ಕಾಸರಗೋಡು: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾರಂಭಿಸಿರುವ ಅಂಗನವಾಡಿ ಕೇಂದ್ರಗಳ ಯೋಜನೆಯ ಮೂರನೇ ಹಂತವು ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. 1348 ಅಂಗನವಾಡಿ ಪ್ರದೇಶಗಳಲ್ಲಿ ಹಾಲುಣಿಸುವ ತಾಯಂದಿರಿಗೆ ನವಜಾತ ಶಿಶುವಿನ ಆರೈಕೆ ಕುರಿತು ಆನ್‍ಲೈನ್ ತರಗತಿ ಈ ಯೋಜನೆಯಡಿ ಆಯೋಜನೆಗೊಳ್ಳಲಿದೆ.
ಕೋವಿಡ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮೊಬೈಲ್ ಆಧಾರಿತ ಜಾಗೃತಿ ಅಭಿಯಾನವನ್ನು ಮೊಬೈಲ್ ಫೆÇೀನ್‍ಗಳ ಮೂಲಕ ನಡೆಸಲಾಗುತ್ತಿದೆ.
ಫಲಾನುಭವಿಗಳ ಅನುಕೂಲಕ್ಕಾಗಿ ವಾಟ್ಸಾಪ್ ಫೆÇೀನ್ ಗುಂಪಿನ ಮುಖೇನ ವಿಡಿಯೋ ಕರೆಗಳು ಮತ್ತು ಕಾನ್ಫರೆನ್ಸ್ ಕರೆಗಳ ಮೂಲಕ ತರಗತಿಗಳನ್ನು ನಡೆಸಲಾಗುವುದು.
ಯೋಜನೆಯ ಮೊದಲ ಹಂತದಲ್ಲಿ ಕರೋನಾ ಮತ್ತು ಗರ್ಭಧಾರಣೆಯ ಬಗ್ಗೆ ಆನ್‍ಲೈನ್ ತರಗತಿಗಳನ್ನು ನಡೆಸಿತು ಮತ್ತು ಎರಡನೇ ಹಂತದಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ತಿಳಿಸಿದೆ.
ಲಾಕ್ ಡೌನ್ ಸಂದರ್ಭ ಫಲಾನುಭವಿಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಿ, ಪರಸ್ಪರ ಚರ್ಚೆಯ ಮೂಲಕ ಫಲಾನುಭವಿಗಳ ಅಗತ್ಯತೆಗಳ ಬಗ್ಗೆ ಜ್ಞಾನವನ್ನು ಒದಗಿಸಿ, ಪ್ರಯೋಜನಕಾರಿ ಮಾದರಿಗಳನ್ನು ಹಂಚಿಕೊಂಡಿದೆ. ಮತ್ತು ಜನಾಭಿಪ್ರಾಯ ಸಂಗ್ರಹಿಸಿ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಫಲಾನುಭವಿಗಳೊಂದಿಗೆ ಸಂಭಾವ್ಯ ಸಂವಹನ ನಡೆಸಲು ಅನುಕೂಲತೆ ನಿಖರಗೊಳಿಸಲಾಗಿದೆ. ಈ ಮೂಲಕ ಸಮುದಾಯತೆಯನ್ನು ಬಲಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅಂಗನವಾಡಿ ಕಾರ್ಯಕರ್ತರು ಯೋಜನೆಯ ಭಾಗವಾಗಿ ಸ್ತನ್ಯಪಾನ ಮಾಡುತ್ತಿರುವ 6505 ತಾಯಂದಿರನ್ನು ಪೋನ್ ಮೂಲಕ ಸಂಪರ್ಕಿಸಿ ಅಗತ್ಯದ ಸೂಚನೆಗಳನ್ನು ನೀಡಿರುವರು. ಪ್ರಸ್ತುತ, ಸುಮಾರು 5,000 ತಾಯಂದಿರನ್ನು ಸಂಪರ್ಕಿಸಲಾಗಿದೆ. ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ಸಿಡಿಪಿಒಗಳು, ಎನ್‍ಎನ್‍ಎಂ ಸಿಬ್ಬಂದಿ, ಐಸಿಡಿಎಸ್ ವಿಭಾಗದ ನೌಕರರು, ಆರೋಗ್ಯ ಇಲಾಖೆ ನೌಕರರು ಮತ್ತು ಸಂಸ್ಥೆಯ ಪ್ರತಿನಿಧಿಗಳ ಸಹಕಾರ ಈ ಯೋಜನೆಯ ಯಶಸ್ವಿಗೆ ಕಾರಣೀಭೂತವಾಗಿದೆ ಎಂದು ಐಸಿಡಿಎಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದರು.


