ಕಾಸರಗೋಡು: ಕೆಲವೊಮ್ಮೆ ಘಟನಾವಳಿಗಳು ನಮ್ಮನ್ನು ಎಷ್ಟು ಚಕಿತಗೊಳಿಸುತ್ತವೆಯೆಂದರೆ ವಿಧಿಯಾಟವೆಂಬ ಉದ್ಗಾರದಲ್ಲಿ ಕೊನೆಯಾಗಿಸಿ ಅಂತರ್ಮುಖಿಗಳಾಗಬೇಕಾಗುತ್ತದೆ. ಅಂತಹದೊಂದು ಘಟನೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿ ತಂದೆಯೊಬ್ಬರು ಊರಲ್ಲಿ, ಅವರ ಪುತ್ರ ಕೊಲ್ಲಿ ರಾಷ್ಟ್ರದಲ್ಲಿ ಒಂದೇ ದಿನ ಮೃತಪಟ್ಟ ನೋವಿನ ಘಟನೆ ನಡೆದಿದೆ. ಉದುಮ ಸಮೀಪದ ಮುಲ್ಲಂಚೆರಿಬಟ್ಯಂಕೋಡ್ ನ ಜೋಯ್ ಅಂಬು(80) ಅವರ ಪುತ್ರ ಬಿ.ಕುಂಞÂ ರಾಮನ್ (45) ಎಂಬವರು ಮೃತಪಟ್ಟ ದುರ್ದೈವಿಗಳು. ಕಳೆದ 25 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಜೋಯ್ ಅಂಬು ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರ ಮರಣೋತ್ತರ ಸಂಸ್ಕಾರಗಳನ್ನು ಪೂರೈಸಿದ ಸಂಬಂಧಿಕರು ಮನೆಗೆ ತೆರಳುತ್ತಿರುವಂತೆ ರಾತ್ರಿ ವೇಳರ ಅವರ ಪುತ್ರ ಮರಣಹೊಂದಿರುವ ಸುದ್ದಿಯೂ ಲಭ್ಯವಾಗಿ ಅಕ್ಷರಶಃ ಮಾತುಗಳಿಲ್ಲದೆ ಮ್ಲಾನರಾಗಬೇಕಾದ ಸ್ಥಿತಿ ನಿರ್ಮಾಣವಾಯಿತು.
ಮಸ್ಕತ್ ನ ರಾಸ್ ಅಲ್ ಖೈಮಾದ ಅಲ್ ಖಸ್ರ್ ಖಾದಿರ್ ಆಸ್ಪತ್ರೆಯಲ್ಲಿ ಕುಂಞÂ ರಾಮನ್ ಅನಾರೋಗ್ಯದ ಚಿಕಿತ್ಸೆಯಲ್ಲಿದ್ದವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಹೊಟ್ಟೆಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಗಲ್ಪ್ ನಲ್ಲಿ ಕೆಲಸ ಕಳೆದುಕೊಂಡಿದ್ದ ಕುಂಞÂರಾಮನ್ ಬಡತನದ ಕಾರಣ ವಿಸಿಟಿಂಗ್ ವೀಸಾದಲ್ಲಿ ಮತ್ತೆ ಗಲ್ಫ್ ಗೆ ತೆರಳಿ ಹೊಸ ಉದ್ಯೋಗವನ್ನು ಹುಡುಕುತ್ತಿದ್ದರು. ಏತನ್ಮಧ್ಯೆ, ರೋಗವು ಉಲ್ಬಣಗೊಂಡು ಅಲ್ಲಿಯಾಸ್ಪತ್ರೆಗೆ ದಾಖಲಾಗಿದ್ದರು. Àುನ್ಹಿರಾಮನ್ ಮೃತದೇಹವನ್ನು ವಾಪಸ್ ಕರತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಚೋಯ್ ಅಂಬು ಪತ್ನಿ ರೋಹಿಣಿ, ಪುತ್ರಿ ನಾರಾಯಣಿ, ಪುತ್ರರಾದ ಗೋಪಾಲನ್, ಮೋಹನನ್ ಮತ್ತು ರಾಜೀವನ್. ಅಳಿಯ: ಬಾಲಕೃಷ್ಣನ್ (ನೆಚಿಪಾಡುಪ್ಪು), ಶ್ರೀಜಾ (ಕೊಟ್ಟಪರ), ಶ್ರೀಜಾ (ಮುಕ್ಕುನೋತು)ರನ್ನು ಅಗಲಿದ್ದರೆ, ಕುಂಞÂ ರಾಮನ್ ಅವರು ಪತ್ನಿ ಸಂಗೀತ (ಕಳಿಂಗೋಮ್), ಪುತ್ರಿ ರಸಿಕ (ವಿದ್ಯಾರ್ಥಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ) ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


