ಕಳೆದ ಮೂರು ವರ್ಷಗಳಿಂದ ಗಡಿನಾಡು ಕಾಸರಗೋಡಿನ ಜನಮನ ಧ್ವನಿಯಾಗಿ ಮೂಡಿಬರುತ್ತಿರುವ ಸಮರಸ ಸುದ್ದಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿದ್ದು, ಈ ಹಿನ್ನೆಲೆಯಲ್ಲಿ ನಿಮ್ಮದೇ ಸುದ್ದಿ ಬ್ಲಾಗ್ ನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಮುಂದಡಿಯಿಡುತ್ತಿದೆ.
ಸಮರಸ ಸುದ್ದಿ ಈಗಾಗಲೇ 3 ಲಕ್ಷದಷ್ಟು ದಿನನಿತ್ಯ ವೀಕ್ಷಕರನ್ನು ಹೊಂದಿದ್ದು 8 ವಾಟ್ಸ್ ಆಫ್ ಗುಂಪುಗಳಲ್ಲಾಗಿ ಸುದ್ದಿ ಪ್ರಸರಣ ನಡೆಯುತ್ತಿದೆ. ಅಲ್ಲದೆ ನಿಯಮಿತವಾಗಿ ಫೇಸ್ ಬುಕ್, ಟಿಟ್ಟರ್ ಸಹಿತ ಗೂಗಲ್ ಜಾಲತಾಣ, ಟೆಲಿಗ್ರಾಂ ಮೂಲಕವೂ ವೀಕ್ಷಿಸುತ್ತಿದ್ದಾರೆ. ಗಲ್ಪ್ ಎಡಿಶನ್ ಕೂಡಾ ಪ್ರಸರಣದಲ್ಲಿದೆ.
ಇದೀಗ ಸಮರಸ ಸುದ್ದಿ ಜಾಹೀರಾರು ವ್ಯವಸ್ಥಾಪಕ ಹುದ್ದೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ವಿವರಗಳು:
ಅಭ್ಯರ್ಥಿಗಳು ಕಾಸರಗೋಡು ನಿವಾಸಿಗಳಾಗಿರಬೇಕು.
ಕನ್ನಡ, ತುಳು, ಮಲೆಯಾಳಂ ಭಾಷೆಗಳಲ್ಲಿ ಸಂವಹನ ಸಾಮಥ್ರ್ಯ ಹೊಂದಿರಬೇಕು. ಇತರ ಸ್ಥಳೀಯ ಭಾಷೆಗಳು ಮಾತನಾಡಬಲ್ಲವರಾಗಿದ್ದರೆ ಆದ್ಯತೆ ಹೆಚ್ಚಿದೆ.
ಪ್ಲಸ್ ಟು ಉತ್ತೀರ್ಣರಾಗಿರಬೇಕು.
ಪ್ರಾಥಮಿಕ ಕಂಪ್ಯೂಟರ್ ಜ್ಞಾನ ಅಗತ್ಯ.
ಯಾವುದೇ ವಿವಾದಗಳು, ಕೋರ್ಟ್, ಪೋಲೀಸ್ ಪ್ರಕರಣಗಳಲ್ಲಿ ಭಾಗಿಗಳಾಗಿರಬಾರದು.
ಕನಿಷ್ಠ 18 ವರ್ಷ ಮೇಲ್ಪಟ್ಟ 62ರ ಒಳಗಿನ ಆಸಕ್ತ ವಯೋಮಾನದವರು ವಾಟ್ಸ್ ಆಫ್ ಸಂಖ್ಯೆ 7907952070, ಅಥವಾ 9567181417 ಸಂಖ್ಯೆಗೆ ಬಯೋಡಾಟಾ ವನ್ನು ಜು.28ರ ಮೊದಲುಸಂಜೆ 5ರ ಮೊದಲು ತಲಪುವಂತೆ ಕಳಿಸಬಹುದು.
ಆಯ್ಕೆಯಾದವರಿಗೆ ವೆಬಿನಾರ್ ಮೂಲಕ ಸಂದರ್ಶನ ಇರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಇತರ ಭತ್ತೆ, ವಿಮಾ ಸೌಲಭ್ಯ ಇರಲಿದೆ.


