ಕಾಸರಗೋಡು: ಕೊರೊನಾ ಪ್ರತಿರೋಧ ಅಂಗವಾಗಿ ಕೆ ಎಸ್ ಆರ್ ಟಿ ಸಿ ನೌಕರರಿಗೆ ಕಾಸರಗೋಡು ಸರ್ವೀಸ್ ಸಹಕಾರಿ ಬ್ಯಾಂಕ್‍ನ ಹಾಗು ಕೆಎಸ್‍ಆರ್‍ಟಿ ಎಂಪೆÇ್ಲೀಯಿಸ್ ಅಸೋಸಿಯೇಶನ್‍ನ ನೇತೃತ್ವದಲ್ಲಿ ಫೇಸ್ ಶೀಲ್ಡ್ ವಿತರಣೆ ನಡೆಯಿತು.
ಕಾಸರಗೋಡು ಬಸ್ ನಿಲ್ದಾಣದಲ್ಲಿ ಬ್ಯಾಂಕ್ ಅಧ್ಯಕ್ಷ ಎಸ್.ಜೆ.ಪ್ರಸಾದ್ ವಿತರಿಸಿದರು. ಜಿಲ್ಲಾ ಟ್ರಾನ್ಸ್‍ಪೆÇೀರ್ಟ್ ಆಫೀಸರ್ ವಿ.ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಪಿ.ದಾಮೋದರನ್, ಕಾರ್ಯದರ್ಶಿ ಎಂ.ಸುಮತಿ, ಕೆಎಸ್‍ಆರ್‍ಟಿ ಎಂಪೆÇ್ಲೀಯಿಸ್ ಅಸೋಸಿಯೇಶನ್ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಮೋಹನ್ ಕುಮಾರ್ ಪಾಡಿ, ಪಿ.ವಿ.ಕುಂಞಂಬು, ಬಾಲಚಂದ್ರನ್, ಎಂ.ಸಂತೋಷ್, ಸಿ.ಬಾಲಕೃಷ್ಣನ್, ರಶ್ಮಿ ನಾರಾಯಣನ್ ಮೊದಲಾದವರು ಮಾತನಾಡಿದರು. ಎಂ.ಎಸ್.ಕೃಷ್ಣ ಕುಮಾರ್ ಸ್ವಾಗತಿಸಿ ಪಿ.ಜಯಚಂದ್ರನ್ ವಂದಿಸಿದರು.


