ಕಾಸರಗೋಡು: ಜುಲೈ 20ರಂದು ರಾತ್ರಿ 11.30 ವರೆಗಿನ ಅವಧಿಯಲ್ಲಿ ಪೆÇಳಿಯೂರಿನಿಂದ ಕಾಸರಗೋಡು ವರೆಗೆ ರಾಜ್ಯದ ಕರಾವಳಿಯಲ್ಲಿ 3.5 ರಿಂದ 3.8 ಮೀ. ವರೆಗೆ ಎತ್ತರದ ಪ್ರಬಲ ತೆರೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿ ಗತಿ ಅಧ್ಯಯನ ಕೇಂದ್ರ (ಐ.ಎನ್.ಸಿ.ಒ.ಐ.ಎಸ್.) ತಿಳಿಸಿದೆ. ಈ ಸೂಚನೆಯ ಹಿನ್ನೆಲೆಯಲ್ಲಿ ಕಡಲತೀರದ ಜಿಲ್ಲೆಗಳಲ್ಲಿ ವಿಶೇಷ ಜಾಗರೂಕತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಕಡಲ್ಕೊರೆತ ತೀವ್ರ ವಾಗಿರುವ ಪ್ರದೇಶಗಳಲ್ಲಿ, ಕಡಲ ಕಿನಾರೆಗಳ ಬಳಿ ಮನೆಗಳಲ್ಲಿ ವಾಸಿಸುತ್ತಿರುವ ಮಂದಿ ಬೇರೆಡೆಗೆ ಸ್ಥಳಾಂತಗೊಳ್ಳುವಂತೆ ಸಲಹೆ ಮಾಡಲಾಗಿದೆ. ಮೀನುಗಾರಿಕೆ ಸಲಕರಣೆಗಳ ಸುರಕ್ಷತೆಯನ್ನು ಮೀನುಗಾರರು ಖಚಿತಗೊಳಿಸಬೇಕು ಎಂದು ತಿಳಿಸಲಾಗಿದೆ.


