್ಲಿ 84, ಪಾಲಕ್ಕಾಡ್ ಜಿಲ್ಲೆಯಲ್ಲಿ 70, ಕೊಲ್ಲಂ ಜಿಲ್ಲೆಯಲ್ಲಿ 61, ಕಾಸರಗೋಡು ಜಿಲ್ಲೆಯಲ್ಲಿ 48, ಆಲಪ್ಪುಳ ಜಿಲ್ಲೆಯಲ್ಲಿ 34, ಇಡುಕಿ ಜಿಲ್ಲೆಯಲ್ಲಿ 28, ತ್ರಿಶೂರ್ ಜಿಲ್ಲೆಯಲ್ಲಿ 27, ಕೋಝಿಕ್ಕೋಡ್  ಜಿಲ್ಲೆಯಲ್ಲಿ 26, ಪತ್ತನಂತಿಟ್ಟು ಜಿಲ್ಲೆಯಲ್ಲಿ 24 ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ 12 ಜನರಿಗೆ ಸಂಪರ್ಕ ಕಾರಣ ಸೋಂಕಿಗೊಳಗಾದರು.
                 ವಿದೇಶಿಯರು 110:
   ಭಾನುವಾರ ಸೋಂಕು ದೃಢಪಟ್ಟವರಲ್ಲಿ 110 ಮಂದಿ  ವಿದೇಶಗಳಿಂದ ಮತ್ತು 69 ಪ್ರಕರಣಗಳು ಇತರ ರಾಜ್ಯಗಳಿಂದ ಬಂದವರದ್ದಾಗಿವೆ.  ಸಂಪರ್ಕದ ಮೂಲಕ 629 ಜನರಿಗೆ ಸೋಂಕು ತಗುಲಿತು. ಅವುಗಳಲ್ಲಿ 43 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಹದಿಮೂರು ಆರೋಗ್ಯ ಕಾರ್ಯಕರ್ತರು ಸಹ ಸೋಂಕಿಗೊಳಗಾಗಿದ್ದಾರೆ. ತಿರುವನಂತಪುರಂ ಜಿಲ್ಲೆಯಲ್ಲಿ ಆರು, ಎರ್ನಾಕುಳಂ ಜಿಲ್ಲೆಯಲ್ಲಿ ನಾಲ್ಕು, ಇಡುಕ್ಕಿ, ಕೋಝಿಕ್ಕೋಡ್, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಂದು ರೋಗ ಸಂಪರ್ಕ ಕಾರಣದಿಂದ ಎಂದು ಪತ್ತೆಹಚ್ಚಲಾಗಿದೆ.
           ರೋಗ ಮುಕ್ತರಾದವರು:
    ಭಾನುವಾರ ತಿರುವನಂತಪುರಂ 222, ಎರ್ನಾಕುಳಂ 98, ಪಾಲಕ್ಕಾಡ್ 81, ಕೊಲ್ಲಂ 75, ತ್ರಿಶೂರ್ 61 ಕಾಸರಗೋಡು 57, ಆಲಪುಳ 52, ಇಡುಕ್ಕಿ 49, ಪತ್ತನಂತಿಟ್ಟು 35, ಕೋಝಿಕ್ಕೋಡ್ 32, ಮಲಪ್ಪುರಂ 25, ಕೋಟ್ಟಯಂ  20 ಮಂದಿ ರೋಗಮುಕ್ತರಾಗಿ ಮನೆಗೆ ತೆರಳಿದರು. 
            ನಿನ್ನೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 172 ಜನರಿಗೆ ರೋಗ ಇಲ್ಲವೆಮದು ಖಾತ್ರಿಯಾಗಿದೆ.  ಆಲಪ್ಪುಳ ಜಿಲ್ಲೆಯ 32 ಜನರು, ತಿರುವನಂತಪುರಂ ಜಿಲ್ಲೆಯ 25 ಜನರು (ಆಲಪ್ಪುಳ 1, ಕೊಲ್ಲಂ 1, ಪತ್ತನಂತಿಟ್ಟು 1), ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ 21 ಜನರು, ಪತ್ತನಂತಿಟ್ಟು ಜಿಲ್ಲೆಯಿಂದ 16 ಜನರು, ಕಾಸರಗೋಡು ಜಿಲ್ಲೆಯ 12 ಜನರು ಮತ್ತು ಪಾಲಕ್ಕಾಡ್ ಜಿಲ್ಲೆಯ 11 ಜನರು ಮುಕ್ತರಾದರು.
                24 ಗಂಟೆಗಳಲ್ಲಿ 18,267 ಮಾದರಿಗಳನ್ನು ಪರೀಕ್ಷೆ: 
       ಕಳೆದ 24 ಗಂಟೆಗಳಲ್ಲಿ 18,267 ಮಾದರಿಗಳನ್ನು ಪರೀಕ್ಷಿಸಲಾಯಿತು. ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕಣ್ಗಾವಲು, ಪೂಲ್ಡ್ ಸೆಂಟಿನೆಲ್, ಸಿ ಬಿ ಎಸ್ ಟಿ, ಟ್ರುನಾಟ್, ಸಿಎಎ ಮತ್ತು ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 5,32,505 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. 5060 ಮಾದರಿಗಳ ಪರೀಕ್ಷಾ ಫಲಿತಾಂಶಗಳು ಇನ್ನೂ ಬರಬೇಕಿದೆ.  ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಮಿಕರು ಮತ್ತು ಸೆಂಟಿನೆಲ್ ಕ್ವಾರಂಟೈನ್ ಭಾಗವಾಗಿ ಹೆಚ್ಚು ಸಾಮಾಜಿಕ ಸಂಪರ್ಕ ಹೊಂದಿರುವ ಜನರಿಂದ ಆದ್ಯತೆಯ ಗುಂಪುಗಳಿಂದ ಸಂಗ್ರಹಿಸಲಾದ 96,288 ಮಾದರಿಗಳಲ್ಲಿ 9,15,66 ಮಾದರಿಗಳು ನಕಾರಾತ್ಮಕವಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries