ಕಾಸರಗೋಡು: ಜಿಲ್ಲೆಯಲ್ಲೇ ಅತಿ ಉದ್ದದ ಹಾಗೂ ಮಲಬಾರ್ ವಲಯದಲ್ಲಿ ಅತೀ ಎತ್ತರದ ಸೇತುವೆಗಳು ಶನಿವಾರ ಲೋಕಾರ್ಪಣೆಗೊಂಡವು.
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡ ಈ ಎರಡು ಮಹತ್ವಾಕಾಂಕ್ಷಿ ಯೋಜನೆ ಕೊನೆಗೂ ಸಾಕಾರಗೊಂಡಿದ್ದು ಲೋಕೋಪಯೋಗಿ ಇಲಾಖೆಯ ಹೆಮ್ಮೆಗೆ ಗರಿ ಮೂಡಿಸಿದೆ.
ಲೋಕೋಪಯೋಗಿ ಇಲಾಖೆಯ ಸೇತುವೆಗಳ ವಿಭಾಗ ಜಿಲ್ಲೆಯಲ್ಲಿ 49,85,25,138 ರೂ.ಗಳ ನಿರ್ಮಾಣ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿತ್ತು. ಈ ಯೋಜನೆಯ ಪ್ರಮುಖ ನಿರ್ಮಾಣಗಳಾದ ಜಿಲ್ಲೆಯ ಅತಿ ಉದ್ದದ ಸೇತುವೆಯೆನಿಸಿದ ಕೊಟ್ಟಪುರಂ ಸೇತುವೆ ಮತ್ತು ಮಲಬಾರ್ ವಲಯದಲ್ಲಿ ಅತಿ ಎತ್ತರವಾದ ಅಯ್ಯಕಡವು ಸೇತುವೆ ಕಾಮಗಾರಿ ಪೂರ್ತಿಗೊಂಡು ನಿನ್ನೆ ಸಮರ್ಪಿಸಲ್ಪಟ್ಟಿತು.
ಈ ಹಿಂದಿನ ವರ್ಷಗಳಲ್ಲಿ ಮಂಜೂರಾಗಿದ್ದ ವಿದ್ಯಾಗಿರಿ ಸೇತುವೆ, ಕೊಟ್ಟಾಪುರಂ ಸೇತುವೆ, ಪೈನಿಕಾರ ಸೇತುವೆ, ಕೊರತಿನ್ ಕುಂಡ್ ಸೇತುವೆ, ಕಣ್ಣಂಕೈ ಸೇತುವೆ, ಮುಲ್ಲಾಚೇರಿ ಸೇತುವೆ, ಅಯಾಮ್ ಕಡವು ಸೇತುವೆ ನಿರ್ಮಾಣ ಪೂರ್ಣಗೊಂಡು ಸಾರ್ವಜನಿಕರಿಗೆ ತೆರೆಯಲಾಗಿದೆ. ತ್ರಿಕ್ಕರಿಪುರ ಕ್ಷೇತ್ರದ ಹತ್ತು ಸೇತುವೆಗಳು, ತೊಟ್ಟುಕರ ಸೇತುವೆ, ಎನಿಚಲ್ ಸೇತುವೆ, ಪೆರುಪಟ್ಟಾ ಸೇತುವೆ, ಪಾಲತ್ತಾರ ಸೇತುವೆ, ರಾಮಂಚೀರ ಸೇತುವೆ, ಪೆÇೀತ್ತೆಕಂಡಂ ಸೇತುವೆ, ಉದುಮಾ ಕ್ಷೇತ್ರದ ಮುಲ್ಲಾಚೆರಿ ಸೇತುವೆ, ಪಲ್ಲತೂರು ಸೇತುವೆ, ಕಾಞಂಗಾಡ್ ಕ್ಷೇತ್ರದ ತಡಿಯನ್ ವಳಪ್ಪು ಸೇತುವೆಗಳ ನಿರ್ಮಾಣ ಕಳೆದ ಐದು ವರ್ಷಗಳಲ್ಲಿ ನಡೆದಿದೆ. ಮುಲ್ಲಚ್ಚೇರಿ ನದಿಗೆ ಅಡ್ಡಲಾಗಿ 3 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಮುಲ್ಲಚ್ಚೇರಿ ಸೇತುವೆಯನ್ನು ಕಳೆದ ಫೆಬ್ರವರಿಯಲ್ಲಿ ಉದ್ಘಾಟಿಸಿ ಸಂಚಾರಕ್ಕೆ ಅನುವುಮಾಡಲಾಗಿತ್ತು. ಪತ್ತನಮತ್ತಟ್ಟ ಮತ್ತು ಪಿಲಿಕೋಡ್ ಪಂಚಾಯಿತಿಗಳನ್ನು ಸಂಪರ್ಕಿಸುವ ಬಾಲನ್ ನದಿಗೆ ಅಡ್ಡಲಾಗಿರುವ ತೊಟ್ಟುಕ್ಕರ ಸೇತುವೆ ಮತ್ತು ದೇಲಂಪಾಡಿ ಪಂಚಾಯತ್ ಮತ್ತು ಕರ್ನಾಟಕದ ಈಶ್ವರಮಂಗಲ ಸಂಪರ್ಕಿಸುವ ಪಳ್ಳತ್ತೂರ್ ಸೇತುವೆ ಪೂರ್ಣಗೊಳ್ಳುವ ಹಂತದಲ್ಲಿದೆ. ಪಲ್ಲಚ್ಚೇರಿ ಸೇತುವೆಯನ್ನು ನಬಾರ್ಡ್ ಸಹಯೋಗದೊಂದಿಗೆ ನಿರ್ಮಿಸಲಾಯಿತು. ತೊಟ್ಟುಕ್ಕರ ಸೇತುವೆಯನ್ನು ರಾಜ್ಯ ಬಜೆಟ್ ಅನುದಾನದಲ್ಲಿ ನಿರ್ಮಿಸಲಾಗಿದೆ. ಇತರ ಸೇತುವೆಗಳು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರಿಸಲಾಗಿದೆ.


