ಕಾಸರಗೋಡು: ಜನಜೀವನವನ್ನು ಏಕಾಏಕಿ ಬುಡಮೇಲು ಮಾಡಿ, ಕರಾಳ ಪ್ರಭಾವ ಬೀರಿರುವ ಕೋವಿಡ್ ಬಾಧೆ ಜನತೆಯ ಅಹವಾಲು ಆಲಿಸಲು ಇಲ್ಲಿ ತಡೆಯಾಗಲಿಲ್ಲ. ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಅವರು ಆನ್‍ಲೈನ್ ಮೂಲಕ ವೆಳ್ಳರಿಕುಂಡ್ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ನಡೆಸಿದರು.
ಒಟ್ಟು 54 ದೂರುಗಳು ಅದಾಲತ್‍ನಲ್ಲಿ ಪರಿಶೀಲನೆಗೊಂಡುವು. ಜಿಲ್ಲಾ„ಕಾರಿ ನೇರವಾಗಿ 12 ದೂರುಗಳನ್ನು ಪರಿಶೀಲಿಸಿದರು. ಜಿಲ್ಲಾ„ಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಅದಾಲತ್ ಆನ್‍ಲೈನ್ ಸೌಲಭ್ಯಗಳೊಂದಿಗೆ ನಡೆಯಿತು. ಹೆಚ್ಚುವರಿ ದಂಡನಾ„ಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾ„ಕಾರಿಗಳಾದ ಸಜಿ ಎಫ್.ಮೆಂಡನ್, ವಿ.ಜೆ.ಶಂಸುದ್ದೀನ್, ಎಲ್.ಐ.ಸಿ. ಜಿಲ್ಲಾ ಅ„ಕಾರಿ ಕೆ.ರಾಜನ್, ವೆಳ್ಳರಿಕುಂಡ್ ತಹಸೀಲ್ದಾರ್ ಕುಂಞÂಕಣ್ಣನ್, ಕೃಷಿ ಸಹಾಯಕ ನಿರ್ದೇಶಕ ಎಸ್.ಲಕ್ಷ್ಮಿ ದೇವಿ, ಉದ್ಯೋಗ ಅಧಿಕಾರಿ ಕೆ.ಗೀತಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
ಮುಂದೆ ನಡೆಯುವ ತಾಲೂಕು ಮಟ್ಟದ ಅದಾಲತ್‍ಗಳು :
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಮುಂದೆ ನಡೆಯುವ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್‍ಗಳ ದಿನಾಂಕ ಇಂತಿವೆ. ಆ.1ರಂದು ಮಂಜೇಶ್ವರ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್, ಆ.14ರಂದು ಕಾಸರಗೋಡು ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ನಡೆಯಲಿವೆ ಎಂದು ಜಿಲ್ಲಾ„ಕಾರಿ ತಿಳಿಸಿದರು. ದೂರುಗಳಿದ್ದಲ್ಲಿ ಯಥಾಕ್ರಮ ಜು.26 ಮತ್ತು ಆ.10ರ ಸಂಜೆ 5 ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು.


