ನವದೆಹಲಿ: ಕೊರೋನಾಗೆ ಲಸಿಕೆ ಬಂದ ನಳಿಕ ಭಾರತದಲ್ಲಿ ಕೊರೋನಾ ಹಾವಳಿ ಕಡಿಮೆಯಾಗುವುದೆ? ಇದು ಜೂನ್ ನಲ್ಲಿ ಕೋವಿಡ್ ಗೆ ಸಂಬಂಧಿಸಿ ಭಾರತದಲ್ಲಿಅತಿ ಹೆಚ್ಚು ಜನ ಗೂಗಲ್ ಮಾಡಿರುವ ಪ್ರಶ್ನೆ! ಗೂಗಲ್ ಸರ್ಚ್ ಪ್ರಕಾರ ಮೇಗೆ ಹೋಲಿಸಿದರೆ ಕೊರೋನಾ ಕುರಿತ ಒಟ್ಟಾರೆ ಹುಡುಕಾಟ ಜೂನ್ ನಲ್ಲಿ ಕಡಿಮೆಯಾಗಿದೆ.
ಕೊರೋನಾ ದೂರವಿರಿಸಲು ಯಾವ ಬಗೆಯ ಮಾಸ್ಕ್ ಬಳಸಬೇಕು? ನ್ಯೂಜಿಲ್ಯಾಂಡ್ ಕೊರೋನಾವನ್ನು ಹೇಗೆ ನಿಯಂತ್ರಿಸಿದೆ? ಕೊರೋನಾ ಲಕ್ಷಣ ಎಷ್ಟು ದಿನಗಳ ನಂತರ ಕಾಣಿಸುತ್ತದೆ? ಕೊರೋನಾದಿಂದ ಜಗತ್ತಿನ ವಿವಿಧೆಡೆ ಎಷ್ಟು ಸಾವು ಸಂಭವಿಸಿದೆ? ಈ ಎಲ್ಲಾ ವಿವಿಧ ಪ್ರಶ್ನೆಗಳನ್ನು ಗೂಗಲ್ ಮಾಡಲಾಗಿದೆ.
ಜೂನ್‍ನಲ್ಲಿ ನಡೆದ ಕೊರೋನಾ ಕೇಂದ್ರಿತ ಸರ್ಚ್ ನಲ್ಲಿ ಮೇ ತಿಂಗಳಿಗೆ ಹೋಲಿಸಿದರೆ ಶೇ. 66 ರಷ್ಟು ಕುಸಿತವಾಗಿದೆ. ಕೊರೋನಾ ಕುರಿತು ಟಾಪ್ ಟ್ರೆಂಡಿಂಗ್ ಸರ್ಚ್ ಎಂದರೆ "ಕೊರೋನಾ ಲಸಿಕೆ" ಹಾಗೂ "ಕೊರೋನಾವೈರಸ್ ನ್ಯೂಸ್" ಆಗಿದೆ. ಅಲ್ಲದೆ "ಪತಂಜಲಿ ಕೊರೋನಾ ಲಸಿಕೆ", "ಗ್ಲೋಬಲ್ ವ್ಯಾಕ್ಸಿನ್ ಶೃಂಗಸಭೆ", "ಡೆಕ್ಸಮೆಥಾಸೋನ್"ಇವೆಲ್ಲವೂ ಜೂನ್‍ನಲ್ಲಿ ಲಸಿಕೆ ಸಂಬಂಧಿತ ಹುಡುಕಾಟಗಳಾಗಿವೆ ಎಂದು ಗೂಗಲ್ ತಿಳಿಸಿದೆ. ಜೂನ್‍ನಲ್ಲಿ ಕೊರೋನಾವೈರಸ್ ಕುರಿತು ಗೋವಾ ಹಾಗೂ ದೆಹಲಿಯಲ್ಲಿ ಅತಿ ಹೆಚ್ಚು ಸಚಿರ್ಂಗ್ ನಡೆದಿದೆ. ಅಲ್ಲದೆ ಕೇಂದ್ರಾಡಳಿತ ಪ್ರದೇಶ ಚಂಡೀಘರ್ ನಲ್ಲಿ ಸಹ ಸಾಕಷ್ಟು ಜನ ಕೊರೋನಾ ಸಂಬಂಧಿತ ಗೂಗಲ್ ಹುಡುಕಾಟ ನಡೆಸಿದ್ದಾರೆ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಜೂನ್‍ನಲ್ಲಿ ದೇಶದ ಟಾಪ್ ಟ್ರೆಂಡಿಂಗ್ ವಿಷಯವಾಗಿದ್ದರು. ಇದಲ್ಲದೆ ಸೂರ್ಯಗ್ರಹಣ, ಫಾದರ್ಸ್ ಡೇ ಸಹ ಸಚಿರ್ಂಗ್ ನ ಇತರೆ ವಿಷಯಗಳಾಗಿದೆ.


