HEALTH TIPS

ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ಉತ್ತಮ ಸಾಧನೆ

 
         ಪೆರ್ಲ:  ಕೇರಳ ಹೈಯರ್ ಸೆಕೆಂಡರಿ ಫಲಿತಾಂಶ ಪ್ರಕಟವಾಗಿದ್ದು ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯು ಉತ್ತಮ ಸಾಧನೆ ಮಾಡಿದೆ.
            ಪರೀಕ್ಷೆ ಬರೆದ 169 ವಿದ್ಯಾರ್ಥಿಗಳಲ್ಲಿ 153 ಮಂದಿ ತೇರ್ಗಡೆ ಗೊಂಡು ಉನ್ನತ ಶಿಕ್ಷಣಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಕವಿತಾ ಎಸ್ ಪೈ 1200 ರಲ್ಲಿ 1200 ಅಂಕಗಳಿಸಿ ರಾಜ್ಯದಲ್ಲೇ ಅಭೂತಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿಗೆ ಸೇರಿದ್ದಾರೆ. ವಾಣಿಜ್ಯ ವಿಭಾಗದ ಪ್ರಭೇಶ್ ಕುಮಾರ್ (1164), ಸಿ.ಎಂ.ಕದೀಜತ್ ಶಹಾಮ(1128), ಕಲಾ ವಿಭಾಗದ ಅನೀನ ವಿ.ಜಾರ್ಜ್(1145) ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಆಶಿಮಾ, ಚೈತ್ರಾ,  ಆಯಿಷಾ ಶಹೀಮಾ ಫಿಧಾ,ರಮ್ಯಾ, ಅನನ್ಯಾ, ಅಶ್ವಿನಿ, ದೇವಿ ಪ್ರಸಾದ್, ಮನೀಶ್ ಕುಮಾರ್ ಯು, ಸೌರಬ್ ಕೆ. ಎಂಬೀ ವಿದ್ಯಾರ್ಥಿಗಳು 5 ವಿಷಯದಲ್ಲಿ ಎ ಪ್ಲಸ್ ಗ್ರೇಡ್ ಪಡೆದು ಸಾಧನೆ ಮಾಡಿರುತ್ತಾರೆ.
       ಸಂಪೂರ್ಣ ಅಂಕಗಳಿಸಿರುವ ಕವಿತಾ ಎಸ್.ಪೈ ಬಳ್ಳಂಬೆಟ್ಟು ಶಿವಶಂಕರ ಪೈ ಹಾಗು ವಿಜಯಲಕ್ಷ್ಮಿ ದಂಪತಿ ಪುತ್ರಿಯಾಗಿದ್ದಾಳೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ, ಮೆನೇಜರ್ ಮಿತ್ತೂರ್ ಪುರುಷೋತ್ತಮ ಭಟ್, ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ, ಪಿಟಿಎ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಶಿಕ್ಷಕ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries