ಉಪ್ಪಳ:ಉಪ್ಪಳದಲ್ಲಿ ಟವರ್ ನಿರ್ಮಾಣದ ಸಾಮಗ್ರಿ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಗೆ ಅಡ್ಡವಾಗಿ ಮಗುಚಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ವಾಹನ ಸಂಚಾರ ಅಸ್ತ ವ್ಯಸ್ತಗೊಂಡ ವಿದ್ಯಮಾನ ನಡೆಯಿತು.
ಮಂಗಳೂರು ಕಡೆಯಿಂದ
ಕಣ್ಣೂರು ಭಾಗಕ್ಕೆ ಟವರ್ ನಿರ್ಮಾಣ ಸಾಮಗ್ರಿ ಸಾಗಿಸುತ್ತಿದ್ದ ಲಾರಿ ಇಂದು ಬೆಳಗ್ಗೆ ಉಪ್ಪಳದಲ್ಲಿ ಮಗುಚಿ ಘಟನೆ ನಡೆದಿದೆ.ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.ಬೆಳಗ್ಗೆ ಒಂದಷ್ಟು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಉಪ್ಪಳದಿಂದ ಆಚೆಗಿನ ಮಂಜೇಶ್ವರ ಭಾಗದ ಜನರು ಕಾಸರಗೋಡಿನತ್ತ ನಿತ್ಯ ಬರುವವರಿಗೆ ಭಾರೀ ತೊಂದರೆ ಉಂಟಾಯಿತು. ಬಸ್ ಸಂಚಾರ ಸಹಿತ ಎಲ್ಲಾ ವಾಹನಗಳ ಸಂಚಾರ ಮೊಟಕುಗೊಂಡಿತು.

